ನೈಸರ್ಗಿಕ ವಿಪತ್ತುಗಳಿಂದಾಗುವ ಸಷ್ಟದಿಂದ ರೈತರನ್ನು ರಕ್ಷಿಸಲು ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್‌ಬಿಮಾ ಯೋಜನೆಯನ್ನು ಸರ್ಕಾರವು ಜಾರಿಗೊಳಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಗ್ರಿಕಲ್ಚರಲ್ ಇನ್ಯೂರೆನ್ಸ್ ಕಂಪೆನಿಯವರ ಸಹಯೋಗದಿಂದ 2021-22ನೇ ಸಾಲಿನ ಮುಂಗಾರು, ಹಿಂಗಾರು, ಬೇಸಿಗೆಯಲ್ಲಿ ನಷ್ಟವನ್ನು ಅನುಭವಿಸಿದವರಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಕಿರಣ್‌ಕುಮಾರ್ ತಿಳಿಸಿದ್ದಾರೆ.
2019-20 ಸಾಲಿನ ಮುಂಗಾರು ಹಂಗಾಮಿನಲ್ಲಿ 16764 ರೈತರ ಅರ್ಜಿಗಳಿಗೆ ರೂ. 1534.04 ಲಕ್ಷಗಳ ವಿಮಾ ಮೊತ್ತ ರೈತರ ಖಾತೆಗೆ ಪಾವತಿಯಾಗಿದ್ದು, ನೊಂದಾಯಿತ ಬೆಳೆ ಪರಿಶೀಲನೆಗೆ ಬಾಕಿಯಾಗಿರುವ 379 ಸಂಖ್ಯೆ ರೈತರ ಅರ್ಜಿಗಳಿಗೆ ರೂ.31,49 ಲಕ್ಷಗಳ ವಿಮಾ ಮೊತ್ತ ಪಾವತಿಗೆ ಬಾಕಿಯಿರುತ್ತದೆ. ಹಾಗೂ 2019-20 ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 34 ಅರ್ಜಿಗಳಿಗೆ ರೂ. 245 ಲಕ್ಷಗಳು 1 ಮೊತ್ತ ಪಾವತಿಯಾಗಿರುತ್ತದೆ. ನೋಂದಾಯಿತ ಬೆಳೆ ಪರಿಶೀಲನೆ ಬಾಕಿಯಿರುವ 10 ಸಂಖ್ಯೆ ರೈತರ ಅರ್ಜಿಗಳಿಗೆ ರೂ.049 ಲಕ್ಷಗಳ ವಿಮಾ ಮೊತ್ತ ಪಾವತಿಗೆ ಬಾಕಿಯಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಿತ್ತನೆ ನಾಟಿ ಮಾಡುವುದಕ್ಕಿಂದ ಮುಂಚಿತವಾಗಿಯೇ ನೋಂದಾಯಿಸಲು ಸಹ ಅವಕಾಶವಿರುತ್ತದೆ. ಬೆಳೆ ಸಾಲ ಪಡೆಯುವ ರೈತರು ಬೆಳೆ ವಿಮೆ ಯೋಜನೆಯಡಿ ಕಡ್ಡಾಯವಾಗಿ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…