ಅಡಿಕೆ ಬೆಳೆಗಾರರಿಗೆ ಅಡಿಕೆ ಕೊಯ್ಲು ಪ್ರಮುಖವಾದ ಘಟ್ಟ. ನುರಿತ ಕಾರ್ಮಿಕರು ಈ ಕಾರ್ಯಕ್ಕೆ ಅಗತ್ಯ. ಈಚೆಗೆ ನುರಿತ ಕಾರ್ಮಿಕರ ಕೊರತೆ ಇರುವುದು ನಿಜ. ಇದೇ ವೇಳೆ ಅಡಿಕೆ ಕೊಯ್ಲಿನ ತಾಂತ್ರಿಕ ಕೌಶಲ್ಯ ಅಡಿಕೆ ಬೆಳೆಗಾರರಿಗೂ ಅಗತ್ಯವಿದೆ. ಅಂತಹ ತಾಂತ್ರಿಕ ಮಾಹಿತಿಗಳಲ್ಲಿ ಅಡಿಕೆ ಗೊನೆಯ ಮೂಗೂ ಒಂದು. ಅದರ ವಿವರ ಇಲ್ಲಿದೆ…
ಈಚೆಗೆ ವಿಟ್ಲದ ಸಿಪಿಸಿಆರ್ ಐ ವಠಾರದಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ ಹಾಗೂ ಸಿಪಿಸಿಆರ್‌ಐ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದೊಂದಿಗೆ ಅಡಿಕೆ ಕೌಶಲ್ಯ ಪಡೆಯ ಅಡಿಕೆ ಕೊಯ್ಲು ತರಬೇತಿ ಶಿಬಿರ ನಡೆಯಿತು. ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದರಲ್ಲಿ ವಿಶೇಷವಾಗಿ ಅಡಿಕೆ ಕೊಯಿಲು ವೇಳೆ ಪ್ರಮುಖವಾಗಿ ಗಮನಿಸಬೇಕಾದ ಅಡಿಕೆ ಗೊನೆಯ ಮೂಗಿನ ಬಗ್ಗೆ ತರಬೇತುದಾರ ಆರ್ ಜಿ ಹೆಗಡೆ (ರಾಮಚಂದ್ರ ಹೆಗಡೆ) ಅವರು ಅಡಿಕೆ ಗೊನೆಯ ಮೂಗಿನ ಬಗ್ಗೆ ಹಾಗೂ ಕೊಯ್ಲು ಸುಲಭದ ಬಗ್ಗೆ ಮಾಹಿತಿ ನೀಡಿದರು.
ಅಡಿಕೆ ಗೊನೆಗೆ ಮೂಗು ಎಂಬುದಿದೆ. ಈಗಾಗಲೇ ಅಡಿಕೆ ಕೊಯಿಲು ಮಾಡುವ ಮಂದಿಗೆ ಈ ಬಗ್ಗೆ ಯಾವುದೇ ಮಾಹಿತಿ ಅಗತ್ಯವಿಲ್ಲ. ಆದರೆ ಹೊಸದಾಗಿ ಕಲಿಯುವ ಹಾಗೂ ಅಡಿಕೆ ಬೆಳೆಗೆ ಬಂದಿರುವ ಹೊಸದಾದ ಕೃಷಿಕರಿಗೆ ಈ ಮಾಹಿತಿಯ ಕೊರತೆ ಇದೆ. ಅಡಿಕೆ ಗೊನೆಯ ಮೂಗಿಗೆ ದೋಟಿಯನ್ನು ಅಥವಾ ಕೊಕ್ಕೆಯನ್ನು ಹಾಕಿದರೆ ಅಡಿಕೆ ಕೊಯ್ಲು ಸುಲಭವಾಗುತ್ತದೆ ಹಾಗೂ ಕತ್ತಿಯನ್ನು ಕೂಡಾ ಅಡಿಕೆ ಗೊನೆಯ ನಡುವೆ ದಾಟಿಸಲೂ ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…