ಅಡಿಕೆ ಕಳ್ಳ ಸಾಗಾಟಕ್ಕೆ ಸತತ ಪ್ರಯತ್ನ ನಡೆಯುತ್ತಿದೆ. ಅಸ್ಸಾಂ ಗಡಿ ಭಾಗದಲ್ಲಿ ಮಾತ್ರಾ ಅಡಿಕೆ ಕಳ್ಳ ಸಾಗಾಟಕ್ಕೆ ಸುಲಭದಲ್ಲಿ ಸಾಧ್ಯವಾಗುತ್ತಿಲ್ಲ. ಇದೀಗ ಮತ್ತೆ 235 ಚೀಲದ ಸುಮಾರು 52,64,000 ರೂಪಾಯಿ ಮೌಲ್ಯದ ಅಡಿಕೆಯನ್ನು ಅಸ್ಸಾಂ ಗಡಿ ಭದ್ರತಾ ಪಡೆಯ ಸಿಬಂದಿಗಳು ವಶಕ್ಕೆ ಪಡೆದಿದ್ದಾರೆ.
ಅಸ್ಸಾಂನ ಮಿಜೋರಾಂನ ಚಂಪೈ ಜಿಲ್ಲೆಯಿಂದ ದಾಸ್ತಾನು ಇರಿಸಿದ್ದ 235 ಚೀಲದ ಸುಮಾರು 52,64,000 ರೂಪಾಯಿ ಮೌಲ್ಯದ ಅಡಿಕೆಯನ್ನು ಮಂಗಳವಾರ ಅಸ್ಸಾಂ ಗಡಿ ಭದ್ರತಾ ಪಡೆಯ ಸಿಬಂದಿಗಳು ವಶಕ್ಕೆ ಪಡೆದಿದ್ದಾರೆ. ಇಷ್ಟೇ ಅಲ್ಲ, ಈ ಗಡಿ ಭಾಗದ ಮೂಲಕ ಅಕ್ರಮವಾಗಿ ಮರ ಸಾಗಾಟ, ಹೆರಾಯಿನ್ ಸೇರಿದಂತೆ ಮಾದಕ ವಸ್ತುಗಳ ಸಾಗಾಟವಾಗುತ್ತಿರುವ ಕಾರಣದಿಂದ ಅಸ್ಸಾಂ ಗಡಿಯಲ್ಲಿ ಗಡಿಭದ್ರತಾ ಸಿಬಂದಿಗಳು ಹದ್ದಿನ ಕಣ್ಣು ಇರಿಸಿದ್ದಾರೆ. ಹೀಗಾಗಿ ಅಡಿಕೆ ಕೂಡಾ ಅಕ್ರಮವಾಗಿ ಸಾಗಾಟವಾಗಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳನ್ನು ತಪ್ಪಿಸಿ ಸಣ್ಣ ಪ್ರಮಾಣದಲ್ಲಿ ಅಡಿಕೆ ಅಸ್ಸಾಂ ಮೂಲಕ ಭಾರತದೊಳಕ್ಕೆ ಪ್ರವೇಶ ಮಾಡಿದರೂ ಭಾರೀ ಪ್ರಮಾಣದಲ್ಲಿ ಅಡಿಕೆ ಭಾರತದೊಳಕ್ಕೆ ಈಗ ಪ್ರವೇಶಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತದ ಅಡಿಕೆ ಧಾರಣೆ ಮೇಲೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ.
ಕಳೆದ ಕೆಲವು ದಿನಗಳಲ್ಲಿ ಅಸ್ಸಾಂ ಗಡಿ ಭದ್ರತಾ ಪಡೆಯುವ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಕಳ್ಳಸಾಗಣೆ ಮಾಡಲು ಉದ್ದೇಶಿಸಿರುವ ವಿವಿಧ ಸರಕುಗಳನ್ನು ವಶಪಡಿಸಿಕೊಂಡಿದೆ. ಅದರಲ್ಲಿ ಅಡಿಕೆಯೂ ಸೇರಿದೆ. ಈಚೆಗೆ ಕಳ್ಳಸಾಗಣೆ ಚಟುವಟಿಕೆಗಳು ಅಸ್ಸಂ ರಾಜ್ಯದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಈ ಕಾರಣದಿಂದ ಅಧಿಕಾರಿಗಳು ಆಗಾಗ ಧಾಳಿ ಮಾಡುತ್ತಿದ್ದಾರೆ. ಇದೇ ವೇಳೆ ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆಯಲ್ಲಿ 324 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದೆ. ಇದುವರೆಗೆ ವಶಪಡಿಸಿಕೊಂಡ ವಸ್ತುವಿನ ಅಂದಾಜು ಮೌಲ್ಯ 1,45,80,000 ರೂಪಾಯಿ ಎಂದು ಇಲಾಖೆ ಹೇಳಿದೆ.
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…