ಅಡಿಕೆ-ರಬ್ಬರ್‌ ಧಾರಣೆ ಏರಿಕೆ | ಅಡಿಕೆ ಧಾರಣೆ ಏರಿಕೆ ನಿರೀಕ್ಷೆಯಾದರೆ-ರಬ್ಬರ್‌ ಧಾರಣೆ ಸ್ಥಿರತೆಯ ನಿರೀಕ್ಷೆ

October 24, 2020
2:40 PM
ನೇಕ ವರ್ಷಗಳ ಬಳಿಕ ಅಡಿಕೆ ಹಾಗೂ ರಬ್ಬರ್‌ ಧಾರಣೆ ಏರಿಕೆ ಕಂಡಿದೆ. ಅಡಿಕೆ ಧಾರಣೆ 398-400 ರೂಪಾಯಿವರೆಗೆ ಇದ್ದರೆ ರಬ್ಬರ್‌ ಧಾರಣೆ ಇದೀಗ  145  ರೂಪಾಯಿಗೆ ಏರಿಕೆ ಕಂಡಿದೆ. ಕಳೆದ ಕೆಲವು ವರ್ಷಗಳ ಬಳಿಕ ರಬ್ಬರ್‌ ಧಾರಣೆ ಏರಿಕೆ ಕಂಡಿದ್ದು ಇನ್ನೀಗ ಧಾರಣೆ ಏರಿಕೆಯ ಜೊತೆಗೆ ಸ್ಥಿರತೆಯ ನಿರೀಕ್ಷೆಯಲ್ಲಿ  ರಬ್ಬರ್‌ ಬೆಳೆಗಾರರಿದ್ದಾರೆ. ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ ಇದೆ.

Advertisement
Advertisement
Advertisement

ಅಡಿಕೆ ಧಾರಣೆ ಹಂತ ಹಂತವಾಗಿ ಏರಿಕೆ ಕಂಡು ಬೆಳೆಗಾರರಿಗೆ ಉತ್ತಮ ವಾತಾವರಣ ಸೃಷ್ಟಿ ಮಾಡಿತ್ತು. ಕ್ಯಾಂಪ್ಕೋ ಸಹಿತ ಸಹಕಾರಿ ಸಂಸ್ಥೆಗಳು ರೈತರ ಬೆಂಬಲಕ್ಕೆ ನಿಂತು, ಧಾರಣೆ ಸ್ಥಿರತೆ ಹಾಗೂ ಏರಿಕೆಗೆ ಕಾರಣವಾಯಿತು. ಇಂದಿಗೂ ಸಹಕಾರಿ ಸಂಸ್ಥೆಗಳು ಧಾರಣೆ ಸ್ಥಿರತೆಯನ್ನು ಕಾಯ್ದುಕೊಂಡಿವೆ. ಇನ್ನೀಗ 400  ರೂಪಾಯಿಗಿಂತ ಹೆಚ್ಚಿನ ಧಾರಣೆ ನಿರೀಕ್ಷೆ ಮಾಡಲಾಗಿದೆ. ಈಗಾಗಲೇ ಅಡಿಕೆ ಆಮದು ಬಹುತೇಕ ಕಡಿಮೆಯಾಗಿರುವುದು ಹಾಗೂ ಬೇಡಿಕೆ ವ್ಯಕ್ತವಾಗಿರುವುದು  ಧಾರಣೆ ಏರಿಕೆಗೆ ಇರುವ ಪ್ರಮುಖ ಕಾರಣವಾಗಿದೆ. ಈ ನಡುವೆ ಭೂತಾನ್‌ ಜೊತೆಗಿನ ಒಪ್ಪಂದದ ಪ್ರಕಾರ ಭಾರತ ಹಾಗೂ ಭೂತಾನ್‌ ದೇಶಗಳು ಕೃಷಿ ವಸ್ತುಗಳ ವಿನಿಮಯ ಮಾಡುತ್ತವೆ. ಅದರ ಪ್ರಕಾರ ಭೂತಾನ್‌ ದೇಶದಿಂದ ಅಡಿಕೆ ಭಾರತದೊಳಕ್ಕೆ ಬರುವ ಸಾಧ್ಯತೆ ಇದೆ. ಆದರೆ ಭೂತಾನ್‌ ನಲ್ಲಿ  ಕಡಿಮೆ ಪ್ರಮಾಣದಲ್ಲಿ ಅಡಿಕೆ ಬೆಳೆಯುವುದರಿಂದ ಹಾಗೂ ಭಾರತದ ಅಡಿಕೆ ಮಾರುಕಟ್ಟೆಯ ಮೇಲೆ ತೀರಾ ಕಡಿಮೆ ಪ್ರಮಾಣದಲ್ಲಿ  ಅದರ ಪೂರೈಕೆಯಾಗುವುದರಿಂದ ಅಡಿಕೆ ಬೆಳೆಗಾರರಿಗೆ ಸದ್ಯ ಯಾವುದೇ ಆತಂಕವಿಲ್ಲ. ಆದರೆ ಇತರ ದೇಶಗಳ ಅಡಿಕೆ ಭೂತಾನ್‌ ಮೂಲಕ ಒಳಬಾರದಂತೆ ಅಲ್ಲಿನ ವಾಣಿಜ್ಯ ಇಲಾಖೆ ಗಮನಹರಿಸಿದೆ. ಹೀಗಾಗಿ ಅಡಿಕೆ ಧಾರಣೆ ಸದ್ಯಕ್ಕೆ ಏರಿಕೆಯ ನಿರೀಕ್ಷೆ ಇದೆ.

Advertisement

ರಬ್ಬರ್‌ ಧಾರಣೆ ಹಲವು ಸಮಯಗಳ ಬಳಿಕ ಹಂತ ಹಂತವಾಗಿ ಏರಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಧಾರಣೆ ಏರಿಕೆಯಾಗುತ್ತಿರುವುದು  ಆಶಾದಾಯಕ ಬೆಳವಣಿಗೆಯಾಗಿದೆ. ಕೊರೋನಾ ನಂತರದಲ್ಲಿ ಎಲ್ಲಾ ದೇಶಗಳಲ್ಲೂ ರಬ್ಬರ್‌ ಉತ್ಪನ್ನಗಳ ಕಂಪನಿಗಳು ಸಕ್ರಿಯವಾಗಿವೆ. ಹೀಗಾಗಿ ಈಗ ರಬ್ಬರ್‌ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಕೊರೋನಾ ಸಮಯದಲ್ಲಿ ಬಳಕೆ ಮಾಡುವ ರಬ್ಬರ್‌ ಗ್ಲೌಸ್‌ ಹಾಗೂ ಇತ್ಯಾದಿ ವಸ್ತುಗಳಿಗೂ ರಬ್ಬರ್‌ ಅಗತ್ಯವಾಗಿದ್ದು ಸದ್ಯ ನೈಸರ್ಗಿಕ ರಬ್ಬರ್‌ ಬಳಕೆ ಹೆಚ್ಚಾಗಿರುವುದು  ಈಗ ರಬ್ಬರ್‌ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಈ ಧಾರಣೆ ಸ್ಥಿರತೆಯ ಕಡೆಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಆರ್ಥಿಕತೆ ಕೂಡಾ ಏರಿಕೆಗೆ ಈಗ ಕೃಷಿ ವಸ್ತುಗಳ ಕಡೆಗೂ ಹೆಚ್ಚಿನ ಗಮನಹರಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ರಬ್ಬರ್‌ ಧಾರಣೆ ಏರಿಕೆಯಾಗುತ್ತಿದೆ. ಆದರೆ ಕೆಲವು ವರ್ಷಗಳ ಹಿಂದಿನಂತಹ ಧಾರಣೆಗೆ ತಲುಪಲು ಸಾಧ್ಯವಿಲ್ಲ.

Advertisement
ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಈಗ ಆತಂಕ ಪಡಬೇಕಾದ ಅಗತ್ಯವಿಲ್ಲ. ಈಗ ಉತ್ತಮ ಧಾರಣೆ ಇದೆ. ಅಡಿಕೆಗೆ ಈಗಲೂ ಬೇಡಿಕೆ ಇದೆ ಎಂದು ಹೇಳುತ್ತಾರೆ ಕ್ಯಾಂಪ್ಕೋ ಅಧ್ಯಕ್ಷ ಎಸ್‌ ಆರ್‌ ಸತೀಶ್ಚಂದ್ರ.

 

ರಬ್ಬರ್‌ ಧಾರಣೆ ಈ ಹಿಂದೆಯೇ ಏರಿಕೆ ಕಾಣಬೇಕಿತ್ತು. ಈಗ ಧಾರಣೆ ಏರಿಕೆ ಕಂಡಿದೆ. ಕನಿಷ್ಟ 150  ರೂಪಾಯಿಗಿಂತ ಹೆಚ್ಚಿನ ಧಾರಣೆ ರಬ್ಬರ್‌ ಗೆ ಲಭ್ಯವಾಗುವಂತೆ ಕರ್ನಾಟಕದಲ್ಲೂ ರಾಜ್ಯ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಪುತ್ತೂರಿನ ರಬ್ಬರ್‌ ಬೆಳೆಗಾರ ಶ್ರೀನಿಧಿ ಹೇಳುತ್ತಾರೆ.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
24 ಗಂಟೆಗಳಲ್ಲಿ 80 ಭೂಕಂಪ | ಭೂಕಂಪದ ತೀವ್ರತೆಯಲ್ಲಿ ತೈವಾನ್‌ |
April 23, 2024
2:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror