ಕರ್ನಾಟಕದಲ್ಲಿ ಅಡಿಕೆ ಬೆಳೆಗಾರರಿಗೆ ತೀವ್ರ ಸಂಕಟ ತಂದೊಡ್ಡಿರುವ ಎಲೆ ಚುಕ್ಕೆ ರೋಗ (Leaf Spot Disease) ವ್ಯಾಪಕವಾಗಿ ಹರಡಿದ್ದು, ರಾಜ್ಯದ ಮಲೆನಾಡು, ಕರಾವಳಿ ಮತ್ತು ಶಿವಮೊಗ್ಗ ಪ್ರದೇಶಗಳಲ್ಲಿ ಒಟ್ಟು 88,559 ಹೆಕ್ಟೇರ್ ಪ್ರದೇಶದಲ್ಲಿ ರೋಗ ಕಂಡುಬಂದಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಅವರು ಎಲೆಚುಕ್ಕಿ ಹಾಗೂ ಕೀಟಬಾಧೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪರವಾಗಿ ಮಾಹಿತಿ ನೀಡಿದರು. ಶಿವಮೊಗ್ಗ–ಚಿಕ್ಕಮಗಳೂರು–ದಕ್ಷಿಣ ಕನ್ನಡದಲ್ಲಿ ಎಲೆಚುಕ್ಕಿ ರೋಗ ಗಂಭೀರ ಪರಿಣಾಮ ಬೀರಿದ್ದು ಸಚಿವರ ಪ್ರಕಾರ, ರೋಗದಿಂದ ಅತ್ಯಧಿಕವಾಗಿ ಹಾನಿಗೊಳಗಾದ ಜಿಲ್ಲೆಗಳಪೈಕಿ ಶಿವಮೊಗ್ಗ : 32,124 ಎಕರೆ, ಚಿಕ್ಕಮಗಳೂರು : 25,210 ಎಕರೆ, ದಕ್ಷಿಣ ಕನ್ನಡ : 20,830 ಎಕರೆ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗದ ಲಕ್ಷಣಗಳು ದಾಖಲಾಗಿವೆ.
ರಾಜ್ಯ ಸರ್ಕಾರವು ಅಡಿಕೆ ಬೆಳೆ ಮೇಲೆ ಪರಿಣಾಮ ಬೀರಿರುವ ಎಲೆ ಚುಕ್ಕೆ ರೋಗ, ಹಳದಿ ಎಲೆ ರೋಗ (Yellow Leaf Disease), ಕೊಳೆ ರೋಗ (Rot Disease) ನಿಯಂತ್ರಣಕ್ಕಾಗಿ ₹577.76 ಕೋಟಿ ಮೊತ್ತದ ನೆರವು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದೆ ಎಂದು ಸಚಿವರು ತಿಳಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ರೋಗ ಹತೋಟಿಗೆ ಕೈಗೊಳ್ಳುವ ಪ್ರಮುಖ ಕ್ರಮಗಳು: ರೋಗಗ್ರಸ್ತ ಭಾಗಗಳನ್ನು ತೆಗೆದು ನಾಶಪಡಿಸುವ ಫೈಟೋಸ್ಯಾನಿಟರಿ ಕ್ರಮಗಳು, ಸಸ್ಯ ರಕ್ಷಣಾ ಔಷಧಿ ಬಳಕೆ, ಸಮಗ್ರ ಪೋಷಕಾಂಶ ನಿರ್ವಹಣೆ (Integrated Nutrient Management). ತಜ್ಞರಿಂದ ಬೆಳೆಗಾರರಿಗೆ ಮಾರ್ಗದರ್ಶನ ಕೂಡಾ ನೀಡಲಾಗುತ್ತಿದೆ. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ತಜ್ಞರು ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಅಡಿಕೆ ರೈತರಿಗೆ ಪೋಷಕಾಂಶ ನಿರ್ವಹಣೆ , ನೀರಿನ ಕಾಲುವೆ ನಿರ್ಮಾಣ, ಹಸಿರು ಗೊಬ್ಬರ ಬಳಕೆ, ರಸಗೊಬ್ಬರ ಪೂರೈಕೆ ಬಗ್ಗೆ ನಿರಂತರ ಮಾಹಿತಿ ನೀಡುತ್ತಿದ್ದಾರೆ ಎಂದು ಸಚಿವರು ಹೇಳಿದರು. ತೋಟಗಾರಿಕಾ ಇಲಾಖೆಯಲ್ಲಿ ಈ ರೋಗದಿಂದ ಉಂಟಾಗುವ ಬೆಳೆ ನಷ್ಟಕ್ಕೆ ನೇರ ಪರಿಹಾರ ನೀಡುವ ಪ್ರತ್ಯೇಕ ಯೋಜನೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ರೋಗ ಸಂಬಂಧಿತ ನಷ್ಟವನ್ನು ಪರೋಕ್ಷವಾಗಿ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಅಡಿಕೆ ಕರ್ನಾಟಕದ ಮಲೆನಾಡು–ಕರಾವಳಿ ಭಾಗದ ಪ್ರಮುಖ ನಗದು ಬೆಳೆ. ಆದರೆ ಎಲೆ ಚುಕ್ಕೆ ಮತ್ತು ಹಳದಿ ಎಲೆ ರೋಗಗಳು ವರ್ಷದಿಂದ ವರ್ಷಕ್ಕೆ ಗಂಭೀರವಾಗುತ್ತಿದ್ದು, ರೈತರ ಬದುಕಿನ ಮೇಲೆ ದೊಡ್ಡ ಹೊಡೆತ ನೀಡುತ್ತಿದೆ. ಹೀಗಾಗಿ ರೋಗ ನಿಯಂತ್ರಣದ ಜೊತೆಗೇ ಅಗತ್ಯ ಕ್ರಮಗಳೂ ಬೇಕಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…
ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…