ವಿಶ್ವದಲ್ಲಿ ಅಡಿಕೆ ಹೆಚ್ಚು ಬೆಳೆಯುವ ದೇಶ ಭಾರತ. ಹಾಗಿದ್ದರೂ ಇಂದಿಗೂ ಅಡಿಕೆ ಹಾನಿಕಾರಕ ಎಂಬ ಹಣೆಪಟ್ಟಿಯಿಂದ ಹೊರಬಂದಿಲ್ಲ. ಸರ್ಕಾರ, ಇಲಾಖೆ, ಅಧಿಕಾರಿಗಳ ನಡುವೆ ತಾಕಲಾಟ ನಡೆಯುತ್ತಲೇ ಇದೆ. ಆದರೆ ಪುಟ್ಟ ದೇಶ ವಿಯೆಟ್ನಾಂನಲ್ಲಿ ಅಡಿಕೆಯಿಂದ ಎನರ್ಜಿ ಡ್ರಿಂಕ್ ತಯಾರಾಗಿ ಮಾರಾಟವಾಗುತ್ತಿದೆ . ಒಂದಲ್ಲ ಮೂರು ಬಗೆಯ ಎನರ್ಜಿ ಡ್ರಿಂಕ್ ಅಡಿಕೆಯಿಂದಲೇ ತಯಾರಾಗುತ್ತಿದೆ.
ವಿಯೆಟ್ನಾಂ ದೇಶದಲ್ಲಿ ವಿವಿಧ ಬಗೆಯ ಕೃಷಿ ಉತ್ಪನ್ನಗಳು ತಯಾರಾಗುತ್ತಿದೆ. ಅದರಲ್ಲಿ ಅಡಿಕೆಯ ಎನರ್ಜಿ ಡ್ರಿಂಕ್ ಕೂಡಾ ಒಂದು. ಎಳೆ ಅಡಿಕೆಯಿಂದ ಈ ಡ್ರಿಂಕ್ ತಯಾರು ಮಾಡಲಾಗುತ್ತಿದೆ. 250 ಎಂಎಲ್ ನ ಬಾಟಲಿಯಲ್ಲಿ ವಿಯೆಟ್ನಾಂನಲ್ಲಿ ಈ ಡ್ರಿಂಕ್ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. 24 ತಿಂಗಳು ಬಾಳ್ವಿಕೆಯನ್ನು ಈ ಡ್ರಿಂಕ್ ಹೊಂದಿದೆ.ಕಳೆದ ಒಂದರಡು ವರ್ಷಗಳಿಂದ ಈ ಡ್ರಿಂಕ್ ವಿಯೆಟ್ನಾಂ ಮಾರುಕಟ್ಟೆಯಲ್ಲಿ ಹಾಗೂ ಇತರೆಡೆಗೂ ಸರಬರಾಜಾಗುತ್ತಿದೆ.
ಅಡಿಕೆ ವಿಶ್ವದೆಲ್ಲೆಡೆ ಬಳಕೆಯಲ್ಲಿದ್ದರೂ ಅಡಿಕೆ ತಿನ್ನುವುದು ಹಾನಿಕಾರಕ ಎಂಬ ಅಪವಾದಗಳು ಕೇಳುತ್ತಲೇ ಇದೆ. ಈಚೆಗೆ ಚೀನಾದಲ್ಲಿ ಯುವ ಗಾಯಕನೊಬ್ಬ ಕ್ಯಾನ್ಸರ್ ನಿಂದ ನಿಧನರಾದ ಬಳಿಕ ಅಡಿಕೆ ಹಾನಿಕಾರಕ ಎಂದು ವ್ಯಾಪಕವಾಗಿ ಹಬ್ಬಿತು.
ಆದರೆ ಅಡಿಕೆಯ ಬಳಕೆ ವಿವಿಧ ರೂಪದಲ್ಲಿದೆ. ಅಡಿಕೆಯ ಎನರ್ಜಿ ಡ್ರಿಂಕ್ ಈಗ ಹೆಚ್ಚು ಗಮನ ಸೆಳೆದಿದೆ. ಅದಕ್ಕೂ ಮೊದಲು ರಾಜ್ಯದಲ್ಲಿ ನಿವೇದನ್ ಎಂಬವರು ಅಡಿಕೆ ಚಹಾ ತಯಾರಿಸಿ ದೇಶ ವಿದೇಶದ ಗಮನ ಸೆಳೆದಿದ್ದರು. ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಭಾರತದಲ್ಲಿ ಕೂಡಾ ಅತೀ ಅಗತ್ಯವಾಗಿ ಅಧ್ಯಯನಗಳು ನಡೆಯಬೇಕಾಗಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…