ಅಡಿಕೆ ಧಾರಣೆ ದಾಖಲೆಯತ್ತ ಸಾಗಿದೆ. 500 ರೂಪಾಯಿ ಧಾರಣೆ ಒಂದು ಕೆಜಿ ಅಡಿಕೆಗೆ. ಇನ್ನೂ ಏರಬಹುದಾ ? ವಿಶ್ಲೇಷಣೆಗಳು ಆರಂಭವಾಗಿದೆ. ಇಡೀ ದೇಶದಲ್ಲಿ ಈಗ ಅಡಿಕೆ ಹವಾ ಸೃಷ್ಟಿಯಾಗಿದೆ. ದೇಶದ ಎಲ್ಲಾ ಕೃಷಿಕರೂ ಅಡಿಕೆಯೇ ಲಾಭದಾಯಕ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆಯೇ ಅಡಿಕೆ ಮೇಲೆ ತೆರಿಗೆ ಧಾಳಿ ಹೆಚ್ಚಾಗಿದೆ. ದಾಖಲೆಗಳಿಲ್ಲದೆ 7 ಕೋಟಿ ರೂ ಮೌಲ್ಯದ ಅಡಿಕೆ ಸಾಗಾಟ ಮಾಡುತ್ತಿದ್ದ ಏಳು ವಾಹನಗಳನ್ನು ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದೇ ವೇಳೆ 1,70,44,800 ರೂಪಾಯಿ ಮೌಲ್ಯ ಅಡಿಕೆ ಆಮದನ್ನು ಕೂಡಾ ಅಧಿಕಾರಿಗಳು ತಡೆದಿದ್ದಾರೆ.
ಅಡಿಕೆ ಧಾರಣೆ ಗುರುವಾರ 500 ರೂಪಾಯಿ ತಲಪಿದೆ. ಅಡಿಕೆ ಮಾರುಕಟ್ಟೆಯ ಇತಿಹಾಸದಲ್ಲಿಯೇ ದಾಖಲೆಯ ಧಾರಣೆ ಇದಾಗಿದೆ. ಹಳೆ ಅಡಿಕೆ ಹಾಗೂ ಹೊಸ ಅಡಿಕೆ ಎರಡೂ ಧಾರಣೆ 500 ರೂಪಾಯಿಗಿಂತ ಹೆಚ್ಚಾಗಿರುವುದು ದಾಖಲೆಯಾಗಿದೆ. ಈಗಿನ ಹೊಸ ಅಡಿಕೆ ಧಾರಣೆಯೂ ಸದ್ಯ ಉತ್ತಮವಾಗಿದೆ. ಹೀಗಾಗಿ ಅಡಿಕೆ ಬೆಳೆಗಾರರಿಗೆ ಸಹಜವಾಗಿಯೇ ಸಂತಸವಾಗಿದೆ. ಈಗ ಇನ್ನೂ ಧಾರಣೆ ಏರಿಕೆಯಾಗುವುದೇ ಎಂಬ ಪ್ರಶ್ನೆಗಳೂ ಸಹಜವಾಗಿಯೇ ಇದೆ. ಬೆಳೆ ಕಡಿಮೆಯಾಗಿರುವುದು , ಮಾರುಕಟ್ಟೆಗೆ ಅಡಿಕೆ ಬಾರದೇ ಇರುವುದು , ಕಳೆದ ವರ್ಷದ ಅಡಿಕೆ ಕೊರತೆ ಇನ್ನೂ ಭರ್ತಿಯಾಗದೇ ಇರುವುದು, ಅಡಿಕೆ ದಾಸ್ತಾನು ಮಾಡುವವರೂ ಕಳೆದ ಒಂದು ವರ್ಷದಿಂದ ಅಡಿಕೆ ದಾಸ್ತಾನು ಮಾಡದೇ ಇರುವುದು , ಉತ್ತರ ಭಾರತದಲ್ಲಿ ಅಡಿಕೆ ಬಳಕೆಯ ಮಂದಿಯಲ್ಲಿ ಅಡಿಕೆ ಬಳಕೆ ಕಡಿಮೆಯಾಗದೇ ಇರುವುದೆ ಸೇರಿದಂತೆ ವಿವಿಧ ಅಂಶಗಳು ಅಡಿಕೆ ಮಾರುಕಟ್ಟೆ ಏರಿಕೆಗೆ ಕಾರಣವಾಗಿದೆ. ಈ ನಡುವೆಯೇ ಅಡಿಕೆ ಆಮದು ತಡೆಯೂ ಪ್ರಮುಖ ಕಾರಣವಾಗುತ್ತಿದೆ. ಹೀಗಾಗಿ ಅಡಿಕೆ ಧಾರಣೆ ನಿರೀಕ್ಷಿಸಿದಂತೆ 500 ರೂಪಾಯಿ ತಲುಪಿದೆ. ಉತ್ತಮ ಧಾರಣೆ ಲಭ್ಯವಾಗಿದೆ.
ಅಡಿಕೆ ಧಾರಣೆ ಏರಿಕೆ ಹಾಗೂ ವಿಪರೀತ ಧಾರಣೆಯ ಕಾರಣದಿಂದ ಇಡೀ ದೇಶದಲ್ಲಿ ಅಡಿಕೆ ಹವಾ ಎದ್ದಿದೆ. ಅನೇಕ ಕೃಷಿಕರೂ ಅಡಿಕೆ ಬಗ್ಗೆ ಚರ್ಚೆ ನಡೆಸುವುದು ಹಾಗೂ ಬೆಳೆಯ ಬಗ್ಗೆ ಮಾಹಿತಿ ಕಲೆ ಹಾಕುವುದು ಆರಂಭವಾಗಿದೆ. ಅಡಿಕೆ ಬೆಳೆ ಲಾಭದಾಯಕ ಎಂಬ ಭಾವನೆಯೂ ಎಲ್ಲಾ ಕೃಷಿರಲ್ಲೂ ಮೂಡುತ್ತಿದೆ. ಅಡಿಕೆ ಬಳಕೆ ಏನು ಹಾಗೂ ಎಲ್ಲಿ ಎಂಬ ಪ್ರಶ್ನೆಗಿಂತಲೂ ಅಡಿಕೆ ಬೆಳೆ ಲಾಭದಾಯಕ ಎನ್ನುವುದು ಮಾತ್ರವೇ ಸದ್ಯ ಚರ್ಚೆಯಾಗುವ ಸಂಗತಿ.
ಈ ನಡುವೆಯೇ ಸೆಂಟ್ರಲ್ ಜಿಎಸ್‌ಟಿ ಮತ್ತು ಸೆಂಟ್ರಲ್ ಅಬಕಾರಿ ಕಮಿಷನರೇಟ್, ಬೆಳಗಾವಿ ಅವರ ತಂಡ ಸರಿಯಾದ ಜಿಎಸ್‌ಟಿ ದಾಖಲೆಗಳಿಲ್ಲದೆ 7 ಕೋಟಿ ರೂ ಮೌಲ್ಯದ ಅಡಿಕೆ ಸಾಗಾಟ ಮಾಡುತ್ತಿದ್ದ ಏಳು ವಾಹನಗಳನ್ನು ಅಧಿಕಾರಿಗಳು ತಡೆದು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಅಸ್ಸಾಂ ಮೂಲಕ ದೇಶದೊಳಕ್ಕೆ ಆಗಮಿಸುತ್ತಿದ್ದ ಸುಮಾರು 1.7 ಕೋಟಿ ರೂಪಾಯಿ ಮೌಲ್ಯದ 780 ಚೀಲ ಅಡಿಕೆಯನ್ನು ಅಸ್ಸಾಂ ಭದ್ರತಾ ಪಡೆ ವಶಕ್ಕೆ ತೆಗೆದುಕೊಂಡಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಯನ್ನು ಗಡಿ ಭದ್ರತಾ ಪಡೆ ತಡೆಯುತ್ತಲೇ ಇದೆ. ಈಚೆಗೆ ವಿವಿಧ ದಾರಿಗಳ ಮೂಲಕ ಸತತ ಪ್ರಯತ್ನ ನಡೆಯುತ್ತಿದೆ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…