ಭಾರತದಲ್ಲಿ AI ತಂತ್ರಜ್ಞಾನದ ಕಡೆಗೆ ಲಕ್ಷ್ಯ | Artificial Intelligence ನಿಯಂತ್ರಣದ ಕಡೆಗೂ ಗಮನ |

June 9, 2023
3:25 PM

ಪ್ರಪಂಚದ ಹಲವು ಕಡೆಗಳಲ್ಲಿ  ಇಂದು AI (Artificial Intelligence) ತಂತ್ರಜ್ಞಾನ ಬೆಳೆಯುತ್ತಿದೆ. ಕೃಷಿಯಿಂದ ತೊಡಗಿ ಎಲ್ಲಾ ಕ್ಷೇತ್ರಗಳಲ್ಲೂ AI ಬಳಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಇನ್ನೂ ಈ ಕ್ಷೇತ್ರ ಬೆಳವಣಿಗೆಯ ಹಂತದಲ್ಲಿದೆ. ಭಾರತದಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ಅವಕಾಶ ಇರುವುರಿಂದ ಹೆಚ್ಚು ಗಮನ ನೀಡಲಾಗುತ್ತಿದೆ. ಇದೇ ವೇಳೆ AI ತಂತ್ರಜ್ಞಾನಗಳ ಮೂಲಕ ನಡೆಯಬಹುದಾದ ಅನಾಹುತಗಳ ಕಡೆಗೂ ಗಮನಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದಲ್ಲೂ ನಿಯಂತ್ರಣ ಮಾಡಲಾಗುತ್ತಿದೆ. ನಾವು ಮಾಡಿದ ರೀತಿಯಲ್ಲೇ ನಡೆಯುವ ಕಾರ್ಯಗಳ ನಿಯಂತ್ರಂಣ ಮಾಡಲಾಗುತ್ತದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ ಹೇಳಿದೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು AI (Artificial Intelligence) ಮೂಲಕ ಉಂಟಾಗಬಹುದಾದ ಹಾಗೂ ಉಂಟಾದ ಸಂಭಾವ್ಯ ಹಾನಿಯಿಂದ ಜನರನ್ನು ರಕ್ಷಿಸಲು ಸರ್ಕಾರವು ನಿಯಮಗಳನ್ನು ಜಾರಿಗೆ ತರಲಿದೆ ಎಂದು ಘೋಷಿಸಿದ್ದಾರೆ. ಯಾವುದೇ ಹೊಸದಾದ ತಂತ್ರಜ್ಞಾನವನ್ನು ನಿಯಂತ್ರಿಸುವ ರೀತಿಯಲ್ಲಿಯೇ ಕೇಂದ್ರವು AI (Artificial Intelligence)  ನಿಯಂತ್ರಿಸುತ್ತದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ಶುಕ್ರವಾರ ಹೇಳಿದ್ದಾರೆ .

ಅಂತರ್ಜಾಲದಲ್ಲಿ ಹೆಚ್ಚುತ್ತಿರುವ ಅಪರಾಧದ ಬಗ್ಗೆ ಇದೇ ವೇಳೆ ಅವರು ಕಳವಳ ವ್ಯಕ್ತಪಡಿಸಿದರು.   ಭಾರತದಲ್ಲಿ ಸುಮಾರು 85 ಕೋಟಿ ಭಾರತೀಯರು ಪ್ರಸ್ತುತ ಇಂಟರ್ನೆಟ್ ಬಳಸುತ್ತಿದ್ದಾರೆ, 2025 ರ ವೇಳೆಗೆ ಈ ಸಂಖ್ಯೆ 120 ಕೋಟಿಗೆ ಏರುವ ನಿರೀಕ್ಷೆಯಿದೆ. ಇದೇ ವೇಳೆ  AI (Artificial Intelligence) ತಂತ್ರಜ್ಞಾನವೂ ವೇಗವಾಗಿ ಬೆಳೆಯುತ್ತಿದೆ.

AI (Artificial Intelligence) ತಂತ್ರಜ್ಞಾನದ ಬಗ್ಗೆ  ಓಪನ್‌ಎಐ  ಸಿಇಒ ಸ್ಯಾಮ್ ಆಲ್ಟ್‌ಮನ್  ಜೊತೆ  ನಡೆದ ಸಂವಾದದಲ್ಲಿ , ಈ ತಂತ್ರಜ್ಞಾನ ಹೆಚ್ಚು ಬಳಕೆಗೊಂಡರೆ ಕೆಲವು ಉದ್ಯೋಗಗಳು ಬಳಕೆಯಲ್ಲಿಲ್ಲದ ಸಾಧ್ಯತೆಯನ್ನು ಅವರು ಒಪ್ಪಿಕೊಂಡರು. ಆದರೆ ಇದೇ ವೇಳೆ  ಹೊಸ ಉದ್ಯೋಗಾವಕಾಶಗಳ ಹೊರಹೊಮ್ಮುವಿಕೆ ಸಾಧ್ಯವಿದೆ. ಹೊಸ ತಂತ್ರಜ್ಞಾನಗಳು ತಳಮಟ್ಟದವರೆಗೆ ತಲುಪಲಿದೆ ಎಂದೂ ಅವರು ಹೇಳಿದರು. AI (Artificial Intelligence)  ಸಂಪೂರ್ಣವಾಗಿ ಬದಲಿಸುವ ಬದಲು ಮಾನವ ಸಾಮರ್ಥ್ಯಗಳನ್ನು ಹೆಚ್ಚಿಸುವ ಸಾಧನವಾಗಿ ಗ್ರಹಿಸಬೇಕು ಎಂದು ಆಲ್ಟ್‌ಮ್ಯಾನ್ ಪ್ರತಿಪಾದಿಸಿದರು. ದೇಶದಲ್ಲಿ AI (Artificial Intelligence) ಹೆಚ್ಚಿಸಲು ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಧನಸಹಾಯ ನೀಡುವುದಾಗಿ ಆಲ್ಟ್‌ಮ್ಯಾನ್ ಘೋಷಿಸಿದರು.

ಭಾರತದ ಬಲಿಷ್ಠ AI (Artificial Intelligence) ಉದ್ಯಮ ಮತ್ತು ದತ್ತಾಂಶದ ದೊಡ್ಡ ಸಮೂಹವನ್ನು ನೀಡಿದರೆ,AI (Artificial Intelligence) ಆಧಾರಿತ ಉಪಯುಕ್ತತೆಗಳು ದೇಶದಲ್ಲಿ ಬೃಹತ್ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು.ಭಾರತದಲ್ಲಿ ಇನ್ನೂ ಆರಂಭಿಕ ಹಂತದಲ್ಲಿದೆ ಈ ಕ್ಷೇತ್ರ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ
October 13, 2026
10:15 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror