Advertisement
ಕೃಷಿ

ಕೃಷಿಕನ ಸಂಶೋಧನೆಗೆ ಸಿಗುವ ಸಂಮಾನ ಯಾವುದು ? | ಕೃಷಿಕ ಪವನ ವೆಂಕಟ್ರಮಣ ಭಟ್‌ ಹೇಳಿದ್ದು ಹೀಗೆ.. | ಸಂಮಾನ ಮಾಡದೇ ಇದ್ದರೂ ಅವಮಾನ ಮಾಡಬೇಡಿ…. ! |

Share

ಕೃಷಿಕರು ಹಲವು ಸಂಶೋಧನೆಗಳನ್ನು, ಆವಿಷ್ಕಾರಗಳನ್ನು ಮಾಡುತ್ತಾರೆ. ಹಲವು ಸಂದರ್ಭಗಳಲ್ಲಿ  ಅವುಗಳನ್ನು ತಾತ್ಸಾರ ಭಾವನೆಯಿಂದ ಕಾಣುತ್ತಾರೆ. ಈ ನಡುವೆಯೂ ಹಲವು ಕಡೆ ಸನ್ಮಾನಗಳೂ ನಡೆಯುತ್ತದೆ. ಇಂತಹ ಸಂದರ್ಭಗಳಲ್ಲಿ ಕೃಷಿಕರ ಭಾವನೆ ಹೇಗಿರುತ್ತದೆ.. ? ಈ ಬಗ್ಗೆ ಕೃಷಿಕ ಪವನ ವೆಂಕಟ್ರಮಣ ಭಟ್‌ ಬಹಳ ಮಾರ್ಮಿಕವಾಗಿ ಮಾತನಾಡಿದ್ದಾರೆ..

ಭಾರತೀಯ ಕಿಸಾನ್ ಸಂಘದ ವತಿಯಿಂದ ಸುಳ್ಯ ತಾಲೂಕು ಘಟಕದ ವತಿಯಿಂದ ಬಲರಾಮ ಜಯಂತಿ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು‌. ಈ ಸಂದರ್ಭ  ಪ್ರಗತಿಪರ ಕೃಷಿಕ ವೆಂಕಟ್ರಮಣ ಭಟ್ ಪವನ, ಪ್ರಗತಿಪರ ಹೈನುಗಾರರಾದ ಶಾಂಭವಿ ಎನ್‌ ರೈ ಪಿಜಾವು ಅವರನ್ನು ಸನ್ಮಾನಿಸಲಾಯಿತು. 

 

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಕೃಷಿಕ ಪವನ ವೆಂಕಟ್ರಮಣ ಭಟ್, ಕೃಷಿ ಸಂಶೋಧನೆ, ಆವಿಷ್ಕಾರಗಳು ನಿರಂತರ. ಹಾಗಾಗಿ ಸನ್ಮಾನಗಳಿಗಿಂತಲೂ ಗುರುತಿಸುವಿಕೆ ಕೃಷಿಕರಿಗೆ ಬಹಳ ಖುಷಿ ಕೊಡುತ್ತದೆ. ಪ್ರತೀ ಕೃಷಿಕನ ಸಾಧನೆ, ಆವಿಷ್ಕಾರಗಳು ಮುಂದುವರಿಯಬೇಕು. ಇದಕ್ಕಾಗಿ ಹೀಗೆ ಗುರುತಿಸುವ ಮೂಲಕ ಇನ್ನೊಬ್ಬ ಕೃಷಿಕನಿಗೆ ಸಂಶೋಧನೆಗೆ, ಆವಿಷ್ಕಾರಕ್ಕೆ “ಖೋ..” ನೀಡುವ ಕೆಲಸ ಮಾಡುವುದಷ್ಟೇ ಆಗಿದೆ. ಊರಿನ ಮಂದಿ ಗುರುತಿಸಿದಾಗ ಸಂಶೋಧಕನಿಗೆ ಖುಷಿ ಹೆಚ್ಚಾಗುತ್ತದೆ. ಯಾವತ್ತೂ ಕೃಷಿಕರಿಗೆ ಸನ್ಮಾನ ಮಾಡುವುದಕ್ಕಿಂತಲೂ ಕೃಷಿಕನ ಆವಿಷ್ಕಾರಗಳಿಗೆ ಹಾಗೂ ಕೃಷಿಕನಿಗೆ ಅವಮಾನ ಮಾಡಬಾರದು ಎಂದರು.

ಈ ಹಿಂದಿನ ತಮ್ಮ ಅನುಭವ ಹೇಳಿಕೊಂಡ ಪವನ ವೆಂಕಟ್ರಮಣ ಭಟ್‌, ಹಿಂದೆ ನಾನು ರಾಟೆಯೊಂದನ್ನು ಅಭಿವೃದ್ಧಿ ಪಡಿಸಿದ್ದೆ. ಇದಕ್ಕಾಗಿ ನನಗೆ “ರಾಟೆ ಭಟ್ರು ” ಅಂತ ಹೆಸರಿಟ್ಟರು. ಇದನ್ನು ಶ್ರೀಪಡ್ರೆ ಒಂದು ಕಾರ್ಯಕ್ರಮದಲ್ಲಿ ಖಂಡಿಸಿದರು. ಇದನ್ನೇ “ರಟ್ಟೆ ಭಟ್ರು” ಎಂದು ಏಕೆ ಈ ಸಮಾಜವು ಗೌರವಿಸಬಾರದು ? ಎಂದು ಪ್ರಶ್ನಿಸಿದರು. ಯಾವತ್ತೂ ಒಬ್ಬ ಕೃಷಿಕನ ಸಣ್ಣ ಅಧ್ಯಯನ, ಆವಿಷ್ಕಾರಗಳೂ ಮಹತ್ವ ಪಡೆಯುತ್ತವೆ. ಹೀಗೇ ಅವಮಾನ ಮಾಡುವುದರಿಂದಲೇ ಕೃಷಿ ಮಾಹಿತಿಗಳು ವಿನಿಮಯವಾಗುತ್ತಿಲ್ಲ ಎಂದು ಶ್ರೀಪಡ್ರೆ ಹೇಳಿರುವುದನ್ನು ಪವನ ವೆಂಕಟ್ರಮಣ ಭಟ್‌ ಉಲ್ಲೇಖಿಸಿ ಹೇಳಿದರು.  ಕೃಷಿಕರ ಆವಿಷ್ಕಾರಗಳು ಸಣ್ಣದೇ ಇದ್ದರೂ ಅದನ್ನು ಮುಂದಿನ ಪೀಳಿಗೆಯೂ ಗೌರವಿಸಬೇಕು, ಅವಮಾನ ಮಾಡಬಾರದು ಎಂದರು.

ತಮ್ಮದೇ ಇನ್ನೊಂದು ಅನುಭವ ಹೇಳಿದ ಪವನ ವೆಂಕಟ್ರಮಣ ಭಟ್‌, ಪುತ್ತೂರಿನಲ್ಲಿ ಯಂತ್ರ ಮೇಳ ನಡೆದಿತ್ತು. ಈ ಸಂದರ್ಭ ಮರ ಏರುವ ಪುಟ್ಟ ಯಂತ್ರ ಮಾಡಿದ್ದೆ. ಇದರ ಪ್ರಾತ್ಯಕ್ಷಿಕೆಯ ಸಂದರ್ಭ ತಲೆಗೆ ತಾಗಿತ್ತು, ರಕ್ತ ಸುರಿಯುತ್ತಿತ್ತು. ಈ ನಡುವೆಯೂ ಮತ್ತೆ ಯಂತ್ರದ ಮೂಲಕ ಏರುವ ಕೆಲಸ ಮಾಡುತ್ತಿದ್ದಾಗ ಅಲ್ಲಿರುವ ಕೆಲವು ಯುವತಿಯರು ಗೇಲಿ ಮಾಡಿದರು. ಇಷ್ಟು ರಕ್ತ ಸುರಿಯುತ್ತಿದ್ದರೂ ಮರ ಏರುವುದು ಏಕೆ, ನಿಲ್ಲಿಸಿ ಎಂದರು. ಇದಕ್ಕೆ ಉತ್ತರಿಸಿದ್ದು ಹೀಗೆ, “ಪ್ರತೀ ಮಹಿಳೆ ಹೆರಿಗೆಯಾಗುತ್ತದೆ. ಆದರೆ ಸಣ್ಣ ಪ್ರಮಾಣದಲ್ಲಿ ಹೆರಿಗೆಯ ವೇಳೆ ಮಹಿಳೆ ಸಾವನ್ನಪ್ಪುತ್ತಾರೆ. ಒಂದು ವೇಳೆ ನಿಮ್ಮೆಲ್ಲರ ತಾಯಿಯೂ ಅದೇ ಯೋಚಿಸಿದ್ದರೆ ಯಾರೂ ಹುಟ್ಟುತ್ತಿರಲಿಲ್ಲ. ಇಲ್ಲೂ ಹಾಗೆಯೇ ಏನಾದರೂ ಆದರೆ ನನಗೇ ಆಗಲಿ, ಆದರೆ ವಿಶ್ವಾಸ ಇದೆ, ಅದು ನನ್ನ ಸಂಶೋಧನೆ” ಎಂದು ಹೇಳಿದ್ದೆ ಎಂದು ಪವನ ವೆಂಕಟ್ರಮಣ ಭಟ್‌ ಬಹಳ ಮಾರ್ಮಿಕವಾಗಿ ಹೇಳಿದರು.

ಕೃಷಿಯಲ್ಲಿ ಕೃಷಿಕನ ಸಂಶೋಧನೆಗೂ ಮಹತ್ವ ನೀಡಿ. ಅದು ಪುಟ್ಟ ಸಂಶೋಧನೆಯೇ ಆದರೂ ಅದಕ್ಕೆ ಮಹತ್ವ ಅಗತ್ಯ ಇದೆ. ಪ್ರತೀ ಕೃಷಿಕನ ಸಂಶೋಧನೆ, ಆವಿಷ್ಕಾರಗಳಿಗೆ ಗೌರವ, ಮಾನ ಕೊಡದೇ ಇದ್ದರೂ ಪರವಾಗಿಲ್ಲ, ಆದರೆ ಅವಮಾನ ಮಾತ್ರಾ ಮಾಡಬಾರದು ಎಂದು ಸಂದೇಶ ನೀಡಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹಾಲಿನ ದರ ಕನಿಷ್ಠ ₹10 ಹೆಚ್ಚಳಕ್ಕೆ ಕೆಎಂಎಫ್‌ ಮನವಿ – ಹೈನುಗಾರರಿಗೆ ಏನು ಪ್ರಯೋಜನ..? ಗ್ರಾಹಕರಿಗೆ ಎಷ್ಟು ಹೊರೆ..?

ರಾಜ್ಯದಲ್ಲಿ ಹಾಲಿನ ದರವನ್ನು ಕನಿಷ್ಠ ಲೀಟರ್‌ಗೆ ₹10 ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಸರ್ಕಾರಕ್ಕೆ…

47 minutes ago

ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು

ಹಳೆಯ ನೋವು, ಕೋಪ, ತಿರಸ್ಕಾರ ಮತ್ತು ನಿರೀಕ್ಷೆಗಳ ಭಾರವನ್ನು ಹೊಸ ಸಂಬಂಧಗಳ ಮೇಲೆ…

13 hours ago

ರೈತರಿಗೆ ವಿದ್ಯುತ್‌ ಶಾಕ್ – ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ- ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ

ಮಳೆ ಕೊರತೆ ಮತ್ತು ಜಲವಿದ್ಯುತ್ ಉತ್ಪಾದನೆ ಕುಸಿತದ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ…

19 hours ago

ಅ.29 ರಿಂದ ನ.11 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ -12 ದಿನ ಸಾರ್ವಜನಿಕ ದರ್ಶನ

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್…

19 hours ago

ಪಿಎಂ-ಕುಸುಮ್ ಯೋಜನೆಯಿಂದ ರೈತರ ನೀರಾವರಿಗೆ ಸೌರಶಕ್ತಿ

ಪಿಎಂ-ಕುಸುಮ್ ಯೋಜನೆಯಡಿ ರೈತರ ನೀರಾವರಿ ಪಂಪ್‌ಗಳಿಗೆ ಸೌರಶಕ್ತಿ ಅಳವಡಿಸುವ ಮೂಲಕ ಡೀಸೆಲ್ ಅವಲಂಬನೆ…

19 hours ago

ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ – ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಘಟನೆ

ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು…

20 hours ago