#arecanut | ಅಡಿಕೆ ಮಾರುಕಟ್ಟೆ | ಚೌತಿಯ ಸಮಯದಲ್ಲಿ ಅಡಿಕೆ ಧಾರಣೆ ಗರಿಷ್ಟ..? | ಬೆಳೆಗಾರರ ನಿಲುವು ಏನಿರಬೇಕು ? | ಏನಾಗಬಹುದು ಮಾರುಕಟ್ಟೆ.. ?

August 18, 2022
12:35 PM

ಕಳೆದ ಒಂದು ತಿಂಗಳಿನಿಂದ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿದೆ. ಅಡಿಕೆಗೆ ಬೇಡಿಕೆ ಹೆಚ್ಚಿದಂತೆಯೇ ಧಾರಣೆ ಕೂಡಾ ಏರಿಕೆ ಕಾಣುವುದು ಸಹಜವೇ ಆಗಿದೆ. ಪ್ರತೀ ವರ್ಷದಂತೆಯೇ ಈ ಬಾರಿ ಕೂಡಾ ಗಣೇಶ ಚೌತಿಯ ಸಮಯದಲ್ಲಿ ಅಡಿಕೆಗೆ ಗರಿಷ್ಟ ಧಾರಣೆ ತಲುಪುತ್ತದೆ. ಈ ಬಾರಿ ಕೂಡಾ ಅಡಿಕೆ ಧಾರಣೆ ಗರಿಷ್ಟಕ್ಕೆ ತಲುಪುವ ನಿರೀಕ್ಷೆ ಇದೆ. ಆದರೆ ಅತಿಯಾದ ನಿರೀಕ್ಷೆ ಬೆಳೆಗಾರರನ್ನು ಸೋಲಿಸುತ್ತದೆ ಎನ್ನುವ ಎಚ್ಚರಿಕೆಯೂ  ಇರಲೇಬೇಕು  ಬೆಳೆಗಾರರಿಗೆ.

Advertisement

ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಅಡಿಕೆಗೆ ಬೇಡಿಕೆ ಹೆಚ್ಚಿದೆ. ಹೊಸ ಹಾಗೂ ಹಳೆ ಅಡಿಕೆ ಮಾತ್ರವಲ್ಲ ಈಗ ದ್ವಿತೀಯ ದರ್ಜೆಯ ಅಡಿಕೆ ಧಾರಣೆಯೂ ಮತ್ತೆ ಏರಿದೆ. ಹೀಗಾಗಿ ಪಠೋರ, ಕರಿಗೋಟು ಧಾರಣೆಯಲ್ಲೂ ಏರಿಕೆ ಕಂಡಿದೆ. ಕ್ಯಾಂಪ್ಕೋ ಪಠೋರ ದರದಲ್ಲಿ 5 ರೂಪಾಯಿ ಹಾಗೂ ಕರಿಗೋಟು ದರದಲ್ಲಿ 5 ರೂಪಾಯಿ ಏರಿಕೆ ಮಾಡಿದೆ. ಹೀಗಾಗಿ ಹೊಸ ಪಠೋರ 365 ರೂಪಾಯಿ ಹಾಗೂ ಕರಿಗೋಟು, ಉಳ್ಳಿಗಡ್ಡೆಯ ಧಾರಣೆ 285 ರೂಪಾಯಿಗೆ ಖರೀದಿ ಮಾಡುತ್ತಿದೆ. ಹಳೆ ಪಠೋರ ಈಗಲೂ 365 ರೂಪಾಯಿಗೆ ಖರೀದಿ ನಡೆಯುತ್ತಿದೆ. ಹೊಸ ಅಡಿಕೆ ಧಾರಣೆ 465 ರೂಪಾಯಿಗೆ ಹಾಗೂ  ಹಳೆ ಅಡಿಕೆ   560 ರೂಪಾಯಿಗೆ ಖರೀದಿ ನಡೆಯುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ ಮಾಡುತ್ತಿದೆ. 

ಇದೀಗ ಮತ್ತೆ ಹೊಸ ಅಡಿಕೆ ಧಾರಣೆ ಏರಿಕೆಯ ಲಕ್ಷಣಗಳು ಕಾಣಿಸುತ್ತಿವೆ. ಚೌತಿಯ ಬಳಿಕ ಹೊಸ ಅಡಿಕೆ ಅಂದರೆ ಈ ವರ್ಷದ ಅಡಿಕೆಯ ಧಾರಣೆ ನಿಗದಿಯಾಗುತ್ತದೆ. ಈಗಿನ ಹೊಸ ಅಡಿಕೆ ಹಳೆಯದಾಗುತ್ತದೆ. ಸದ್ಯ ಹೊಸ ಅಡಿಕೆ ಹಾಗೂ ಹಳೆಯ ಅಡಿಕೆಯ ಧಾರಣೆಯಲ್ಲಿ ಸುಮಾರು 100 ರೂಪಾಯಿ ವ್ಯತ್ಯಾಸ ಇದೆ. ಅನೇಕ ಸಮಯಗಳಿಂದ ಈ ವ್ಯತ್ಯಾಸವು 25 ರಿಂದ 30 ರೂಪಾಯಿ ಇರುತ್ತಿತ್ತು. ಆದರೆ ಕೊರೋನಾ ನಂತರ 50-70 ರೂಪಾಯಿ ವ್ಯತ್ಯಾಸದಲ್ಲಿ ಇರುತ್ತಿತ್ತು. ಇದೀಗ ಅದೇ ವ್ಯತ್ಯಾಸಕ್ಕೆ ನಿಲ್ಲುವ ಸಾಧ್ಯತೆ ಇದೆ. ಈ ಕಾರಣದಿಂದ ಹೊಸ ಅಡಿಕೆ ಧಾರಣೆ ಇನ್ನೂ 20-30 ರೂಪಾಯಿ ಏರಿಕೆ ಸಾಧ್ಯತೆ ಇದೆ. ಅಂದರೆ ಹೊಸ ಅಡಿಕೆ ಧಾರಣೆ ಕೂಡಾ 500 ರಿಂದ 510 ರೂಪಾಯಿ ತಲುಪಬಹುದು. ಈ ನಡುವೆ ಈಗ ಅಡಿಕೆ ದಾಸ್ತಾನು ಕೂಡಾ ಹೆಚ್ಚಾಗಿರುವುದರಿಂದ ಬೇಡಿಕೆ ಕೂಡಾ ಹೆಚ್ಚಿದೆ. ಈ ಬಾರಿ ಕೊಳೆರೋಗದ ಪರಿಣಾಮದಿಂದ ಮುಂದಿನ ವರ್ಷ ಅಡಿಕೆ ಫಸಲು ಕಡಿಮೆ ಇರಲಿದೆ. ಇದನ್ನು ಮನಗಂಡ ಕೆಲವು ವ್ಯಾಪಾರಿಗಳು ಅಡಿಕೆ ದಾಸ್ತಾನಿಗೂ ಮುಂದಾಗಿದ್ದಾರೆ. ಕಳೆದ ವರ್ಷ ಉತ್ತಮ ಧಾರಣೆಯ ಪರಿಣಾಮ ಹಲವು ಮಂದಿ ಅಡಿಕೆ ಮಾರಾಟ ಮಾಡಿದ್ದಾರೆ. ಈಗ ಅಡಿಕೆ ಆಮದು ಕೂಡಾ  ಬಿಗಿಯಾಗಿರುವುದು ಕೂಡಾ ಅಡಿಕೆ ಧಾರಣೆ ಮೇಲೆ ಪರಿಣಾಮ ಬೀರಿರುವುದು  ಕಂಡುಬಂದಿದೆ. ಸದ್ಯ ಧಾರಣೆ ಏರಿಕೆ ಹೆಚ್ಚಾಗುತ್ತಿದೆ. ಚೌತಿಯ ಬಳಿಕ ಸ್ಥಿರತೆಯ ಹಾದಿಯಲ್ಲಿ ಸಾಗುವ ನಿರೀಕ್ಷೆ ಇದೆ.

Advertisement

ಅಡಿಕೆ ಧಾರಣೆ ಏರಿಕೆಯ ಸಮಯದಲ್ಲಿ ಸುದ್ದಿಯಾಗುವ ಅಡಿಕೆ ಧಾರಣೆ ನಂತರ ಸದ್ದಿಲ್ಲದಾಗುತ್ತದೆ ಎಂದು ಈಚೆಗೆ ಬೆಳೆಗಾರರೊಬ್ಬರು ಪ್ರತಿಕ್ರಿಯಿಸಿದ್ದರು. ಅಡಿಕೆ ಬೆಳೆಗಾರರು ಯಾವತ್ತೂ ಅಡಿಕೆ ಧಾರಣೆಯನ್ನು ಗಮನಿಸುತ್ತಾ, ಸೂಕ್ತವಾದ ಧಾರಣೆ ಅನಿಸಿದ ತಕ್ಷಣವೇ ಎಲ್ಲಾ ಅಡಿಕೆ ಮಾರಾಟ ಮಾಡುವ ಬದಲಾಗಿ ಧಾರಣೆ ಏರಿಕೆ ಹಂತದಲ್ಲಿ ಅಡಿಕೆಯನ್ನು ಮಿತವಾಗಿ ಮಾರುಕಟ್ಟೆ ಬಿಟ್ಟಲ್ಲಿ ಧಾರಣೆಯೂ ಸ್ಥಿರತೆಯಾಗುತ್ತದೆ, ಬೆಳೆಗಾರನಿಗೆ ಸರಾಸರಿ ಉತ್ತಮ ಧಾರಣೆಯೂ ಸಿಗುತ್ತದೆ.ಈ ನಿಯಮವನ್ನು ಈಚೆಗೆ ಅನೇಕ ಬೆಳೆಗಾರರು ಅನುಸರಿಸುತ್ತಿದ್ದಾರೆ. ಈ ಕಾರಣದಿಂದ ಅಡಿಕೆ ಧಾರಣೆಯೂ ಸ್ಥಿರತೆ ಸಾಧಿಸಲು ಸಾಧ್ಯವೂ ಇದೆ.

 ಕಳೆದ ಎರಡು ತಿಂಗಳಿನಿಂದ ರೂರಲ್‌ ಮಿರರ್‌ ಅಡಿಕೆ ಮಾರುಕಟ್ಟೆ, ಧಾರಣೆಯ ಬಗ್ಗೆ ವಿಶ್ಲೇಷಣೆ ಮಾಡಿರುವ ವರದಿಗಳು : 

Advertisement

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶದಾದ್ಯಂತ ಸಾಮಾನ್ಯ ಮಳೆ | ಮಲೆನಾಡು-ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ
July 16, 2025
7:51 AM
by: ದ ರೂರಲ್ ಮಿರರ್.ಕಾಂ
ಆರೋಗ್ಯದಲ್ಲಿ ಈ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಚೇತರಿಕೆ
July 16, 2025
7:17 AM
by: ದ ರೂರಲ್ ಮಿರರ್.ಕಾಂ
ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ
July 15, 2025
9:39 PM
by: ದ ರೂರಲ್ ಮಿರರ್.ಕಾಂ
ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ
July 15, 2025
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group