ಅಡಿಕೆ ಧಾರಣೆ ಹಂತ ಹಂತವಾಗಿ ಏರಿಕೆ ಕಂಡು ಬೆಳೆಗಾರರಿಗೆ ಉತ್ತಮ ವಾತಾವರಣ ಸೃಷ್ಟಿ ಮಾಡಿತ್ತು. ಕ್ಯಾಂಪ್ಕೋ ಸಹಿತ ಸಹಕಾರಿ ಸಂಸ್ಥೆಗಳು ರೈತರ ಬೆಂಬಲಕ್ಕೆ ನಿಂತು, ಧಾರಣೆ ಸ್ಥಿರತೆ ಹಾಗೂ ಏರಿಕೆಗೆ ಕಾರಣವಾಯಿತು. ಇಂದಿಗೂ ಸಹಕಾರಿ ಸಂಸ್ಥೆಗಳು ಧಾರಣೆ ಸ್ಥಿರತೆಯನ್ನು ಕಾಯ್ದುಕೊಂಡಿವೆ. ಇನ್ನೀಗ 400 ರೂಪಾಯಿಗಿಂತ ಹೆಚ್ಚಿನ ಧಾರಣೆ ನಿರೀಕ್ಷೆ ಮಾಡಲಾಗಿದೆ. ಈಗಾಗಲೇ ಅಡಿಕೆ ಆಮದು ಬಹುತೇಕ ಕಡಿಮೆಯಾಗಿರುವುದು ಹಾಗೂ ಬೇಡಿಕೆ ವ್ಯಕ್ತವಾಗಿರುವುದು ಧಾರಣೆ ಏರಿಕೆಗೆ ಇರುವ ಪ್ರಮುಖ ಕಾರಣವಾಗಿದೆ. ಈ ನಡುವೆ ಭೂತಾನ್ ಜೊತೆಗಿನ ಒಪ್ಪಂದದ ಪ್ರಕಾರ ಭಾರತ ಹಾಗೂ ಭೂತಾನ್ ದೇಶಗಳು ಕೃಷಿ ವಸ್ತುಗಳ ವಿನಿಮಯ ಮಾಡುತ್ತವೆ. ಅದರ ಪ್ರಕಾರ ಭೂತಾನ್ ದೇಶದಿಂದ ಅಡಿಕೆ ಭಾರತದೊಳಕ್ಕೆ ಬರುವ ಸಾಧ್ಯತೆ ಇದೆ. ಆದರೆ ಭೂತಾನ್ ನಲ್ಲಿ ಕಡಿಮೆ ಪ್ರಮಾಣದಲ್ಲಿ ಅಡಿಕೆ ಬೆಳೆಯುವುದರಿಂದ ಹಾಗೂ ಭಾರತದ ಅಡಿಕೆ ಮಾರುಕಟ್ಟೆಯ ಮೇಲೆ ತೀರಾ ಕಡಿಮೆ ಪ್ರಮಾಣದಲ್ಲಿ ಅದರ ಪೂರೈಕೆಯಾಗುವುದರಿಂದ ಅಡಿಕೆ ಬೆಳೆಗಾರರಿಗೆ ಸದ್ಯ ಯಾವುದೇ ಆತಂಕವಿಲ್ಲ. ಆದರೆ ಇತರ ದೇಶಗಳ ಅಡಿಕೆ ಭೂತಾನ್ ಮೂಲಕ ಒಳಬಾರದಂತೆ ಅಲ್ಲಿನ ವಾಣಿಜ್ಯ ಇಲಾಖೆ ಗಮನಹರಿಸಿದೆ. ಹೀಗಾಗಿ ಅಡಿಕೆ ಧಾರಣೆ ಸದ್ಯಕ್ಕೆ ಏರಿಕೆಯ ನಿರೀಕ್ಷೆ ಇದೆ.
ರಬ್ಬರ್ ಧಾರಣೆ ಹಲವು ಸಮಯಗಳ ಬಳಿಕ ಹಂತ ಹಂತವಾಗಿ ಏರಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಧಾರಣೆ ಏರಿಕೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕೊರೋನಾ ನಂತರದಲ್ಲಿ ಎಲ್ಲಾ ದೇಶಗಳಲ್ಲೂ ರಬ್ಬರ್ ಉತ್ಪನ್ನಗಳ ಕಂಪನಿಗಳು ಸಕ್ರಿಯವಾಗಿವೆ. ಹೀಗಾಗಿ ಈಗ ರಬ್ಬರ್ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಕೊರೋನಾ ಸಮಯದಲ್ಲಿ ಬಳಕೆ ಮಾಡುವ ರಬ್ಬರ್ ಗ್ಲೌಸ್ ಹಾಗೂ ಇತ್ಯಾದಿ ವಸ್ತುಗಳಿಗೂ ರಬ್ಬರ್ ಅಗತ್ಯವಾಗಿದ್ದು ಸದ್ಯ ನೈಸರ್ಗಿಕ ರಬ್ಬರ್ ಬಳಕೆ ಹೆಚ್ಚಾಗಿರುವುದು ಈಗ ರಬ್ಬರ್ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಈ ಧಾರಣೆ ಸ್ಥಿರತೆಯ ಕಡೆಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಆರ್ಥಿಕತೆ ಕೂಡಾ ಏರಿಕೆಗೆ ಈಗ ಕೃಷಿ ವಸ್ತುಗಳ ಕಡೆಗೂ ಹೆಚ್ಚಿನ ಗಮನಹರಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ರಬ್ಬರ್ ಧಾರಣೆ ಏರಿಕೆಯಾಗುತ್ತಿದೆ. ಆದರೆ ಕೆಲವು ವರ್ಷಗಳ ಹಿಂದಿನಂತಹ ಧಾರಣೆಗೆ ತಲುಪಲು ಸಾಧ್ಯವಿಲ್ಲ.
ರಬ್ಬರ್ ಧಾರಣೆ ಈ ಹಿಂದೆಯೇ ಏರಿಕೆ ಕಾಣಬೇಕಿತ್ತು. ಈಗ ಧಾರಣೆ ಏರಿಕೆ ಕಂಡಿದೆ. ಕನಿಷ್ಟ 150 ರೂಪಾಯಿಗಿಂತ ಹೆಚ್ಚಿನ ಧಾರಣೆ ರಬ್ಬರ್ ಗೆ ಲಭ್ಯವಾಗುವಂತೆ ಕರ್ನಾಟಕದಲ್ಲೂ ರಾಜ್ಯ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಪುತ್ತೂರಿನ ರಬ್ಬರ್ ಬೆಳೆಗಾರ ಶ್ರೀನಿಧಿ ಹೇಳುತ್ತಾರೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…