Advertisement
ವಿಶೇಷ ವರದಿಗಳು

ಅಡಿಕೆ ಕೃಷಿ ಲಾಭದಾಯಕವೇ..? – ಮೂರು ವರ್ಷದಲ್ಲಿ ಕೆಜಿಗೆ ₹34.53 ವೆಚ್ಚ ಏರಿಕೆ – ನ್ಯಾಯಸಮ್ಮತ ಬೆಲೆಗಾಗಿ ರೈತರ ಒತ್ತಾಯ

Share

ಅಡಿಕೆ ಕೃಷಿ ಇಂದು ರೈತರಿಗೆ ಲಾಭದಾಯಕ ಬೆಳೆ ಎನ್ನುವ ಭಾವನೆ ಇದ್ದರೂ, ಅದರ ಹಿಂದಿನ ವಾಸ್ತವ ಚಿತ್ರಣ ಬೇರೆ ಇದೆ. ಕಳೆದ ಮೂರು ವರ್ಷಗಳಲ್ಲಿ ಅಡಿಕೆ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದು, ಬೆಳೆಗಾರರ ಆದಾಯದ ಮೇಲೆ ತೀರಾ ಹೊಡೆತ ನೀಡುತ್ತಿದೆ.

ಕೃಷಿ ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ಭಟ್ ವರ್ಮುಡಿ ಅವರು ಈ ಹಿಂದೆ ಸಿದ್ಧಪಡಿಸಿದ್ದ ಅಧ್ಯಯನ ಮತ್ತು ವೆಚ್ಚ ವಿಶ್ಲೇಷಣೆಯ ಆಧಾರದ ಮೇಲೆ ರೂಪಿಸಲಾಗಿರುವ 2026-27 ರ ಅಂದಾಜು ಉತ್ಪಾದನಾ ವೆಚ್ಚದ ಪ್ರಕಾರ, ಕೃಷಿ ಒಳಸಾಮಗ್ರಿಗಳ ಬೆಲೆ, ಕಾರ್ಮಿಕ ವೆಚ್ಚ, ಧಾರಣೆ ಏರುಪೇರು ಹಾಗೂ ಭೂಮಿಯ ಮೌಲ್ಯದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅಡಿಕೆ ಉತ್ಪಾದನಾ ವೆಚ್ಚವು ಪ್ರತಿ ಕೆಜಿಗೆ ₹344.58 ಕ್ಕೆ ಏರಿಕೆಯಾಗಿದೆ.

2024ರ ಮೂಲ ಅಂಕಿ-ಅಂಶಗಳ ಪ್ರಕಾರ ಅಡಿಕೆ ಉತ್ಪಾದನಾ ವೆಚ್ಚ ಪ್ರತಿ ಕೆಜಿಗೆ ₹280.05 ಇದ್ದರೆ, 2026ರ ವೇಳೆಗೆ ಅದು ₹344.58 ಕ್ಕೆ ತಲುಪಿದೆ. ಈ ಲೆಕ್ಕಾಚಾರವನ್ನು ಸುಮಾರು 6-7% ವಾರ್ಷಿಕ ಹಣದುಬ್ಬರ ದರವನ್ನು ಆಧರಿಸಿ ರೂಪಿಸಲಾಗಿದೆ.

ಅಧ್ಯಯನದ ಪ್ರಕಾರ, ಒಂದು ಹೆಕ್ಟೇರ್‌ಗೆ ಅಡಿಕೆ ತೋಟದ ವಾರ್ಷಿಕ ನಿರ್ವಹಣಾ ವೆಚ್ಚ ₹3,33,700 ರಿಂದ ₹3,80,945 ಕ್ಕೆ ಏರಿಕೆಯಾಗಿದೆ. ಒಟ್ಟು ಕೃಷಿ ವೆಚ್ಚ ₹6,00,133 ರಿಂದ ₹6,74,090 ಕ್ಕೆ ಹೆಚ್ಚಳವಾಗಿದ್ದು, ಭೂಮಿಯ ಬಾಡಿಗೆ ಮೌಲ್ಯವನ್ನು ಸೇರಿಸಿದರೆ ಒಟ್ಟು ವೆಚ್ಚ ₹7,91,200 ಕ್ಕೆ ತಲುಪುತ್ತದೆ.

ಒಂದು ಹೆಕ್ಟೇರ್‌ಗೆ ಸರಾಸರಿ 2,300 ಕೆಜಿ ಇಳುವರಿ ಲೆಕ್ಕ ಹಾಕಿದಾಗ, ಪ್ರತಿ ಕೆಜಿ ಅಡಿಕೆ ಉತ್ಪಾದನೆಗೆ ₹344.58 ವೆಚ್ಚವಾಗುತ್ತದೆ. ಭೂಮಿಯ ಬಾಡಿಗೆ ಮೌಲ್ಯ ಹೊರತುಪಡಿಸಿದ ಉತ್ಪಾದನಾ ವೆಚ್ಚ ಕೆಜಿಗೆ ₹314.58  ಹಾಗೂ ಭೂಮಿಯ ಬಾಡಿಗೆ ಮೌಲ್ಯ ಸೇರಿಸಿದ ಸಂಪೂರ್ಣ ಉತ್ಪಾದನಾ ವೆಚ್ಚ ಕೆಜಿ ಗೆ ₹344.58 ಆಗುತ್ತದೆ. ಉತ್ಪಾದನಾ ವೆಚ್ಚದ ಮೇಲೆ 25% ಹೆಚ್ಚುವರಿ ಸೇರಿಸಿ ಕನಿಷ್ಠ ಆಮದು ಬೆಲೆಯನ್ನು (Minimum Import Price) ಪ್ರತಿ ಕೆಜಿಗೆ ₹450 ನಿಗದಿಪಡಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರೈತ ಸಂಘಟನೆಗಳ ಪ್ರಕಾರ, ಸಮರ್ಪಕ ಲಾಭಾಂಶವನ್ನು ಪರಿಗಣಿಸಿದರೆ ಆಮದು ದರವನ್ನು ಕನಿಷ್ಠ ₹450ಕ್ಕೆ ನಿಗದಿಪಡಿಸಬೇಕಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಯಾವ ವೆಚ್ಚ ಹೆಚ್ಚು ಏರಿಕೆಯಾಗಿದೆ? : ವೆಚ್ಚಗಳ ವಿಶ್ಲೇಷಣೆಯಲ್ಲಿ ಅತಿ ಹೆಚ್ಚು ಏರಿಕೆ ಕಂಡಿರುವುದು ಕಾರ್ಮಿಕ ಮತ್ತು ತೋಟ ನಿರ್ವಹಣಾ ವೆಚ್ಚಗಳಲ್ಲಿ. ಆಳು ಸಂಬಳದಲ್ಲಿ ಸುಮಾರು 50% ಏರಿಕೆಯಾಗಿದೆ. ಸ್ಪ್ರೇ ಕಾರ್ಯದ ಸಂಬಳದಲ್ಲಿ 25% ಹೆಚ್ಚಳ ದಾಖಲಾಗಿದೆ. ರಸಗೊಬ್ಬರ ವೆಚ್ಚವು 14.89% ಏರಿಕೆಯಾಗಿದ್ದರೆ, ಮೈಲುತುತ್ತ ಹಾಗೂ ಇತರ ನಿರ್ವಹಣಾ ವೆಚ್ಚಗಳು ಶೇಕಡಾ 104.17ರಷ್ಟು ಹೆಚ್ಚಾಗಿವೆ.

ಇದರಿಂದ ಅಡಿಕೆ ಕೃಷಿಯಲ್ಲಿ ಕೇವಲ ಗೊಬ್ಬರ ಅಥವಾ ಔಷಧಿ ವೆಚ್ಚ ಮಾತ್ರವಲ್ಲ, ಮಾನವ ಶ್ರಮದ ವೆಚ್ಚವೂ ರೈತರ ಮೇಲೆ ಭಾರೀ ಒತ್ತಡವನ್ನು ಉಂಟುಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ವಾಸ್ತವದಲ್ಲಿ ರೈತರಿಗೆ ಲಾಭ ಎಷ್ಟು? : ಇಲ್ಲಿ ₹344 ಎನ್ನುವುದು ಸಂಪೂರ್ಣ ಲಾಭದಾಯಕ ದರವಲ್ಲ. ಇದು ಕೇವಲ ಉತ್ಪಾದನಾ ವೆಚ್ಚದ ಏರಿಕೆಯನ್ನು ಸರಿದೂಗಿಸುವ ಮಟ್ಟದ ದರವಾಗಿದೆ. ರೈತನ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ, ಸಾಲ ಮರುಪಾವತಿ, ತೋಟದ ಪುನರ್‌ನಿರ್ಮಾಣ, ಯಂತ್ರೋಪಕರಣ ಹೂಡಿಕೆ ಹಾಗೂ ಅನಿರೀಕ್ಷಿತ ಪ್ರಕೃತಿ ವಿಕೋಪಗಳ ಅಪಾಯಗಳನ್ನು ಪರಿಗಣಿಸಿದರೆ ಇಂದು ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ 30 ರಿಂದ 50 ಶೇಕಡಾ ಲಾಭಾಂಶ ಅಗತ್ಯವಾಗುತ್ತದೆ.

ಕೃಷಿ ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ಭಟ್ ವರ್ಮುಡಿ ಅವರ ಅಭಿಪ್ರಾಯದಂತೆ, ಅಡಿಕೆ ಬೆಲೆಯನ್ನು ಕೇವಲ ಮಾರುಕಟ್ಟೆಯ ಬೇಡಿಕೆ-ಪೂರೈಕೆಯ ಆಧಾರದ ಮೇಲೆ ನಿರ್ಧರಿಸುವುದಕ್ಕಿಂತ ಉತ್ಪಾದನಾ ವೆಚ್ಚ, ಕಾರ್ಮಿಕ ಲಭ್ಯತೆ, ರೋಗ ನಿರ್ವಹಣಾ ವೆಚ್ಚ ಮತ್ತು ಹವಾಮಾನ ಅಪಾಯಗಳನ್ನು ಪರಿಗಣಿಸಿ ನ್ಯಾಯಸಮ್ಮತ ಬೆಲೆ ವ್ಯವಸ್ಥೆಯನ್ನು ರೂಪಿಸುವುದು ಅಗತ್ಯವಾಗಿದೆ.

ಮುಂದಿನ ದಿನಗಳ ಸವಾಲು :  ಇತ್ತೀಚಿನ ವರ್ಷಗಳಲ್ಲಿ ಎಲೆಚುಕ್ಕೆ ರೋಗ, ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ ಹಾಗೂ ಉತ್ಪಾದನಾ ವೆಚ್ಚದ ನಿರಂತರ ಏರಿಕೆ ಅಡಿಕೆ ಕೃಷಿಗೆ ಸವಾಲಾಗಿ ಪರಿಣಮಿಸಿವೆ. ಹೀಗಾಗಿ ಅಧ್ಯಯನದಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಹಾಗೂ ಕಾರ್ಮಿಕ ವೆಚ್ಚ ಏರಿಕೆಯನ್ನು ವಿಶೇಷವಾಗಿ ಪರಿಗಣಿಸಬೇಕಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಮಾರುಕಟ್ಟೆ ದರವನ್ನು ಕೇವಲ ಬೇಡಿಕೆ-ಪೂರೈಕೆಯ ದೃಷ್ಟಿಯಿಂದ ನೋಡುವುದಕ್ಕಿಂತ ಉತ್ಪಾದನಾ ವೆಚ್ಚ ಆಧಾರಿತ ನ್ಯಾಯಸಮ್ಮತ ಬೆಲೆ ವ್ಯವಸ್ಥೆಯ ಬಗ್ಗೆ ಸರ್ಕಾರ ಮತ್ತು ಸಹಕಾರ ಸಂಸ್ಥೆಗಳು ಚಿಂತನೆ ನಡೆಸಬೇಕಾಗಿದೆ. ಅಡಿಕೆ ಬೆಳೆಗಾರರ ಬದುಕು ಉಳಿಯಬೇಕಾದರೆ ಇಂದಿನ ವೆಚ್ಚಕ್ಕೆ ತಕ್ಕ ದರ ಮಾತ್ರವಲ್ಲ, ನಾಳೆಯ ಖರ್ಚು-ವೆಚ್ಚಗಳ ಕಡೆಗೂ ಇಂದು ಗಮನ ಹರಿಸುವ ಅಗತ್ಯವಿದೆ ಎಂಬುದು ರೈತ ಸಮುದಾಯದ ಪ್ರಮುಖ ಅಭಿಪ್ರಾಯವಾಗಿದೆ.

Arecanut production cost has increased from ₹280.05 per kg in 2024 to ₹344.58 per kg in 2026-27 due to rising labour, input and land costs. Farmer organizations are demanding a Minimum Import Price of at least ₹420-450 per kg to ensure fair returns and protect domestic growers.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

1 day ago

ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ

ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…

1 day ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…

1 day ago

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

1 day ago

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

2 days ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

2 days ago