Advertisement
MIRROR FOCUS

#Arecanut | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬಣ್ಣದ ಸೀರೆ | ಕಿನ್ನಿಗೋಳಿಯಲ್ಲಿ ಬಿಡುಗಡೆಗೊಂಡ ನೈಸರ್ಗಿಕ ಬಣ್ಣದ ಸೀರೆ |

Share

ಅಡಿಕೆ ಚೊಗರಿನ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರು ಮಾಡಿದ ಸೀರೆಯ ಕಿನ್ನಿಗೋಳಿಯಲ್ಲಿ ಬಿಡುಗಡೆಗೊಂಡಿತು. ತಾಳಿಪಾಡಿ ನೇಕಾರರ ಸೊಸೈಟಿಯಲ್ಲಿ ಅಡಿಕೆಯ ಚೊಗರು ಮತ್ತು ಇತರ ನೈಸರ್ಗಿಕ ಬಣ್ಣಗಳಿಂದ  ಜಿಐ ಟ್ಯಾಗ್‌  ಹೊಂದಿರುವ ಉಡುಪಿ ಸೀರೆಯು ಬಿಡುಗಡೆಯಾಯಿತು.

Advertisement
Advertisement
Advertisement
Advertisement
ನೈಸರ್ಗಿಕ ಬಣ್ಣದ ನೂಲು

ಕಿನ್ನಿಗೋಳಿಯ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಕದಿಕೆ ಟ್ರಸ್ಟ್ ಮಾರ್ಗದರ್ಶನದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಅಡಿಕೆ ಚೊಗರು ಇತರ ನೈಸರ್ಗಿಕ ಬಣ್ಣಗಳಿಂದ ತಯಾರಾದ ಉಡುಪಿ ಸೀರೆ ಬಿಡುಗಡೆ ನಡೆಯಿತು.

Advertisement
ನೈಸರ್ಗಿಕ ಬಣ್ಣದ ಉಡುಪಿ ಸೀರೆ ಬಿಡುಗಡೆ

ಕಾರ್ಯಕ್ರಮದಲ್ಲಿ ಮಾತನಾಡಿದ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ, ಅಡಿಕೆಯ ಬಣ್ಣ ಹಾಗೂ ನೈಸರ್ಗಿಕ ಬಣ್ಣದಿಂದ ತಯಾರು ಮಾಡಿದ ಬಟ್ಟೆಗಳ ಅನಿವಾರ್ಯತೆ ಬಗ್ಗೆ ಮಾತನಾಡಿದರು. ಜಪಾನ್‌ನ ರಾಜಮನೆತನಗಳು 1,200 ವರ್ಷಗಳ ಹಿಂದೆ ಅಡಿಕೆ ಬಣ್ಣವನ್ನು ಬಳಸುತ್ತಿದ್ದರು. ಅಂದರೆ ಅಂದು ಅಡಿಕೆಯ ಬಣ್ಣ ಪ್ರತಿಷ್ಟೆಯ ಪ್ರತೀಕವಾಗಿತ್ತು. ಜಪಾನಿನ ರಾಜಮನೆತನದವರು ಇಂಡೋನೇಷ್ಯಾದಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದ್ದರು  ಶ್ರೀ ಪಡ್ರೆ ಹೇಳಿದರು. ಇಂದು ರಾಸಾಯನಿಕ ರಹಿತವಾದ ಬಣ್ಣಗಳ ಅನಿವಾರ್ಯತೆ ಇದೆ. ರಾಸಾಯನಿಕ ಬಣ್ಣಗಳ ಕಾರಣದಿಂದ ಮಾಲಿನ್ಯಗಳು ಹೆಚ್ಚಾಗುತ್ತಿವೆ, ಈ ಕಾರಣದಿಂದ ನೈಸರ್ಗಿಕ ಬಣ್ಣಗಳ ಬಳಕೆ ಅಗತ್ಯವಿದೆ ಎಂದರು.

ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಮಾತನಾಡಿದರು

ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತಾ ರೈ ಮಾತನಾಡಿ, ನೈಸರ್ಗಿಕ ಬಣ್ಣಗಳಿಂದ ಕೂಡಿದ ಸೀರೆಗಳು ಪರಿಸರ ಸ್ನೇಹಿಯಾಗಿದ್ದು, ನೇಕಾರರಿಕೆ ಹಾಗೂ ನೇಕಾರರಿಗೂ ಗೌರವ ಸಿಗುವ ಕೆಲಸ ಆಗಬೇಕಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಸೆಲ್ಕೊ ಇಂಡಿಯಾದ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ,ಶಿರ್ವಾದ ಇಕೋ ಗ್ರೋಫಾರ್ಮ್‌ನ ಎಂ ಆರ್‌ ಪೈ, ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಉಪಸ್ಥಿತರಿದ್ದರು. ಕದಿಕೆ ಟ್ರಸ್ಟ್‌ ನ ಬಿ ಸಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಬಣ್ಣ ಹಾಗೂ ನೈಸರ್ಗಿಕ ಬಣ್ಣದ ಮೂಲವಸ್ತುಗಳು

2018 ರಲ್ಲಿ ಉಡುಪಿ ಸೀರೆ ಚರಿತ್ರೆಯಲ್ಲೇ ಮೊದಲ ಬಾರಿ ಸಹಜ ಬಣ್ಣದ ಸೀರೆಗಳನ್ನು ತಾಳಿಪಾಡಿ ಸಂಘದಲ್ಲಿ ಚರಕ ಸಂಸ್ಥೆಯ ನೆರವಿನೊಂದಿಗೆ ಕದಿಕೆ ಟ್ರಸ್ಟ್ ಸಹಯೋಗದಲ್ಲಿ ತಯಾರಿಸಲಾಗಿತ್ತು. ಈಗ ಸೆಲ್ಕೋ ಇಂಡಿಯಾ ಗ್ರಾಂಟ್ ನಿಂದ ದೊರಕಿದ ಸಹಜ ಬಣ್ಣ ತಯಾರಿಯ ಉಪಕರಣಗಳಿಂದ , ಮಾಮಿ ಸ್ಕೂಲ್ ಹೌಸ್ ಆಫ್ ನ್ಯಾಚುರಲ್ ಡಯಿಂಗ್ ಕೆನಡಾ ಇವರು ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಗೆ ಕೊಡಮಾಡಿದ ಆನ್ಲೈನ್ ಸ್ಕಾಲರ್ಸ್ ಶಿಪ್ ಮಾರ್ಗದರ್ಶನದಲ್ಲಿ ಸಹಜ ಬಣ್ಣ ಸೀರೆಗಳನ್ನು ತಾಳಿಪಾಡಿ ಸಂಘದ ಬಣ್ಣಗಾರರು ಮತ್ತು ನೇಕಾರರು ತಯಾರಿಸಿದ್ದಾರೆ.

Advertisement

ಅಡಿಕೆ ಚೊಗರು , ಮಂಜಿಷ್ಟ , ನೀಲಿ, ಗೊಂಡೇಹೂ , ದಾಳಿಂಬೆ ಸಿಪ್ಪೆ, ಕಾಡು ಬಾದಾಮಿ ಇತ್ಯಾದಿ ಸಸ್ಯ ಮೂಲ ಬಣ್ಣಗಳನ್ನು ಇದಕ್ಕೆ ಬಳಸಲಾಗಿದೆ. ಸಹಜ ಬಣ್ಣದ ಸೀರೆಗಳು ಪರಿಸರ ಸ್ನೇಹಿಯಾಗಿವೆ. ಉತ್ತಮ ಬೇಡಿಕೆ ಇದೆ. ನೇಕಾರರು ಮತ್ತು ಬಣ್ಣ ಮಾಡುವರಿಗೆ ಹೆಚ್ಚುವರಿ ವೇತನ ದೊರೆಯುತ್ತದೆ. ತಯಾರಿಸುವವರು ಮತ್ತು ತೊಡುವವರ ಆರೋಗ್ಯಕ್ಕೂ ಒಳ್ಳೆಯದಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

2 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

3 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

3 days ago

ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…

3 days ago