ಚಿನ್ನಾರಿ ಮುತ್ತಾ ಎಂದೆ ಖ್ಯಾತಿ ಪಡೆದ ನಟ ವಿಜಯ್ ರಾಘವೇಂದ್ರ #Vijay Raghavendra ಸದಾ ನಗುಮೊಗದ ನಟ. ಸದಾ ತನ್ನ ಪತ್ನಿಯ ಬೆಂಬಲದೊಂದಿಗೆ ಜೀವನ ನಡೆಸುತ್ತಿದ್ದ ವಿಜಯ್ ಅವರಿಗೆ ದೊಡ್ಡ ಶಾಕ್ ಆಗಿದೆ. ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಸ್ಪಂದನ ಸಾವು ಅನೇಕರಿಗೆ ಶಾಕ್ ತಂದಿದೆ. ಆರೋಗ್ಯವಾಗಿದ್ದ ಸ್ಪಂದನಾ ಏಕಾಏಕಿ ನಿಧನ ಹೊಂದಿದ್ದು ನಿಜಕ್ಕೂ ದುಃಖದ ವಿಚಾರ. ಈ ಸುದ್ದಿ ತಿಳಿದು ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅಭಿಮಾನಿಗಳಿಗೂ ಈ ವಿಚಾರವನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಸ್ಪಂದನಾ ಹಾಗೂ ವಿಜಯ್ ಅವರು ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಇದ್ದರು. ಅದಕ್ಕೂ ಮೊದಲೇ ಸ್ಪಂದನ ಮೃತಪಟ್ಟಿದ್ದಾರೆ.
ಮಾಜಿ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್ ಅವರ ಮಗಳು ಸ್ಪಂದನಾ. ವಿಜಯ್ ಹಾಗೂ ಸ್ಪಂದನಾ ಅವರದ್ದು ಪ್ರೇಮ ವಿವಾಹ. 2007ರ ಆಗಸ್ಟ್ 26ರಂದು ಇವರು ಹಸಮಣೆ ಏರಿದ್ದರು. ವಿಜಯ್ ಹಾಗೂ ಸ್ಪಂದನಾ ಬ್ಯಾಂಕಾಕ್ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ಪಂದನಾಗೆ ಹೃದಯಾಘಾತ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್ನಲ್ಲೇ ನಡೆಯಲಿದೆ. ಮಂಗಳವಾರ (ಆಗಸ್ಟ್ 8) ಅವರ ಮೃತದೇಹ ಬೆಂಗಳೂರಿಗೆ ಬರಲಿದೆ.
12.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…
ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…
ಚೀನಾದ Chinese Academy of Tropical Agricultural Sciences (CATAS) ವಿಜ್ಞಾನಿಗಳು Electron…
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…