ಅಡಿಕೆಯನ್ನು ನೇಪಾಳ ಸರಕಾರ ಆಮದು ನಿಷೇಧಗಳ ಪಟ್ಟಿಯಲ್ಲಿ ಸೇರಿಸಿದೆ. ಅಡಿಕೆ ಆಮದಿಗಾಗಿ ಯಾವುದೇ ವಿದೇಶಿ ವಿನಿಮಯ ಸೌಲಭ್ಯಗಳನ್ನು ಒದಗಿಸುವುದಿಲ್ಲ ಎಂದೂ ನೇಪಾಳ ಸರಕಾರ ಹೇಳಿದೆ. ಇದರಿಂದ ಭಾರತದೊಳಕ್ಕೆ ನೇಪಾಳ ಮೂಲಕವಾಗಿ ಆಗಮಿಸುತ್ತಿದ್ದ ಅಡಿಕೆಗೆ ತಡೆಯಾಗಬಹುದಾಗಿದೆ. ಹೀಗಾಗಿ ಮತ್ತೆ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ.
ಕಳೆದ ಮಾರ್ಚಲ್ಲಿ, ನೇಪಾಳ ಸರಕಾರವು ಕೃಷಿ ಉತ್ಪನ್ನಗಳ ಆಮದಿನ ಮೇಲಿನ ನಿರ್ಬಂಧವನ್ನು ಷರತ್ತುಬದ್ಧವಾಗಿ ಸಡಿಲಿಸಿತು. ಇದರಿಂದಾಗಿ ವ್ಯಾಪಾರಿಗಳು ತಲಾ 15,000 ಟನ್‌ಗಳಷ್ಟು ಅಡಿಕೆ ಮತ್ತು ಕಾಳುಮೆಣಸು ಮತ್ತು 5,000 ಟನ್‌ಗಳಷ್ಟು ಖರ್ಜೂರವನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲು ಆಮದು ಮಾಡಿಕೊಳ್ಳಬಹುದಾಗಿತ್ತು. ಹೀಗೆ ನೇಪಾಳಕ್ಕೆ ಬಂದ ಅಡಿಕೆಯ ಬಹುಪಾಲು ಕಳ್ಳಸಾಗಾಣಿಯ ಮೂಲಕ ಭಾರತಕ್ಕೆ ಸಾಗಾಟ ಮಾಡಿರುವುದನ್ನು ನೇಪಾಳ ಪತ್ತೆ ಮಾಡಿದೆ.
ಕೊರೋನಾ ಕಾರಣದಿಂದ 2019-20 ರ ಮಾರ್ಚ್ 24 ರಂದು ಲಾಕ್‌ಡೌನ್ ಹೇರಿದ ನಂತರ ವಿದೇಶಿ ಕರೆನ್ಸಿ ಕುಸಿತವನ್ನು ತಡೆಗಟ್ಟಲು, ಐಷಾರಾಮಿ ವಾಹನಗಳ ಜೊತೆಗೆ ದುಬಾರಿ ಖಾದ್ಯಗಳ ಆಮದನ್ನು ಸರಕಾರ ಸಂಪೂರ್ಣವಾಗಿ ನಿಷೇಧಿಸಿತು. ನಂತರ, ಒತ್ತಡಕ್ಕೆ ಮಣಿದ ಸರಕಾರವು ಈ ನಿಟ್ಟಿನಲ್ಲಿ ಕೆಲವು ಸಡಿಲಿಕೆ ಮಾಡಿತ್ತು. ಅದರಲ್ಲಿ ಅಡಿಕೆ, ಕಾಳುಮೆಣಸು ಸೇರಿದಂತೆ ವಿವಿಧ ಕೃಷಿ ವಸ್ತುಗಳು ಇದ್ದವು. ಇತ್ತೀಚಿನವರೆಗೂ ಹೀಗೆ ಆಮದಾದ ಸರಕುಗಳನ್ನು ಮೂರನೇ ದೇಶಗಳಿಂದ ಆಮದು ಮಾಡಿಕೊಂಡು ಗಮನಾರ್ಹ ಪ್ರಮಾಣದಲ್ಲಿ ಈ ಆಮದುಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿರುವುದು ಕಂಡುಬಂದಿತ್ತು.
ಈಗ ಕಾಳುಮೆಣಸು, ಖರ್ಜೂರ, ಮತ್ತು ಅಡಿಕೆ ಸೇರಿದಂತೆ ಇನ್ನಿತರ ವಸ್ತುಗಳ ಆಮದನ್ನು ನೇಪಾಳ ಸರಕಾರ ಸಂಪೂರ್ಣವಾಗಿ ನಿಷೇಧಿಸಿದ್ದು ಆಮದು ನಿಷೇಧಿತ ಪಟ್ಟಿಯಲ್ಲಿರುವ ವಸ್ತುಗಳಿಗೆ ವಿದೇಶಿ ವಿನಿಮಯ ಸೌಲಭ್ಯಗಳನ್ನು ಒದಗಿಸದಂತೆ ವಾಣಿಜ್ಯ ಇಲಾಖೆಯು ಪತ್ರವನ್ನೂ ಹೊರಡಿಸಿದೆ. ಹೀಗಾಗಿ ಸದ್ಯ ನೇಪಾಳ ಮೂಲಕ ಭಾರತಕ್ಕೆ ಅಡಿಕೆ ಬರುವ ಸಾಧ್ಯತೆಗಳು ಇನ್ನಷ್ಟು ಕಡಿಮೆಯಾಗಿದೆ.
ಈ ನಡುವೆಯೇ ಅಸ್ಸಾಂ ಗಡಿಯಲ್ಲಿ ಮತ್ತೆ ಅಡಿಕೆ ಕಳ್ಳಸಾಗಾಟವನ್ನು ಅಸ್ಸಾಂ ಗಡಿಭದ್ರತಾ ಪಡೆಯುವ ವಶಕ್ಕೆ ಪಡೆದುಕೊಂಡಿದೆ. ಮಿಜೋರಾಂನಲ್ಲಿ ನಿಯೋಜಿಸಲಾಗಿರುವ ಅಸ್ಸಾಂ ಗಡಿಭದ್ರತಾ ಸಿಬ್ಬಂದಿ ಚಂಪೈ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 13.99 ಲಕ್ಷ ಮೌಲ್ಯದ ಅಡಿಕೆ ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ 55 ಚೀಲಗಳಷ್ಟು ಅಡಿಕೆಯನ್ನು ಚಂಪಾಯಿಯ ಪ್ರದೇಶದಿಂದ ವಶಪಡಿಸಿಕೊಂಡಿದೆ.
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …