MIRROR FOCUS

ಅಡಿಕೆ ಬೆಳೆಗಾರ ತನ್ನ‌ ತೋಟದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಬೇಕಿದೆ | ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ | ವಿಟ್ಲದ ಸಿ.ಪಿ.ಸಿ.ಆರ್. ಐ ಕಾರ್ಯಕ್ರಮ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೊರೋನಾ ನಂತರ ಅಡಿಕೆ ಧಾರಣೆ ಏರಿಕೆಯಾಗಿದೆ. ಈ ಸಮಯದಲ್ಲಿ ಅಡಿಕೆ ಬೆಳೆಗಾರ ತನ್ನ ಮಟ್ಟವನ್ನು ಏರಿಕೆ ಮಾಡಿಕೊಳ್ಳುವುದರ ಜೊತೆಗೆ ತನ್ನ ತೋಟದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗಮನಹರಿಸಬೇಕಿದೆ.  ಕೃಷಿಕ ತನ್ನ‌ ತೋಟದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಬೇಕಿದೆ ಎಂದು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಹೇಳಿದರು.

Advertisement
Advertisement
ಕಾರ್ಯಕ್ರಮವನ್ನು ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ ಉದ್ಘಾಟಿಸಿದರು. | Photo Credit : Shyam CPCRI

ಅವರು  ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಕ್ಷೇತ್ರ ವಿಟ್ಲದಲ್ಲಿ ಕಲ್ಲಿಕೋಟೆ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ಪ್ರಾಯೋಜಕತ್ವದಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಹಾಗೂ ವಿಜಯವಾಣಿ ಸಹಯೋಗದಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಹಕಾರದಲ್ಲಿ ನಡೆದ ಅಡಿಕೆ ತಳಿಗಳು ಮತ್ತು ಅಡಿಕೆಯಲ್ಲಿ ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಡಿಕೆ ಹಳದಿ ಎಲೆರೋಗ ಹಲವು ವರ್ಷಗಳಿಂದಲೇ ಇದೆ. ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಈಗ ಎಲೆಚುಕ್ಕಿ ರೋಗ ಕಂಗೆಡಿಸಿದೆ, ವ್ಯಾಪಕವಾಗಿದೆ. ಇಂತಹ ಸಂದರ್ಭದಲ್ಲಿ ಕೃಷಿಕರಲ್ಲಿ ಆತ್ಮವಿಶವಾಸ ಮೂಡಿಸುವ ಕೆಲಸ ಆಗಬೇಕಿದೆ ಎಂದರು. ಕೃಷಿಕರು ವಿಜ್ಞಾನಿಗಳ ನಡುವಿನ ಸಂಬಂಧ ಗಟ್ಟಿಯಾಗಬೇಕು, ಈ ಮೂಲಕ ಕೃಷಿಯ ಅಭಿವೃದ್ಧಿ ಆಗಬೇಕು ಎಂದು ಶಂ ನಾ ಖಂಡಿಗೆ ಹೇಳಿದರು.

ಅಡಿಕೆ ಮಾರುಕಟ್ಟೆ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿದರು. Photo Credit : Shyam CPCRI

ಅಡಿಕೆ ಮಾರುಕಟ್ಟೆ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ ಯಾವುದೇ ರೋಗಗಳಿಗೆ ದೀರ್ಘಕಾಲಿಕ ಪರಿಹಾರಗಳನ್ನು ನೀಡಲು ಅಧ್ಯಯನಗಳು ಅವಶ್ಯಕವಾಗಿದೆ. ಸಂಶೋಧನೆಯಲ್ಲಿ ಹಲವು ಸಮಸ್ಯೆಗಳಿದ್ದು, ಕೇಳಿದ ತಕ್ಷಣ ಪರಿಹಾರ ಸಿಕ್ಕಲು ಸಾಧ್ಯವಿಲ್ಲ. ಸಂಶೋಧಕ ಸಂಶೋಧನೆಯನ್ನು ಆಸಕ್ತಿಗಾಗಿ, ಒತ್ತಡದಿಂದ, ಪ್ರೇರಣೆಯಿಂದ, ಆಕರ್ಷಣೆಯಿಂದ ಮಾಡುತ್ತಿರುತ್ತಾರೆ ಎಂದರು.ವಿಜ್ಞಾನಿಗಳು ಸಾಧ್ಯವಾದಷ್ಟು ವೇಗದಲ್ಲಿ ಸಂಶೋಧನೆಯನ್ನು ಮಾಡುವ ಕಾರ್ಯವಾದಾಗ ಎಲ್ಲಾ ರೈತರು ಒಟ್ಟಿಗೆ ಸದಾ ಇರುತ್ತಾರೆ. ವಿಜ್ಞಾನಿಗಳಿಗೆ ಬೇಡಿಕೆ ಇದ್ದು, ಸಂಶೋಧನೆಯನ್ನು ರೈತರಿಗೆ ಹೆಚ್ಚು ಪೂರೈಕೆಯ ಮಾಡುವ ಕಾರ್ಯಾವಾಗಬೇಕು. ಅಡಕೆ, ತೆಂಗು, ಕೊಕ್ಕೋ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ, ಮೌಲ್ಯ ಹೆಚ್ಚಾಗುತ್ತದೆ. ದೂರದೃಷ್ಟಿಯ ಪರಿಹಾರವನ್ನು ಒದಗಿಸಿದಾಗ ಕೃಷಿಕರಿಗೆ ಒಳ್ಳೆಯ ಲಾಭ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಕೆ. ಬಿ. ಹೆಬ್ಬಾರ್ ವಹಿಸಿದ್ದರು.ವಿಜಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಂದ್ರ ಎಸ್. ವಾಗ್ಲೆ ಉಪಸ್ಥಿತರಿದ್ದರು.

Advertisement
ವಿಜಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಂದ್ರ ಎಸ್. ವಾಗ್ಲೆ ಮಾತನಾಡಿದರು | Photo Credit : Shyam CPCRI

ನಯನಾ ಪ್ರಾರ್ಥಿಸಿದರು. ಭಾರತೀಯ ಕೃಷಿ ಸಂಶೋಧನಾ ಪರಿಷತ್ – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ವಿಟ್ಲ ಮುಖ್ಯಸ್ಥ ಡಾ. ಎಂ. ಕೆ. ರಾಜೇಶ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಹಿರಿಯ ವಿಜ್ಞಾನಿ ಡಾ. ನಾಗರಾಜ ಎನ್. ಆರ್. ವಂದಿಸಿದರು. ತನುಜ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ತಾಂತ್ರಿಕ ಅಧಿಕಾರಿ ಶ್ಯಾಮ್ ಪ್ರಸಾದ್ ಕುಂಚಿನಡ್ಕ ಹಾಗೂ ಸಿಪಿಸಿಆರ್ ಐ ಸಿಬ್ಬಂದಿ ವರ್ಗ ಸಹಕರಿಸಿದರು.

ವಿಜಯವಾಣಿ  ಪ್ರತಿ ಬಾರಿಯೂ ರೈತರ ಪರವಾಗಿ ನಿಲ್ಲುವ ಕಾರ್ಯವನ್ನು ಮಾಡಿದ್ದೇವೆ. ಜನರಿಗೆ ಉಪಯೋಗವಾಗುವ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇವೆ. ಅಡಿಕೆ ಕುಸಿತವಾದ ಸಂದರ್ಭದಲ್ಲಿ ನಡೆಸಿದ ಸಂವಾದದಿಂದ ದರ ಬೀಳುವುದು ನಿಂತಿದ್ದು, ಮುಂದೆ ಬೀಳುವುದಿಲ್ಲ ಎಂಬ ವಿಶ್ವಾಸ ಇದ್ದು, ಇದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ  ಸುರೇಂದ್ರ ಎಸ್. ವಾಗ್ಲೆ, ಬ್ಯೂರೋ ಮುಖ್ಯಸ್ಥರು, ವಿಜಯವಾಣಿ ಮಂಗಳೂರು

 

ಕಾರ್ಯಕ್ರಮದಲ್ಲಿ ಕೃಷಿ ವಸ್ತು ಪ್ರದರ್ಶನ | Photo Credit : Shyam , CPCRI
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿಕರು | Photo Credit : Shyam CPCRI
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವಾರಣಾಸಿ ಎಂಬ ದ್ವಂದ್ವಗಳ ನಗರ

ವಾರಣಾಸಿಯ ಸೆಳೆತ ಅಸಾಧ್ಯವಾದದ್ದು ಅಂತ ಅಲ್ಲೇ ನೆಲೆನಿಂತ ವಿದೇಶಿಗರೂ ಇದ್ದಾರಂತೆ.ತಮ್ಮ ಉಳಿದ ಜೀವಿತಾವಧಿ…

20 minutes ago

ಮನ ಗೆಲ್ಲುವ ಕೈರುಚಿ, ಸುಲಭದಲ್ಲಿ ಕೈಸೆರೆಯಾಗದೇಕೆ..?

ನಮ್ಮ ಯೋಚನೆಗಳು, ಯೋಜನೆಗಳು , ನಿರ್ಧಾರಗಳೆಲ್ಲವೂ ಆಹಾರ, ನಮ್ಮ ಪರಿಸರದ ಪ್ರಭಾವದಿಂದ ತಪ್ಪಿಸಿ…

34 minutes ago

ಪುಟ್ಟ ಚಿಟ್ಟೆ | ಭಾವ ತಟ್ಟಿದ ದಿಟ್ಟೆ

ಬಣ್ಣದ ಜೀವಿಗಳನ್ನು ಸೃಷ್ಟಿಸಿರುವ ಜಡವನ್ನೂ ಜೀವವನ್ನಾಗಿ ಪರಿವರ್ತಿಸಬಲ್ಲ ತಾಕತ್ತುಳ್ಳ ಪರಮಾತ್ಮನೇ ಅಲ್ವೇ ಪರಮಕಲಾವಿದ?

42 minutes ago

ಸಂತೆಯಲ್ಲಿ ಸಾಗುತ್ತಿರುವ ನಾವು

ಇಂದಿನ ಜಗತ್ತಿನಲ್ಲಿ ನಿರ್ದಿಷ್ಟ ಜೀವನ ದೃಷ್ಠಿಯನ್ನು ಹೊಂದಿರಲು ಸಾಧ್ಯವಿಲ್ಲ. ಅದು ಆಗಾಗ ಬದಲಾಗುವ…

3 hours ago

ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮೀನುಗಾರಿಕೆ ವಲಯದ ಪ್ರಗತಿ ಹಾಗೂ ಭವಿಷ್ಯದ…

6 hours ago

ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |

ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಪ್ರಸ್ತುತ ಕೃಷಿ ಉತ್ಪಾದನೆಯ…

6 hours ago