ಮಕ್ಕಳ(Children) ಪಾಲಿಗೆ ಪರೀಕ್ಷೆ(Exam) ಅನ್ನೋದು ಕಬ್ಬಿಣದ ಕಡಲೇ ಕಾಯಿ. ಜೀವನದ ಪ್ರಮುಖ ಘಟ್ಟಗಳು ಹೌದು, ಹತ್ತನೇ ತರಗತಿ(SSLC) ಹಾಗೂ ಪಿಯುಸಿಯಲ್ಲಿ(PUC) ಮಕ್ಕಳು ಅಗತ್ಯವಾಗಿ ಪರೀಕ್ಷೆಗಳನ್ನು ಎದುರಿಸಲೇ ಬೇಕು. ಹೆಚ್ಚಿನ ಅಂಕ(Marks) ಗಳಿಸಿದರೆ ಅವರ ಮುಂದಿನ ಕಲಿಕೆಯ ಹಾದಿ ಸುಗಮವಾಗುತ್ತದೆ. ಹಾಗಾಂತ ಎಲ್ಲಾ ಮಕ್ಕಳು ಜಾಸ್ತಿ ಅಂಕಗಳನ್ನೇ ಪಡೆಯೋದು ಅಸಾಧ್ಯ. ಅದನ್ನು ಪೋಷಕರು(Parents) ಹಾಗೂ ಮಕ್ಕಳು , ಹಾಗೇ ಶಿಕ್ಷಕರು(Teachers) ಅರಿತಿರಬೇಕು. ಪರೀಕ್ಷೆಯಲ್ಲಿ ಪಾಸು ಫೇಲ್(Pass-Fail) ಆಗೋದು ಸಾಮಾನ್ಯ. ಪಾಸ್ ಆದವ್ರು ಬುದ್ದಿವಂತರಲ್ಲ, ಫೇಲ್ ಆದವರು ದಡ್ಡರಲ್ಲ. ಹಾಗಾಗಿ ಪಾಸ್-ಫೇಲ್ ಎಂಬುದು ಜೀವನದ ಒಂದು ಭಾಗ ಅಷ್ಟೇ. ಫೇಲ್ (Fail) ಆದ ಕೂಡಲೇ ಯಾವುದೇ ಕಾರಣಕ್ಕೂ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನಿಮ್ಮ ಭವಿಷ್ಯ(Future) ಇನ್ನೂ ಸಾಕಷ್ಟಿದೆ ಈ ಕುರಿತು ಮಾನಸಿಕ ಆರೋಗ್ಯ ತಜ್ಞರಾದ(Psychiatrist) ಡಾ. ವಿನಯ್ ಅವರು ತಿಳಿಸಿರುವ ಮಾಹಿತಿ ಇಲ್ಲಿದೆ.
ಆತುರದ ನಿರ್ಧಾರ ಬೇಡ : ಹೌದು, ಪರೀಕ್ಷೆ ಎಂದಿಗೂ ನಮ್ಮ ಜೀವನ ನಿರ್ಧಾರ ಮಾಡುವುದಿಲ್ಲ. ಫೇಲ್ ಆದವರು ಕೂಡ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಹಾಗಾಗಿ ಪರೀಕ್ಷೆಯ ಫಲಿತಾಂಶ ಬಂದ ನಂತರದಲ್ಲಿ ಎಂದಿಗೂ ನಾವುಗಳು ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡವೇ ಬೇಡ. ನನ್ನ ಜೀವನ ಮುಗಿಯಿತು ಈ ತರಹದ ನಿರ್ಧಾರಗಳನ್ನ ಎಂದಿಗೂ ದಯವಿಟ್ಟು ತೆಗೆದುಕೊಳ್ಳಬೇಡಿ ಎಂದು ಖ್ಯಾತ ಮಾನಸಿಕ ತಜ್ಞರಾದ ಡಾ. ವಿನಯ್ ಅವ್ರು ತಿಳಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…