ದೆಹಲಿ ಸಹಿತ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು ಅಭಿವೃದ್ಧಿ ಪರವಾಗಿರುವ ಕೆಲಸ ಮಾಡುತ್ತಿದೆ. ಇದನ್ನು ಸಹಿಸದ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿವೇಕಾನಂದ ಸಾಲಿನ್ಸ್, ದೆಹಲಿಯಲ್ಲಿ ಸಚಿವ ಮನೀಶ್ ಸಿಸೋಡಿಯಾ ಮೂಲಕ ಶಿಕ್ಷಣ ಕ್ರಾಂತಿ ನಡೆದಿದೆ. ಎಎಪಿ ಇಂದು ಅಭಿವೃದ್ಧಿ ರಾಜಕಾರಣದ ಮೂಲಕ ದೇಶದೆಲ್ಲೆಡೆ ಬೆಳೆಯುತ್ತಿದೆ. ಇದನ್ನು ಸಹಿಸದೆ ಕೀಳುಮಟ್ಟದ ರಾಜಕಾರಣವನ್ನು ಬಿಜೆಪಿ, ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು. ದೆಹಲಿಯಲ್ಲಿ ಇದುವರೆಗೆ ಅಬಕಾರಿ ನೀತಿಯಲ್ಲಿ ಯಾವುದೃ ಅವ್ಯಹಾರ ಆಗಿಲ್ಲ. ಇನ್ನೂ ನೂತನ ಅಬಕಾರಿ ನೀತಿ ದೆಹಲಿಯಲ್ಲಿ ಜಾರಿಗೆ ತಂದಿಲ್ಲ, ಹಲವು ರಾಜ್ಯಗಳಲ್ಲಿ ಇದೇ ನಿಯಮ ಜಾರಿಯಲ್ಲಿದೆ ಎಂಬ ಅಂಶ ಗಮನಿಸಬೇಕು. ಹೀಗಾಗಿ ಉದ್ದೇಶಪೂರ್ವಕವಾಗಿಯೇ ಬಂಧಿಸಲಾಗಿದೆ, ಕೀಳುಮಟ್ಟದ ರಾಜಕಾರಣ ಇದು ಎಂದು ಅವರು ಖಂಡಿಸಿದರು.
ಇದೇ ವೇಳೆ ಮಾತನಾಡಿದ ಎಎಪಿ ದ ಕ ಜಿಲ್ಲಾ ಅಧ್ಯಕ್ಷ ಅಶೋಕ್ ಎಡಮಲೆ, ಕಳೆದ ಸುಮಾರು ಒಂದು ವರ್ಷಗಳಿಂದ ಮನೀಶ್ ಸಿಸೋಡಿಯಾ ಕೇಂದ್ರವಾಗಿರಿಸಿ ಕೇಂದ್ರ ಸರ್ಕಾರ ದಾಳಿ ಮಾಡುತ್ತಿದೆ. ಯಾವುದೇ ಅವ್ಯಹಾರಗಳು, ಭ್ರಷ್ಟಾಚಾರ ಪತ್ತೆಯಾಗಿಲ್ಲ. ಎಎಪಿ ದೇಶದಾದ್ಯಂತ ಅಭಿವೃದ್ಧಿ ರಾಜಕಾರಣದ ನೆಲೆಯಲ್ಲಿ ಬೆಳೆಯುತ್ತಿದೆ. ಇದರಿಂದ ಹತಾಶವಾದ ಬಿಜೆಪಿ ಮನೀಶ್ ಸಿಸೋಡೊಯಾರನ್ನು ಬಂಧಿಸಿದೆ, ಇದು ಖಂಡನೀಯ ಎಂದು ಹೇಳಿದರು. ಸದ್ಯ ಆಮ್ ಆದ್ಮಿ ಪಾಟರಿ ಒಂದೇ ಬಿಜೆಪಿಯನ್ನು ಎದುರಿಸುವ ಶಕ್ತಿ ಹೊಂದಿದೆ ಎಂದು ಅರಿತಿರುವ ಬಿಜೆಪಿಯು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ ಇದೀಗ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಕರ್ನಾಟಕ ಸೇರಿದಂತೆ ದೇಶದ ವಿವಿದೆಡೆ ಎಎಪಿ ಬೆಳೆಯುತ್ತಿದೆ. ಜನರು ಎಎಪಿ ಪರವಾಗಿದ್ದಾರೆ. ಕರ್ನಾಟಕದ ಚುನಾವಣೆಯ ಪ್ರಚಾರಕ್ಕೆ ಮನೀಶ್ ಸಿಸೋಡಿಯಾ ಆಗಮಿಸಿ ಇಲ್ಲಿನ ಸರ್ಕಾರಿ ಶಾಲೆಗಳ ಅವ್ಯವಸ್ಥೆಗೆ ಉತ್ತರ ನೀಡುವ ಯೋಜನೆ ಹಾಕುತ್ತಾರೆ ಎನ್ನುವ ಭಯದಿಂದಲೇ ಕೇಂದ್ರ ಸರ್ಕಾರವು ಸಿಬಿಐ ಮೂಲಕ ಬಂಧಿಸಿದೆ. ಈ ಹಿಂದೆಯೂ ಇತರ ರಾಜ್ಯಗಳ ಚುನಾವಣೆಯಲ್ಲಿ ಎಎಪಿ ಪಕ್ಷದ ಮುಖಂಡರನ್ನು ಬಂಧಿಸಿ ಋಣಾತ್ಮಕವಾದ ಸಂದೇಶ ಬಿತ್ತುವ ಪ್ರಯತ್ನ ಮಾಡಿತ್ತು ಎಂದು ಎಎಪಿ ಮುಖಂಡರು ಹೇಳಿದರು.
ಆಮ್ಆದ್ಮಿಪಾರ್ಟಿಯ ದೆಹಲಿ ಸರ್ಕಾರದ ಶಿಕ್ಷಣ ಕ್ರಾಂತಿಯನ್ನು ಕಂಡು ಅನೇಕ ವಿದೇಶಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿಗೆ ಮಾತ್ರ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಸಚಿವರಾಗಿ ಮನೀಶ್ ಸಿಸೋಡಿಯಾ ಬರೋಬ್ಬರಿ 25,000ಕ್ಕೂ ಶಾಲಾ ಕೊಠಡಿಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಸುಮಾರು 20 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಇಂತಹವರ ವಿರುದ್ಧ ಬಿಜೆಪಿಯು ಈ ರೀತಿ ಕೀಳುಮಟ್ಟದ ಕುತಂತ್ರ ಮಾಡುತ್ತಿರುವುದು ಖಂಡನೀಯ. ಗಿಡವು ಚಿವುಟಿದಷ್ಟೂ ಚಿಗುರುವಂತೆ ಆಮ್ಆದ್ಮಿಪಾರ್ಟಿ ಕೂಡ ಬಿಜೆಪಿ ತೊಂದರೆ ನೀಡಿದಷ್ಟೂ ಹೆಚ್ಚಿನ ವೇಗದಲ್ಲಿ ಬೆಳೆಯಲಿದೆ ಎನ್ನುವ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಎಎಪಿ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಹೇಳಿದರು.
ಈ ಸಂದರ್ಭ ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಸಂತೋಷ್ ಕಾಮತ್, ಜಿಲ್ಲಾ ಕಾರ್ಯದರ್ಶಿ ಪ್ಲೋರಿನಾ ಗೋವೇಸ್, ಹಾಗೂ ಮಾಧ್ಯಮ ಕಾರ್ಯದರ್ಶಿ ವೆಂಕಟೇಶ್ ಬಾಳಿಗ ಉಪಸ್ಥಿತರಿದ್ದರು.
ಕೃಷಿ ಹೊರತುಪಡಿಸಿ, ವಾಣಿಜ್ಯ, ಕೈಗಾರಿಕೆ ಹಾಗೂ ಗಣಿಗಾರಿಕೆ ಸಂಬಂಧಿಸಿದ ಸ್ಥಳಗಳಲ್ಲಿ ಕೊಳವೆ ಬಾವಿ…
5G ಮತ್ತು 6G ಮೊಬೈಲ್ ಸಂವಹನಕ್ಕಾಗಿ ಸಕ್ರಿಯ ಮತ್ತು ನಿಷ್ಕ್ರಿಯ ಆಂಟೆನಾ ವ್ಯವಸ್ಥೆಗಳಲ್ಲಿ…
ಅಡಿಕೆಯ ಬಗ್ಗೆ WHO ವರದಿಯನ್ನು ಸರ್ಕಾರ ನೇರವಾಗಿ ಪ್ರಶ್ನಿಸಲು ಸಾಧ್ಯವಿದೆಯೇ..?
30.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಮಾರಾಟಕ್ಕೆ ರೈತರ ನೋಂದಣಿ ಕಾರ್ಯವನ್ನು ಶೀಘ್ರವೇ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ 30 ರಿಂದ ಡಿಸೆಂಬರ್ 3 ರವರೆಗೆ ಸಾಧಾರಣ…