Advertisement
ಸುದ್ದಿಗಳು

ಅಡಿಕೆ ಕೃಷಿಯ ಬಗ್ಗೆ ಪರೋಕ್ಷ ಎಚ್ಚರಿಕೆ ನೀಡಿದ ಸಚಿವೆ ಶೋಭಾ ಕರಂದ್ಲಾಜೆ |

Share
ಅಡಿಕೆ ಪರೀಕ್ಷೆ ನಡೆಸಿದ ಅಂದಿನ ಅಧಿಕಾರಿಗಳು ವಿರುದ್ಧವಾದ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ, ಈಗ ಅಡಿಕೆಗೆ ವಿವಿಧ ರೋಗಗಳು ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಡಿಕೆ ಮೇಲೆ ತೂಗುಗತ್ತಿ ಇದೆ. ಹೀಗಾಗಿ ಅಡಿಕೆ ಬಿಟ್ಟು ಪರ್ಯಾಯ  ಕೃಷಿಯ ಬಗ್ಗೆ ಕರಾವಳಿಯ ರೈತರು ಯೋಚಿಸಬೇಕು ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಡಬ ತಾಲೂಕಿನ ಕಾಣಿಯೂರು ಗ್ರಾಮ ಪಂಚಾಯತ್ ನ ನೂತನ ಸಭಾಭವನ ಹಾಗೂ ಬೈತಡ್ಕ ಗೆಜ್ಜರ್ಮೆ 5 ಕೋಟಿಯ ರಸ್ತೆ ಕಾಮಗಾರಿ, ಜನೌಷಧಿ ಕೇಂದ್ರ ಉದ್ಘಾಟಿಸಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು.
ಅಡಿಕೆ ಆಮದು ತೆರಿಗೆ ವಿಧಿಸಿದ ಕಾರಣ ಆಮದು ನಿಂತಿದೆ. ಆದರೆ ಅಡಿಕೆ ಮೇಲೆ ಇತರ ತೂಗುಗತ್ತಿ  ಇದೆ. ಅಡಿಕೆಯ ಹಾನಿ ಅಥವಾ ವಿಷಕಾರಿ ಅಂಶಗಳ ಪಟ್ಟಿಗೆ ಸೇರಿಸುವುದಿಲ್ಲ.  ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ ಆದರೆ ಸುಪ್ರಿಂ ಕೋರ್ಟ್ ನ ತೂಗುಗತ್ತಿ ಅಡಿಕೆ ಮೇಲೆ ಸದಾ ಇದೆ ಎಂದು ಸಚಿವೆ ಹೇಳಿದರು.  ಈ ನಡುವೆಯೇ ಅಡಿಕೆ ಕೃಷಿಗೆ ಹಳದಿ ರೋಗ ಮತ್ತು ಎಲೆಚುಕ್ಕೆ ರೋಗ ಭಾಧಿಸಿದೆ.ವಿಜ್ಞಾನಿಗಳೂ ಸೇರಿದಂತೆ ಹಲವು ಸಂಶೋಧನೆ ನಡೆಯುತ್ತಿದೆ. ಹೊಸ ಹೊಸ ರೋಗಗಳು ಅಡಿಕೆಯನ್ನು ಬಾಧಿಸುತ್ತವೆ. ಹೀಗಾಗಿ ಅಡಿಕೆ ಬಿಟ್ಟು ಪರ್ಯಾಯವಾಗಿ ತಾಳೆ ಕೃಷಿ ಬಗ್ಗೆ ಕರಾವಳಿಯ ರೈತರು ಯೋಚಿಸಬೇಕು ಎಂದು ಎಚ್ಚರಿಸಿದರು.
ಭಾರತದಲ್ಲಿ ಎಲ್ಲಾ ತಿನ್ನುವ ಆಹಾರಗಳನ್ನು  ಯಥೇಚ್ಛವಾಗಿ ಬೆಳೆಯುತ್ತೇವೆ,  ಆದರೆ ಅಡುಗೆಗೆ ಎಣ್ಣೆ ಉಪಯೋಗಿಸುವ ಎಣ್ಣೆಗಳನ್ನು ಹೊರದೇಶದಿಂದ ತರುತ್ತೇವೆ. ಇಲ್ಲಿಯ ಅಡಿಕೆ ಕೃಷಿಕರು ಅಡುಗೆ ಎಣ್ಣೆಯ ಕೃಷಿಯಾದ ತಾಳೆ ಕೃಷಿಗೆ ಹೆಚ್ಚು ಮಹತ್ವ ಕೊಟ್ಟು ಅದನ್ನು ಬೆಳೆಸಬೇಕು, ಸ್ವಲ್ಪ ಜಾಗದಲ್ಲಿ ತಾಳೆ ಬೆಳೆಸಿ ಎಂದು ಶೋಭಾ ಅಡಿಕೆ ಕೃಷಿಕರಿಗೆ ಮನವಿ ಮಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ  ಮೀನುಗಾರಿಕಾ ಸಚಿವ ಅಂಗಾರ ಮಾತನಾಡಿ ಅಡಿಕೆ ಕೃಷಿಗೆ ಹಳದಿ ಹಾಗೂ ಎಲೆಚುಕ್ಕೆ ರೋಗದ ನಂತರ ಬದಲಿ ಕೃಷಿ ಬಗ್ಗೆ ಯೋಚನೆ ಮಾಡಬೇಕು ಎಂದರು.  ಒಳನಾಡ ಮೀನು ಸಾಕಾಣಿಕೆ, ಬಯೋಪ್ಲಾಕ್ ಮೀನುಗಾರಿಕೆ  ಬಗ್ಗೆ ಮಾಹಿತಿ ನೀಡಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 26.09.2026 | ಸೆ.28ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು: ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿಯುವ ಮುನ್ನವೇ ಮಳೆಯ ವಾತಾವರಣದಲ್ಲಿ ಬದಲಾವಣೆಯ ಲಕ್ಷಣಗಳು…

59 minutes ago

ಜಿಐ ಮಾನ್ಯತೆಯ ‘ಗುಲ್ಬರ್ಗಾ ತೊಗರಿ ಬೇಳೆ’ಗೆ ಮಾಲ್ಡೀವ್ಸ್‌ ಮಾರುಕಟ್ಟೆ – ರಫ್ತಿಗೆ ಕೇಂದ್ರದ ಅನುಮತಿ

ಜಿಐ ಮಾನ್ಯತೆ ಪಡೆದ ‘ಗುಲ್ಬರ್ಗಾ ತೊಗರಿ ಬೇಳೆ’ಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ಕೇಂದ್ರ…

5 hours ago

ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ

ನಾಗರಿಕ ಪ್ರಜ್ಞೆ ಎಂದರೆ ಕಾನೂನಿನ ಭಯದಿಂದ ನಿಯಮ ಪಾಲಿಸುವುದಷ್ಟೇ ಅಲ್ಲ; ಇತರರ ಹಕ್ಕು,…

5 hours ago

ಹಾಲಿನ ದರ ಕನಿಷ್ಠ ₹10 ಹೆಚ್ಚಳಕ್ಕೆ ಕೆಎಂಎಫ್‌ ಮನವಿ – ಹೈನುಗಾರರಿಗೆ ಏನು ಪ್ರಯೋಜನ..? ಗ್ರಾಹಕರಿಗೆ ಎಷ್ಟು ಹೊರೆ..?

ರಾಜ್ಯದಲ್ಲಿ ಹಾಲಿನ ದರವನ್ನು ಕನಿಷ್ಠ ಲೀಟರ್‌ಗೆ ₹10 ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಸರ್ಕಾರಕ್ಕೆ…

7 hours ago

ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು

ಹಳೆಯ ನೋವು, ಕೋಪ, ತಿರಸ್ಕಾರ ಮತ್ತು ನಿರೀಕ್ಷೆಗಳ ಭಾರವನ್ನು ಹೊಸ ಸಂಬಂಧಗಳ ಮೇಲೆ…

19 hours ago

ರೈತರಿಗೆ ವಿದ್ಯುತ್‌ ಶಾಕ್ – ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ- ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ

ಮಳೆ ಕೊರತೆ ಮತ್ತು ಜಲವಿದ್ಯುತ್ ಉತ್ಪಾದನೆ ಕುಸಿತದ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ…

1 day ago