ಭಾರತದ ಹೆಮ್ಮೆಯ ವ್ಯಕ್ತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜನಿಸಿದ ದಿನವಿದು. ಅವರ ಹುಟ್ಟುಹಬ್ಬದ ಸಲುವಾಗಿ ಭಾರತ ಮಾತ್ರವಲ್ಲದೆ ವಿಶ್ವವೇ ಇಂದು ವಿಶ್ವ ವಿದ್ಯಾರ್ಥಿ ದಿನಾಚರಣೆಯನ್ನು ಆಚರಿಸುತ್ತಿದೆ.
1931ರ ಅಕ್ಟೋಬರ್ 15 ರಂದು ಕ್ಷಿಪಣಿ ಮನುಷ್ಯ ಎಂದು ಸುಪ್ರಸಿದ್ಧ ಪಡೆದಿರುವ ಎಪಿಜೆ ಅಬ್ದುಲ್ ಕಲಾಂ ಅವರ ರಾಮೇಶ್ವರಂನಲ್ಲಿ ಜನಿಸಿದರು. ಡಾ ಕಲಾಂ ಒಬ್ಬ ಮಹಾನ್ ಶಿಕ್ಷಕ, ಪ್ರಖ್ಯಾತ ವಿಜ್ಞಾನಿ ಮತ್ತು ಶ್ರೇಷ್ಠ ರಾಜಕಾರಣಿಯಾಗಿ ಬೆಳೆದು ನಮ್ಮ ದೇಶದ ಹೆಮ್ಮೆ ಎನಿಸಿಕೊಂಡರು.
ಸಾಮಾನ್ಯ ಜನರಿಗೆ, ವಿಶೇಷವಾಗಿ ಯುವಕರಿಗೆ ಹತ್ತಿರವಿರುವ ಅವರ ವಿಶಿಷ್ಟ ಗುಣಕ್ಕಾಗಿ ಅವರನ್ನು ಪ್ರೀತಿಯಿಂದ ‘ಜನರ ಅಧ್ಯಕ್ಷ’ ಎಂದು ಕರೆಯಲಾಗುತ್ತದೆ. ಭಾರತದ 11 ನೇ ರಾಷ್ಟ್ರಪತಿಯಾಗಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ, ಡಾ. ಕಲಾಂ ಅವರು ಮರುದಿನವೇ ಬೋಧನೆಗೆ ಮರಳಿದ್ದದ್ದು, ಶಿಕ್ಷಣ ವೃತ್ತಿಯ ಮೇಲಿದ್ದ ಅವರ ಪ್ರೀತಿಗೆ ಒಂದು ಅತಿ ದೊಡ್ಡ ಉದಾಹರಣೆ. ಉತ್ತಮ ಶಿಕ್ಷಕರು ಶ್ರೇಷ್ಠ ಮನುಷ್ಯರನ್ನು ಮಾಡುತ್ತಾರೆ ಎಂದು ಡಾ ಕಲಾಂ ನಂಬಿದ್ದರು.
ವಿಶ್ವ ವಿದ್ಯಾರ್ಥಿ ದಿನದಂದು, ಅವರು ದೊಡ್ಡ ಕನಸು ಕಾಣಲು ವಿದ್ಯಾರ್ಥಿಗಳನ್ನು ಹೇಗೆ ಪ್ರೋತ್ಸಾಹಿಸಿದರು ಮತ್ತು ವೈಫಲ್ಯದ ಬಗ್ಗೆ ಎಂದಿಗೂ ಭಯಪಡಬೇಡಿ ಎಂದು ನಾವು ನೆನಪಿಸಿಕೊಳ್ಳುತ್ತೇವೆ. ಡಾ ಕಲಾಂ ಶಿಕ್ಷಕರಿಗೆ ಆದರ್ಶಪ್ರಾಯರಾಗಿದ್ದರು.
“ಶಿಕ್ಷಕರ ಗುರಿ ಪಾತ್ರ, ಮಾನವೀಯ ಮೌಲ್ಯಗಳನ್ನು ನಿರ್ಮಿಸುವುದು, ತಂತ್ರಜ್ಞಾನದ ಮೂಲಕ ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಮಕ್ಕಳಲ್ಲಿ ನವೀನ ಮತ್ತು ಸೃಜನಶೀಲತೆ ಇರುವ ವಿಶ್ವಾಸವನ್ನು ಬೆಳೆಸುವುದು ಮತ್ತು ಅದು ಭವಿಷ್ಯವನ್ನು ಎದುರಿಸಲು ಸ್ಪರ್ಧಾತ್ಮಕವಾಗಿಸುತ್ತದೆ” ಎಂಬುದು ಕಲಾಂ ಅವರ ನಂಬಿಕೆಯಾಗಿತ್ತು.
ಕಲಾಂ ಅವರ ಉನ್ನತ ದೃಷ್ಟಿಕೋನ, ವಿದ್ಯಾರ್ಥಿಗಳ ಭವಿಷ್ಯದ ಬಗೆಗಿನ ಕಾಳಜಿ ಹಾಗೂ ಅವರ ಸ್ಪೂರ್ತಿದಾಯಕ ವ್ಯಕ್ತಿತ್ವದ ಕಾರಣಗಳಿಂದ ಕಲಾಂ ಹುಟ್ಟಿದ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವಾಗಿ ಆಚರಿಸಲಾಗುತ್ತಿದೆ.
ಈ ಬಾರಿಯ (2020ರ) ವಿಶ್ವವಿದ್ಯಾರ್ಥಿಗಳ ದಿನದ ಆಶಯ ‘ಜನರಿಗೆ ಕಲಿಕೆ, ಗ್ರಹ, ಸಮೃದ್ಧಿ ಮತ್ತು ಶಾಂತಿಯ ಅರಿವು ಮೂಡಿಸುವುದು’.