ರೈತರಿಗೆ ಆಯಾ ಪ್ರದೇಶ-ನಿರ್ದಿಷ್ಟ ಸಲಹೆಗಳು ಮತ್ತು ನೈಜ ಸಮಯದ ಮಾಹಿತಿಯನ್ನು ಒದಗಿಸುವ ದೃಷ್ಟಿಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಕೃಷಿ ಇಲಾಖೆಯು ಕೃತಕ ಬುದ್ಧಿಮತ್ತೆ-ಚಾಲಿಯತ (Artificial intelligence) ವೇದಿಕೆಯನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದ್ದು, 2026 ರ ಖಾರಿಫ್ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಮಾತ್ರವಲ್ಲ, ಈ ವ್ಯವಸ್ಥೆಯು ರಾಜ್ಯಾದ್ಯಂತ ಒಂದು ಕೋಟಿಗೂ ಹೆಚ್ಚು ರೈತರಿಗೆ ಪ್ರಯೋಜನ ನೀಡುವ ಗುರಿಯನ್ನು ಇದು ಹೊಂದಿದೆ.
ಎಐ ವೇದಿಕೆಯನ್ನು ಇಸ್ರೋ, ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ಸ್ ಸೆಂಟರ್ ಮತ್ತು ಬಿಇಎಲ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ರೈತರ ಫೋನ್‍ಗಳಿಗೆ ಕನ್ನಡದಲ್ಲಿ ಸಮಗ್ರ ಸಂದೇಶವನ್ನು ಕಳುಹಿಸುತ್ತಿದೆ. ಇದರಿಂದ ರೈತರು ಬೆಳೆ ಬೆಳೆಯುವ ಹಂತದಲ್ಲಿ ಅಥವಾ ಯಾವುದೇ ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದ್ದರೆ, ಈ ವ್ಯವಸ್ಥೆಯು ಸೂಕ್ತವಾದ ಕೀಟನಾಶಕ ಬಳಕೆಯ ಕುರಿತ ಸಲಹೆಗಳನ್ನು ಕಳುಹಿಸುತ್ತದೆ. ಅದೇ ರೀತಿ, ಕೊಯ್ಲು ಅವಧಿಯಲ್ಲಿ ರೈತರು ಕೊಯ್ಲು ವಿಳಂಬ ಮಾಡಬೇಕೆ ಅಥವಾ ತಮ್ಮ ಕೊಯ್ಲು ಮಾಡಿದ ಬೆಳೆಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೇ ಎಂಬುದರ ಕುರಿತು ಮಾರ್ಗದರ್ಶನದೊಂದಿಗೆ ಹವಾಮಾನ ಎಚ್ಚರಿಕೆಯನ್ನು ಸ್ವೀಕರಿಸುತ್ತಾರೆ.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…