Advertisement
MIRROR FOCUS

ಅಡಿಕೆಗೆ ಇನ್ನೊಂದು ಹೆಜ್ಜೆ | ಹಾನಿಕಾರಕ ಭೀತಿ ಹೋಗಲಾಡಿಸಲು ಮಹತ್ವದ ಹೆಜ್ಜೆ |

Share

ಅಡಿಕೆ ಹಾನಿಕಾರಕ ಎಂಬ ಗುಮ್ಮ ಕಳೆದ ಹಲವು ಸಮಯಗಳಿಂದ ಇದೆ. ಅಡಿಕೆ ಜಗಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಆರೋಪ ಇದೆ. ಇದಕ್ಕಾಗಿ ಕಳೆದ ಹಲವಾರು ಸಮಯಗಳಿಂದ ಚರ್ಚೆ ನಡೆಯುತ್ತಲೇ ಇದೆ. ಇದೀಗ ಸಿಪಿಸಿಆರ್‌ಐ ಈ ಬಗ್ಗೆ ಬೆಳೆಗಾರರಿಗೆ ಪ್ರಯೋಜನವಾಗುವ ಹೆಜ್ಜೆಯೊಂದಕ್ಕೆ ಇಳಿದಿದೆ.

ಅಡಿಕೆ ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈಗ ಧಾರಣೆಯ ಕಾರಣದಿಂದ ವಿಸ್ತರಣೆಯೂ ಆಗುತ್ತಿದೆ. ಅಡಿಕೆ ಬೆಳೆಯುವ ಶೇ.90 ರಷ್ಟು ಜಗಿಯಲು ಬಳಕೆಯಾಗುತ್ತದೆ. ಅಡಿಕೆ ಮಾರಾಟ ನಂತರ ಏನಾಗುತ್ತದೆ ಎನ್ನುವುದೂ ಬೆಳೆಗಾರರಿಗೆ ತಿಳಿಯುತ್ತಿಲ್ಲ. ಆದರೆ ಬಹುಪಾಲು ಅಡಿಕೆ ಜಗಿಯಲೇ ಬಳಕೆಯಾಗುತ್ತದೆ. ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಇನ್ನೂ ಅಧ್ಯಯನಗಳು ಸಾಕಾಗಿಲ್ಲ. ಆದರೆ ಇದಕ್ಕೆಲ್ಲಾ ಅಡ್ಡಿ ಇರುವುದು  ಅಡಿಕೆ ಹಾನಿಕಾರಕ ಎಂಬ ಗುಮ್ಮ.

ಈ ನಿಟ್ಟಿನಲ್ಲಿ ಕಳೆದ ಹಲವು ಸಮಯಗಳಿಂದ ಚರ್ಚೆ ಆಗುತ್ತಿದೆ. ಇದೀಗ ಸಿಪಿಸಿಆರ್‌ಐ ವಿಜ್ಞಾನಿಗಳು ಈ ಭಯ ನಿವಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದ್ದಾರೆ.  ಇದೇ ತಿಂಗಳಲ್ಲಿ ಅಡಿಕೆಯ ಬಗ್ಗೆ ಉನ್ನತ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖರು ಭಾಗವಹಿಸುತ್ತಾರೆ. ಪ್ರಮುಖ ಸಂಸ್ಥೆಗಳಿಂದ ಸುಮಾರು 25 ವೈದ್ಯರು ಆಗಮಿಸುತ್ತಾರೆ. ಅಡಿಕೆ ಮಾತ್ರವೇ ತಿಂದರೆ ಏನಾಗುತ್ತದೆ..? ಅಡಿಕೆ ಜೊತೆಗೆ ಇತರ ವಸ್ತುಗಳನ್ನು ಬಳಕೆ ಮಾಡಿದರೆ ಏನಾಗುತ್ತದೆ..? ಇತ್ಯಾದಿಗಳ ಬಗ್ಗೆ ಚರ್ಚೆ ಹಾಗೂ ಅಧ್ಯಯನ ನಡೆಸಲಾಗುತ್ತದೆ.  ಅಡಿಕೆಯ ಸಾಧ್ಯತೆಗಳ ಬಗ್ಗೆ ಕ್ಲಿನಿಕಲ್‌ ಆಗಿರುವ ಮಾಹಿತಿಯನ್ನು ಪಡೆಯಲಾಗುತ್ತದೆ.

ಕೇವಲ ಅಡಿಕೆಯನ್ನು ಜಗಿದರೆ ಯಾವುದೇ ಹಾನಿಯಾಗುವುದಿಲ್ಲ ಎನ್ನುವ ವರದಿಯ ಮೂಲಕ ಅಡಿಕೆಯ ಬೇರೆ ಬೇರೆ ಉತ್ಪನ್ನಗಳು ತಯಾರಾಗಬೇಕಿದೆ. ಅಡಿಕೆ ಜಗಿಯುವುದಕ್ಕಿಂತಲೂ ಅಡಿಕೆಯ ಪರ್ಯಾಯ ಉತ್ಪನ್ನಗಳು ತಯಾರಾಗಬೇಕಿದೆ. ಇದಕ್ಕಾಗಿ ಅಡಿಕೆ ಹಾನಿಕಾರಕ ಎಂಬ ಅಂಶ ದೂರವಾಗಬೇಕಿದೆ. ಈ ಹೆಜ್ಜೆ ಇದೀಗ ಮಹತ್ವದ್ದಾಗಿದೆ. ಸಿಪಿಸಿಆರ್‌ ಐ ಈ ಕ್ರಮ ಕೈಗೊಳ್ಳುತ್ತಿದೆ.

ಅಡಿಕೆ ಎಷ್ಟೇ ಉತ್ಪಾದನೆಯಾದರೂ ಅಡಿಕೆಯ ಬಳಕೆ ಅದೇ ಪ್ರಮಾಣದಲ್ಲಿ ಆಗಬೇಕಿದೆ. ಅದು ಜಗಿಯುವುದು  ಮಾತ್ರಾ ಅಲ್ಲ, ಅದರ ಹೊರತಾದ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ವಿಜ್ಞಾನಿಗಳು ವೈದ್ಯರು ಜೊತೆಯಾಗಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ ಬಾಲಚಂದ್ರ ಹೆಬ್ಬಾರ್‌ ಹೇಳುತ್ತಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

2 hours ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

3 hours ago

ಜಾನುವಾರುಗಳ ಮೇವಿಗಾಗಿ ₹25 ಕೋಟಿ ಬಿಡುಗಡೆ

ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…

9 hours ago

ಬೆಂಗಳೂರಿನ ಐಐಎಂನಲ್ಲಿ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’ ಅಧ್ಯಯನ ವರದಿ ಬಿಡುಗಡೆ

ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…

9 hours ago

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ

ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…

17 hours ago

ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ

ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…

17 hours ago