ಒಂದು ಕೈಯಲ್ಲಿ ಈಗ ಬರೆಯುವುದೇ ಕಷ್ಟ. ಆದರೆ ಎರಡೂ ಕೈಗಳಲ್ಲಿ ಏಕಕಾಲಕ್ಕೆ ಒಂದು ನಿಮಿಷಕ್ಕೆ ೪೦ ಶಬ್ದ ಬರೆದು ಉತ್ತರ ಪ್ರದೇಶದ ಲಾಟಾ ಫೌಂಡೇಶನ್‌ನ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ ಸುಳ್ಯದ ಬಾಲಕಿ ಆದಿ ಸ್ವರೂಪ.
ವಿಜ್ಞಾನದ ಪ್ರಕಾರ ಒಬ್ಬ ಮನುಷ್ಯ ಒಂದು ನಿಮಿಷದಲ್ಲಿ ಸಾಧಾರಣವಾಗಿ ೨೦ ಶಬ್ದ ಬರೆಯುತ್ತಾನೆ. ಆದರೆ ಸುಳ್ಯದ ಆದಿ ಸ್ವರೂಪ ತನ್ನ ಎರಡು ಕೈಗಳಿಂದ ಏಕಕಾಲಕ್ಕೆ ೫೦ ಶಬ್ದ ಬರೆದಿದ್ದಾಳೆ. ಅದೂ ವಿರುದ್ಧ ದಿಕ್ಕಿನಲ್ಲಿ. ಮಾತ್ರವಲ್ಲ ಎರಡು ಭಾಷೆಗಳನ್ನೂ ಏಕಕಾಲಕ್ಕೆ ಬರೆದಿದ್ದಾಳೆ. ಒಂದು ಕೈಯಿಂದ ಕನ್ನಡ ಇನ್ನೊಂದು ಕೈಯಿಂದ ಇಂಗ್ಲಿಷ್ ಬರೆಯುತ್ತಾಳೆ. ಹೀಗೇ ವಿವಿಧ ರೀತಿಯಲ್ಲಿ ವಿಶೇಷವಾಗಿ ಬರೆಯುತ್ತಾಳೆ ಆದಿ ಸ್ವರೂಪ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮೂಲದ ಆದಿ ಸ್ವರೂಪ ಈ ವಿಶೇಷ ಸಾಧನೆಗೆ ಉತ್ತರ ಪ್ರದೇಶದ ಲಾಟಾ ಫೌಂಡೇಶನ್‌ನ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಮುಂದೆ ಗಿನ್ನೆಸ್ ವಿಶ್ವ ದಾಖಲೆ ಮಾಡಬೇಕೆಂಬ ಬಯಕೆ ಹೊಂದಿರುವ ಆದಿ ನಿರಂತರ ಅಭ್ಯಾಸದಿಂದ ಈಗ ನಿಮಿಷಕ್ಕೆ 50 ಶಬ್ದಗಳನ್ನು ಬರೆಯಬಲ್ಲಳು. ಕಳೆದ ಎರಡು ವರ್ಷಗಳಿಂದ ಈ ರೀತಿಯ ಬರವಣಿಗೆಯನ್ನು ಅಭ್ಯಾಸ ಮಾಡುತ್ತಿರುವ ಈಕೆ ಒಟ್ಟು 10 ವಿಭಿನ್ನ ರೀತಿಯಲ್ಲಿ ಒಂದೇ ಸಮಯದಲ್ಲಿ ಎರಡು ಕೈ ಉಪಯೋಗಿಸಿಕೊಂಡು ಬರೆಯುವುದನ್ನು ಕರಗತ ಮಾಡಿಕೊಂಡಿದ್ದಾಳೆ.
ಕಲಾವಿದ ಹಾಗೂ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಅವರ ಮಗಳಾದ ಸ್ವರೂಪ ವಿವಿಧ ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಬರಹಗಳಲ್ಲಿ ಯುನಿ ಡೈರೆಕ್ಷನ್, ಲೆಫ್ಟ್ ಹ್ಯಾಂಡ್ ಸ್ಪೀಡ್, ರೈಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೊ ಟಾಪಿಕ್, ಹೆಟೆರೊ ಲಿಂಗ್ವಿಸ್ಟಿಕ್, ಎಕ್ಸ್ಚೇಂಜ್, ಡ್ಯಾನ್ಸಿಂಗ್, ಮತ್ತು ಬ್ಲೈಂಡ್ ಫೋಲ್ಡಿಂಗ್ ಹೀಗೇ ಬೇರೇ ಬೇರೆ ರೀತಿಯಲ್ಲಿ ಬರೆಯುತ್ತಾಳೆ. ಅದರ ಜೊತೆಗೆ ವಿವಿಧ ಕಲೆ, ಸಾಂಸ್ಕೃತಿಕವಾಗಿಯೂ ತೊಡಗಿಸಿಕೊಂಡಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಕಡಬ ಅರಣ್ಯ ಹಾಗೂ ಅರಣ್ಯದಂಚಿನ…
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…