Advertisement
ಸುದ್ದಿಗಳು

ನೇಪಾಳದಲ್ಲಿಅಡಿಕೆ ಜೀವನದ ಭಾಗ | ನಿಯಂತ್ರಣಕ್ಕೆ ಶಾಲಾ ಶಿಕ್ಷಣ–ನೀತಿ ಕಡ್ಡಾಯ | WHO ವೆಬಿನಾರ್‌ನಲ್ಲಿ ಪ್ರೊ. ರಿಂಕಿ ಸಲಹೆ

Share

ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಸಂಕಷ್ಟಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಆಯೋಜಿಸಿದ್ದ ವೆಬಿನಾರ್‌ನಲ್ಲಿ ನೇಪಾಳದ ಪ್ರತಿನಿಧಿ ಮಾತನಾಡಿದರು.  ನೇಪಾಳದ ಪ್ರೊಫೆಸರ್ ರಿಂಕಿ ನ್ಯಾಚ್ಹ್ಯೋನ್ ಅವರು ದೇಶವನ್ನು ಪ್ರತಿನಿಧಿಸಿ ಮಾತನಾಡಿ, “ನೇಪಾಳದಲ್ಲಿ ಜನರು ಅಡಿಕೆಯನ್ನು ಪರಂಪರೆಯ ಸಾಮಾನ್ಯ ಭಾಗವೆಂದು ಕಾಣುತ್ತಾರೆ. ಹೀಗಾಗಿ ಅದರ ಕಾರ್ಸಿನೋಜೆನಿಕ್ ಅಪಾಯದ ಅರಿವು ಬಹಳ ಕಡಿಮೆ” ಎಂದರು.ಆದರೆ, ಅಡಿಕೆ ನಿಯಂತ್ರಣಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮತ್ತು ಶಿಕ್ಷಣ ಕ್ರಮಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಪ್ರೊ. ರಿಂಕಿ ಅವರ ಪ್ರಕಾರ, ನೇಪಾಳದಲ್ಲಿ ತಂಬಾಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳಿವೆ, ಆದರೆ ಅಡಿಕೆ ಈ ನೀತಿಯಿಂದ ಹೊರತಾಗಿದೆ.  ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಜಾಹೀರಾತು ನಿರ್ಬಂಧ, ಭಾರೀ ತೆರಿಗೆ, ಸಾರ್ವಜನಿಕ ಸ್ಥಳದಲ್ಲಿ ಬಳಿಸಿದರೆ ಹಣದ ದಂಡ, 75% ಪಿಕ್ಟೋರಿಯಲ್ ಆರೋಗ್ಯ ಎಚ್ಚರಿಕೆ ಸಂದೇಶ ಕಡ್ಡಾಯ ಇದೆ. ಆದರೆ ಇಂತಹ ನಿಯಂತ್ರಣ ಕ್ರಮಗಳು ಅಡಿಕೆ ಉತ್ಪನ್ನಗಳ ಮೇಲೆ ಇನ್ನೂಜಾರಿಯಾಗಿಲ್ಲ ಎಂದು ಅವರು ತಿಳಿಸಿದರು.

ಅಡಿಕೆಯು ನೇಪಾಳದ ಸಂಸ್ಕೃತಿಯ ಅವಿಭಾಜ್ಯ ಭಾಗ. ಶ್ರೀಲಂಕಾದಂತೆ ನೇಪಾಳದಲ್ಲಿಯೂ ಅಡಿಕೆ ಸೇವನೆಯು ಸಾಮಾಜಿಕ ಸಭೆಗಳಲ್ಲಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಹೋಟೆಲ್‌ಗಳಲ್ಲಿ mouth freshener ಆಗಿಯೂ ಬಳಕೆ ಇದೆ. ಪರಂಪರೆಯ ಭಾಗವಾಗಿರುವುದರಿಂದ ಜನರು ಅದನ್ನು ಅಪಾಯಕರವೆಂದು ಪರಿಗಣಿಸುವುದಿಲ್ಲ ಎಂದು ಅವರು ಹೇಳಿದರು.

ನೇಪಾಳದಲ್ಲಿ ಆರೋಗ್ಯ ಮತ್ತು ಶಾಲಾ ಕಾರ್ಯಕ್ರಮ ಸೇರಿದಂತೆ ಆರೋಗ್ಯ ಕಾರ್ಯಕ್ರಮಗಳು ಬಾಯಿ ಕ್ಯಾನ್ಸರ್ ಶಿಕ್ಷಣ ಮತ್ತು ತಡೆಗೆ ಕೆಲಸ ಮಾಡುತ್ತಿವೆ.  ಆದರೆ ಈ ಎಲ್ಲ ಕಾರ್ಯಕ್ರಮಗಳು ಮುಖ್ಯವಾಗಿ ತಂಬಾಕಿನ ಅಪಾಯದತ್ತ ಮಾತ್ರ ಗಮನ ಹರಿಸುತ್ತಿವೆ. ಅಡಿಕೆ ಬಳಕೆಯು ಕೂಡ ಬಾಯಿ ಕ್ಯಾನ್ಸರ್ ಉಂಟುಮಾಡುವ ಗಂಭೀರ ಕಾರಣವೆಂದು ಈ ಕಾರ್ಯಕ್ರಮಗಳಲ್ಲಿ ಸೇರಿಸಬಹುದಾಗಿದೆ ಪ್ರೊ. ರಿಂಕಿ ಅಭಿಪ್ರಾಯಪಟ್ಟರು.

 ಪ್ರೊ. ರಿಂಕಿ ಶಿಫಾರಸು ಮಾಡಿದ ಕ್ರಮಗಳಲ್ಲಿ  ಸ್ಥಳೀಯ ಭಾಷೆಗಳಲ್ಲಿ ಜಾಗೃತಿಯನ್ನು ಮಾಡಿ ಅಡಿಕೆ ಹಾನಿಯ ಮಾಹಿತಿಯನ್ನು ಸ್ಥಳೀಯ ಭಾಷೆಗಳಲ್ಲಿ ಹರಡಬೇಕು, ಕಡಿಮೆ ಸಾಕ್ಷರತೆಯವರಿಗೂ ತಲುಪುವಂತೆ ಮಾಡಬೇಕು.  ಸಮುದಾಯ ಆರೋಗ್ಯ ಸ್ವಯಂಸೇವಕರು, ಶಿಕ್ಷಕರು ಮತ್ತು ಸ್ಥಳೀಯ ನಾಯಕರ ಮೂಲಕ ಪರಿಣಾಮಕಾರಿಯಾದ ತಡೆಯ ಸಂದೇಶ ನೀಡಬೇಕು. ಶಾಲಾ ಆರೋಗ್ಯ ಶಿಕ್ಷಣದಲ್ಲಿ ತಂಬಾಕಿನ ಜೊತೆಗೆ ಅಡಿಕೆಯ ಹಾನಿಯನ್ನೂ ಸೇರಿಸಬಹುದಾಗಿದೆ. ಅಡಿಕೆ ಉತ್ಪನ್ನಗಳು ಹಾಗೂ ಅಡಿಕೆ-ಗುಟ್ಕಾ ಮಿಶ್ರಣ ಉತ್ಪನ್ನಗಳು ಅಗ್ಗವಾಗಿ ಲಭ್ಯವಾಗಿರುವುದರಿಂದ, ಅವುಗಳ ಮಾರಾಟ ಮತ್ತು ಪ್ರಚಾರದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯ ಇದೆ ಎಂದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಒಟ್ಟಾರೆ, ಅಡಿಕೆ ಬಳಕೆಯ ಅಪಾಯವನ್ನು ತಂಬಾಕಿನಂತೆ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಿ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಹಾಗೂ ಶಾಲಾ ಶಿಕ್ಷಣದ ಮೂಲಕ ನಿಯಂತ್ರಣ ಕೈಗೊಳ್ಳಬೇಕು ಎಂದರು.  ಆದರೆ ಸಂಸ್ಕೃತಿಯ ಭಾಗವೂ ಆಗಿರುವುದರಿಂದ ಒಮ್ಮೆಲೇ ಅಡಿಕೆ ನಿಯಂತ್ರಣ ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ

ಸೆ.18ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಚುರುಕಾಗುವ ಸೂಚನೆ ಇದ್ದು, ಸೆ.19ರಿಂದ ಉತ್ತರ…

2 days ago

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ

ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…

2 days ago

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು

ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…

2 days ago

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

2 days ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

3 days ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

3 days ago