ಅಡಿಕೆ ಕಳ್ಳಸಾಗಣೆ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಡಿಆರ್‌ಐ(The Department of Revenue Intelligence) ವಶಕ್ಕೆ ಪಡೆದಿದೆ. ಆರೋಪಿ ರವಿಕುಮಾರ್ ಎಂಬವರನ್ನು ಸೋಮವಾರ ಮಧುರೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೇ ವೇಳೆ 4 ಕೋಟಿ ಮೌಲ್ಯದ 65 ಮೆಟ್ರಿಕ್ ಟನ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇಗೆರೆ ದಾಳಿ ನಡೆಸಿದ ಡಿಆರ್‌ಐ , ಟ್ಯುಟಿಕೋರಿನ್‌ನಲ್ಲಿ ನಾಲ್ಕು 40 ಕಂಟೈನರ್‌ಗಳನ್ನು ತಡೆಹಿಡಿಯಿತು. ಇಂಡೋನೇಷ್ಯಾದ ಜಕಾರ್ತಾದಿಂದ ಹತ್ತಿ ಉತ್ಪನ್ನದ ನೆಪದಲ್ಲಿ ಅಡಿಕೆಯನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿತ್ತು. ತಪಾಸಣೆಯ ವೇಳೆ ಹತ್ತಿಯ ಒಳಗಡೆ ಅಡಿಕೆ ಪತ್ತೆಯಾಗಿದೆ. 65 ಮೆಟ್ರಿಕ್ ಟನ್ ತೂಕದ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ತನಿಖೆಯ ಬಳಿಕ ಲಾಜಿಸ್ಟಿಕ್ಸ್ ಕಂಪನಿಯ ಮಾಲೀಕರಾಗಿರುವ ರವಿಕುಮಾರ್ ಎಂಬವರನ್ನು ವಶಕ್ಕೆ ಪಡೆಯಲಾಗಿತ್ತು.
ಮಾಹಿತಿ ಪ್ರಕಾರ, ಕೆಲವು ಅಧಿಕಾರಿಗಳು ಈ ಕಳ್ಳಸಾಗಾಣಿಕೆಯ ಚಟುವಟಿಕೆಗೆ ನೆರವಾಗುತ್ತಿದ್ದಾರೆ. ಅವರ ಸಹಾಯದಿಂದಲೇ ಆಮದು ವಸ್ತುಗಳನ್ನು ತಪ್ಪಾಗಿ ನಮೂದಿಸಿ ಅಡಿಕೆ ಸಾಗಾಣಿಕೆ ಮಾಡಲಾಗುತ್ತಿದೆ. ಇದೀಗ ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಡಿಆರ್‌ಐ ಮೂಲ ತಿಳಿಸಿದೆ ಎಂದು TOI ವರದಿ ಮಾಡಿದೆ.
DRI (The Department of Revenue Intelligence) has arrested the main accused who was smuggling arecanut. ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…
ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…
ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…
ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…
ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…