ಕೊರೋನಾ ನಂತರ ಶಿಕ್ಷಣಕ್ಕೊಂದು ಹೊಸ ಮಜಲು

September 22, 2020
7:09 AM
ದಿಯಲ್ಲಿ ಬಿದ್ದಿರುವ ಮಣ್ಣನ್ನು ಯಾರೂ ಗಮನಿಸುವುದಿಲ್ಲ. ಆದರೆ ಅದೇ ಮಣ್ಣಿನಿಂದ ಮಾಡಿದ ಮೂರ್ತಿ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ.  ಯಾವುದೇ ಮಣ್ಣು ಅದರಷ್ಟಕೆ ಮೂರ್ತಿಯಾಗುವುದಿಲ್ಲ.  ಮಿಶ್ರಣ ಮಾಡಿ , ತಟ್ಟಿ , ಕುಟ್ಟಿ , ಕಲಸಿ ಹದ ಮಾಡಿ ರೂಪ ಕೊಟ್ಟಾಗ  ಎಲ್ಲರೂ ತಿರುಗಿ ನೋಡುವಂತಹ ಮೂರ್ತಿ ತಯಾರಾಗುತ್ತದೆ.

Advertisement
Advertisement
Advertisement
ಮಕ್ಕಳೂ ಹಾಗೆ ಮಣ್ಣಿನ ಮುದ್ದೆಯಂತಿರುತ್ತಾರೆ. ಹಸಿ ಮಣ್ಣು ನಾವು ಯಾವ ರೂಪ ಕೊಡುತ್ತೇವೆಯೋ ಅದಕ್ಕೆ ಹೊಂದಿ ಕೊಳ್ಳುತ್ತದೆ. ಹಾಗೆಯೇ ಮಕ್ಕಳು. ಸರಿಯಾದ ಶಿಕ್ಷಣ ಕೊಟ್ಟು ಒಳ್ಳೆಯ ಮಾರ್ಗದಲ್ಲಿ ಮುನ್ನಡೆಸುವಲ್ಲಿ ಮಹತ್ತರ ಪಾತ್ರವಹಿಸುವವರು  ಪೋಷಕರು  ಮಾತ್ರವಲ್ಲದೆ    ಶಿಕ್ಷಕರು ಕೂಡ.
ಶಿಕ್ಷಕರೆಂದರೆ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವವರೇ ಅಲ್ಲ. ಮಕ್ಕಳಿಗೆ  ಯಾರು ಜೀವನ ಧರ್ಮದ ಪಾಠ ಕಲಿಸುತ್ತಾರೋ , ಮಕ್ಕಳನ್ನು ವಿಶ್ವ ಮಾನವರಗುವತ್ತ ಪ್ರೇರೇಪಿಸುತ್ತಾರೋ ಅವರೇ ನಿಜವಾದ ಶಿಕ್ಷಕರು
ಇಂದು ಶಿಕ್ಷಣ ತರಗತಿಯ ಪಾಠಗಳಿಗೇ ಸೀಮಿತವಾಗಿಲ್ಲ. ಚೌಕಟ್ಟು ವಿಸ್ತಾರವಾಗಿದೆ. ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ.‌
ಕಲಿಸುವುದರೊಂದಿಗೆ ಯಾವ ಶಿಕ್ಷಕರು ನಿತ್ಯ ಅಧ್ಯಯನ ನಿರತನಾಗಿರುತ್ತಾರೋ ಅವರು ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಆಧುನಿಕ ಸಂಪರ್ಕ ಸಾಧನಗಳ ಸರಿಯಾಗಿ ಉಪಯೋಗಿಸುವ ಮಾಹಿತಿ ಇರುವ ಶಿಕ್ಷಕರು ಮಕ್ಕಳನ್ನು ತಲುಪಬಹುದು.
ತಂತ್ರಜ್ಞಾನ ದಿನದಿಂದ ದಿನಕ್ಕೆ ವಿಸ್ತಾರ ವಾಗುತ್ತಾ ಹೋಗುತ್ತಿದೆ. ಇಂದು ಹೊಸತ್ತು ಇದ್ದದ್ದು ನಾಳೆಗೆ ಔಟ್ ಡೇಟೆಡ್ ಆಗಿರುತ್ತದೆ.  ಆವಿಷ್ಕಾರಗಳು ದಿನನಿತ್ಯ ನಡೆಯುತ್ತದೆ. ಯಾವುದು ಹೆಚ್ಚು ಉಪಯುಕ್ತ, ಸಮಂಜಸವಾಗಿರುತ್ತವೆ ಅದು ಚಾಲ್ತಿಯಲ್ಲಿರುತ್ತದೆ , ಉಳಿಯುತ್ತದೆ. ಅನುಪಯುಕ್ತ ವಾದುದು,  ಅವೈಜ್ಞಾನಿಕವಾದುದರ ಆಯಸ್ಸು ಅಲ್ಪವಾಗಿರುತ್ತದೆ.
ಕೊರೊನಾ ಸಂಬಂಧ ಎಲ್ಲೆಡೆಯೂ ಮಾಡಿದ ಲಾಕ್ ಡೌನ್ ನಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ  ಅನಿರೀಕ್ಷಿತ ಮಾತ್ರವಲ್ಲ ಅನಿವಾರ್ಯ ಬದಲಾವಣೆಯಾಗಳಾಗಿವೆ. ಬರಿಯ ಪಠ್ಯ ಪುಸ್ತಕಗಳನ್ನು ಮಾತ್ರ ಬೋಧಿಸುವ ಶಿಕ್ಷಕರು  ದೃಷ್ಟಿ ಕೋನವನ್ನು ಬದಲಿಸ ಬೇಕಾಗಿದೆ.  ಹಲವು ವರ್ಷಗಳಿಂದ  ಶಿಕ್ಷಕರಿಗಾಗಿ ಹತ್ತು ಅನೇಕ ರೀತಿಯ   ತರಬೇತಿ ಕಾರ್ಯಗಾರಗಳನ್ನು, ನಾಯಕತ್ವ ಶಿಬಿರಗಳನ್ನು   ಸರಕಾರ  ಹಮ್ಮಿಕೊಂಡಿದೆ.  ವರ್ಷವಿಡೀ  ಒಂದಲ್ಲ ಒಂದು ತರಬೇತಿ, ಯೋಜನೆಗಳ ಅನುಷ್ಠಾನ,  ಕಾರ್ಯಕ್ರಮಗಳ ವರದಿಯ  ತಯಾರಿಯಲ್ಲಿ  , ಬಿಸಿಯೂಟದ ಖರ್ಚು ವೆಚ್ಚದ  ಲೆಕ್ಕ, ಜನಗಣತಿ ಸಾಲದೆಂದು ಜಾನುವಾರು ಗಣತಿ , ಚುನಾವಣಾ ಸಂದರ್ಭದಲ್ಲಿ ಮತದಾನ ಕೇಂದ್ರದ ಜವಾಬ್ದಾರಿ  . ಹೀಗೆ ಒಂದಲ್ಲ , ಹತ್ತಾರು ಕೆಲಸಗಳ ಜವಾಬ್ದಾರಿ. ಶಿಕ್ಷಕರಿಗೆ ತರಗತಿಯಲ್ಲಿ ಪಾಠ ಮಾಡುವ ಕೆಲಸ ಬಿಟ್ಟು ಉಳಿದೆಲ್ಲವುಗಳನ್ನು ಮಾಡಬೇಕಾದ ಸಂಕಷ್ಟ.  ಬಿಸಿಲು, ಗಾಳಿ, ಮಳೆಯೆಂಬ ಯಾವ ವಿನಾಯಿತಿಯೂ ಇಲ್ಲದೆ ಚಾಕರಿ ಮಾಡ ಬೇಕು, ಇನ್ನೂ ಸರಕಾರಿ  ಕೆಲಸ ದೇವರ ಕೆಲಸ  ಎಂಬ ಉಕ್ತಿ  ಶಿಕ್ಷಕರಿಗೆಂದೇ ಮಾಡಿದಂತೆ   .
ಇತ್ತೀಚಿನ ವರ್ಷಗಳಲ್ಲಿಯಂತೂ ಪಾಠ  ಬಿಟ್ಟು ಮತ್ತೆಲ್ಲಾ ಕೆಲಸಗಳ  ಹೊರೆ ಅಧ್ಯಾಪಕರ ಮೇಲೆಯೇ. ಇದೀಗ ಈ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಅನಪೇಕ್ಷಿತ ವಾಗಿ ಬಂದೊದಗಿದೆ. ಶಿಕ್ಷಕರು ಮಕ್ಕಳ ನಡುವೆ ಒಂದು ಹೊಸ ಸೇತುವೆ ನಿರ್ಮಾಣವಾಗಿದೆ. ಯಾವ ಮಕ್ಕಳಿಗೆ ನಿಜವಾಗಿಯೂ ಕಲಿಯುವ ಮನಸಿದೆಯೋ, ಯಾವ ಅಧ್ಯಾಪಕರಿಗೆ ಸಂಪೂರ್ಣ ವಾಗಿ ಕಲಿಸುವಿಕೆಯಲ್ಲಿ ತೊಡಗಿಸಿಕೊಳ್ಳುವ ಇರಾದೆ ಇದೆಯೋ ಅವರಿಗೆ ಸಕಾಲ.  ತಂತ್ರಜ್ಞಾನದ ಮೂಲಕ ಅದೇ ಪಠ್ಯ ವಿಷಯವನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಕೆಲಸ. ಮೊಬೈಲ್ ಎಲ್ಲರ ಬಳಿಯೂ ಇದೆ. ಹಳ್ಳಿ ಇರಲಿ ಪೇಟೆ ಇರಲಿ ಕೈಗೆಟಕುವ ದರದಲ್ಲಿ ದೊರೆಯುವ ಮೊಬೈಲ್ ಗಳಿವೆ. ಪ್ರಾಥಮಿಕ ಶಾಲೆಯ  ಮಕ್ಕಳಿಗೆ  ಸಾಮಾನ್ಯವಾಗಿ ಹಾಡು, ಕುಣಿತ, ಚಿತ್ರಗಳ ಮೂಲಕ ಪಾಠ ಹೇಳಿ ಕೊಡಲಾಗುತ್ತದೆ. ಆದರೆ ಈಗ ವಿಡಿಯೋ, ಆಡಿಯೋಗಳ ನ್ನು  ವ್ಯವಸ್ಥಿತವಾಗ ಸಂಯೋಜನೆ ಮಾಡಿ ಸುಲಭವಾಗಿ ಅರ್ಥೈಸ ಬಹುದು. ಸಣ್ಣ ವಿಷಯ,  ಹಾಲು ನಮಗೆ ಹೇಗೆ ಸಿಗುತ್ತದೆ? ಎಂಬ ಪ್ರಶ್ನೆ   ಪೇಟೆಯ ಕೆಲವು  ಮಕ್ಕಳನ್ನು ಈ ದಿನಗಳಲ್ಲಿ ಕಾಡ ಬಹುದು.  ದನವೆಂಬ ಉತ್ತರ ಕೊಟ್ಟರೂ ಅರ್ಥವಾಗದೇನೋ? ಹಾಲು ಹಿಂಡುವ ವಿಡಿಯೋ ತೋರಿಸಿದರೆ ಸುಲಭದಲ್ಲಿ  ಮಕ್ಕಳಿಗೆ ತಿಳಿಯುತ್ತದೆ.  ಕ್ಲಿಷ್ಟಕರವಾದ ವಿಷಯವನ್ನು ಅರಿಯಲು ಸಹಕಾರಿಯಾಗಿದೆ.
ದೂರದರ್ಶನ ಚಾನೆಲ್ ಗಳನ್ನು  ಇಂದು ಪಠ್ಯ ಬೋಧನೆ ಗಾಗಿ ಬಳಸಲಾಗುತ್ತಿದೆ. ವಿದ್ಯುತ್ , ನೆಟ್‌ವರ್ಕ್ ಸಮಸ್ಯೆಗಳು ಪರಿಹಾರವಾದರೆ ಕೊರೊನಾ ಕಾರಣದಿಂದ ಹಿಂದುಳಿದ ಶೈಕ್ಷಣಿಕ ವಿಚಾರಗಳು , ಸಮಸ್ಯೆ ಗಳಿಗೊಂದು ತಾತ್ಕಾಲಿಕ ಪರಿಹಾರವನ್ನು ಆನ್‌ಲೈನ್ ಶಿಕ್ಷಣ ಒದಗಿಸಬಹುದೆಂಬ ಅಭಿಪ್ರಾಯ  ಪೋಷಕರಲ್ಲಿ ಉದ್ಭವಸಿದೆ ಎಂದರೆ ತಪ್ಪಾಗಲಾರದು.
ಮಕ್ಕಳಿಗೆ ಭಾರವಾದ ಚೀಲದ ಹೊರೆ ಇಲ್ಲ. ಊಟದ ಚಿಂತೆ ಇಲ್ಲ. ಮಳೆಗೆ ಒದ್ದೆಯಾಗಿ ಶೀತ ಜ್ವರ ಬಾರದಂತೆ ಜಾಗೃತೆಯಿಂದ ಆರೋಗ್ಯ ಕಾಪಾಡಿಕೊಂಡು  ಸಿಕ್ಕಿದ ಅವಕಾಶವನ್ನು ಸರಿಯಾಗಿ ಉಪಯೋಗಿಸುವ ಜವಾಬ್ದಾರಿ ಮಕ್ಕಳ ಕೈಯಲ್ಲಿದೆ .
ಅಶ್ವಿನಿಮೂರ್ತಿ ಅಯ್ಯನಕಟ್ಟೆ
ಬರಹಗಾರರು
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ
ಬಾಬಾಸಾಹೇಬರನ್ನು ನೆನೆಯುತ್ತಾ…… ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು
April 13, 2024
4:36 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror