ಪುತ್ತೂರು: ಅಡಿಕೆ ಮಾರುಕಟ್ಟೆ ಒಮ್ಮೆಲೇ ಏರಿಕೆ ಕಂಡಿದೆ. ಹೊಸ ಅಡಿಕೆ , ಹಳೆ ಅಡಿಕೆ ಹಾಗೂ ಡಬ್ಬಲ್ ಚೋಲ್ ಧಾರಣೆಯಲ್ಲೂ ಏರಿಕೆಯಾಗಿದೆ.
ಈಗ ಅಧಿಕೃತವಾಗಿ 400 ರೂಪಾಯಿ ಧಾರಣೆಯನ್ನು ಅಡಿಕೆ ಕಂಡಿದೆ. ಹೊಸ ಅಡಿಕೆ 330 ರೂಪಾಯಿ, ಹಳೆ ಅಡಿಕೆ 400 ರೂಪಯಿ ಹಾಗೂ ಡಬ್ಬಲ್ ಚೋಲ್ 410 ರೂಪಾಯಿಗೆ ಏರಿಕೆಯಾಗಿದೆ.
ಗುರುವಾರ ಹೊಸ ಅಡಿಕೆ 300 ರೂಪಾಯಿ, ಹಳೆ ಅಡಿಕೆ 383 ರೂಪಯಿ ಹಾಗೂ ಡಬ್ಬಲ್ ಚೋಲ್ 400 ರೂಪಾಯಿ ಧಾರಣೆ ಇದ್ದರೆ ಶುಕ್ರವಾರ ಒಮ್ಮೆಲೇ ಧಾರಣೆ ಏರಿಕೆಯಾಗಿದೆ. ಹೊಸ ಅಡಿಕೆಗೆ 30 ರೂಪಾಯಿಯಷ್ಟು ಏರಿಕೆಯಾಗಿದೆ. ಇದುವರೆಗಿನ ದಾಖಲೆಗಳ ಪ್ರಕಾಋ ಈ ರೀತಿಯ ಏರಿಕೆ ಮೊದಲ ಬಾರಿಯಾಗಿದೆ. ಧಾರಣೆ ಏರಿಕೆಯಾಗುತ್ತಲೇ ಅಡಿಕೆ ಮಾರುಕಟ್ಟೆ ವಲಯದಲ್ಲಿ ಸಂಚಲನ ಮೂಡಿಸಿದೆ. ಕಳೆದ ಒಂದು ವಾರದಿಂದ ಖಾಸಗಿ ವಲಯದಲ್ಲಿ ಧಾರಣೆ ಏರಿಕೆಯಾಗುತ್ತಲೇ ಇತ್ತು. ಇದೀಗ ಕ್ಯಾಂಪ್ಕೋ ಕೂಡಾ ಧಾರಣೆ ಏರಿಕೆ ಮಾಡಿದೆ. ಈ ಮೂಲಕ ಅಧಿಕೃತವಾಗಿ ಸಾರ್ವಕಾಲಿಕ ದಾಖಲೆಯ ಧಾರಣೆ ಕಂಡಿದೆ. ಮುಂದೆ ಏರಿಕೆಯ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ. ಅಡಿಮೆ ಆಮದು ಆಗದೇ ಇದ್ದರೆ ಧಾರಣೆ ಏರಿಕೆ ನಿರೀಕ್ಷೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್ 14 ಅಥವಾ 15ರಿಂದ ಹಲವೆಡೆ…
ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್ ಮತ್ತು ಆಹಾರ ವಿತರಣೆ…
ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…
Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…
ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…