ಅಡಿಕೆ ಅಕ್ರಮ ಸಾಗಾಟಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ) ಈಚೆಗೆ ಮುಂಬಯಿಯಲ್ಲಿ ದಾಳಿ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದೆ. ಈ ಸಂದರ್ಭ ಅಡಿಕೆ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ತಂತ್ರಗಾರಿಕೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ತೆರಿಗೆ ವಂಚನೆ, ಆಮದು ಸುಂಕ ವಂಚನೆ ಆರೋಪದ ಮೇಲೆ ಮುಂಬೈನಲ್ಲಿ ಅಡಿಕೆ ವ್ಯಾಪಾರಿ ವಾಸಿಂ ಬಾವಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ ಬಂಧಿಸಿದೆ. ಇದೀಗ ನಾಗಪುರ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದು, ಅಡಿಕೆ ಕೃತಕ ಅಭಾವ ಸೃಷ್ಟಿಸಿ ಲಾಭ ಮಾಡುವ ಅಂಶಗಳೂ ಬೆಳಕಿಗೆ ಬರುತ್ತಿದೆ.
ನಾಗ್ಪುರದ ಮಾಧ್ಯಮ ವರದಿಗಳ ಪ್ರಕಾರ, ಅಲ್ಲಿನ ಅಡಿಕೆ ವ್ಯಾಪಾರಿಗಳು ಕೆಲವರು ದಾಸ್ತಾನುಗಳನ್ನು ಬೇರೆ ಕಡೆಗೆ ವರ್ಗಾಯಿಸಿ ಅಡಿಕೆ ಮಾರುಕಟ್ಟೆಯ ಕೃತಕ ಅಭಾವ ಸೃಷ್ಟಿಸಿ ಆ ಬಳಿಕ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ತಂತ್ರಗಳು ನಡೆದಿವೆ.
ಅಡಿಕೆ ಆಮದು ಮತ್ತು ಸಾಗಾಟದ ಸಂದರ್ಭ ತೆರಿಗೆ ತಪ್ಪಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದೆ. ಹಿಂದೆ ಪ್ರತಿ ಕಿಲೋಗ್ರಾಂಗೆ 350-380 ರೂ.ಗೆ ಮಾರಾಟವಾಗುತ್ತಿದ್ದ ಅಡಿಕೆ ಈಗ 400-425 ರೂ.ಗೆ ಮಾರಾಟವಾಗುತ್ತಿದೆ. ವಾಸಿಂ ಬಾವಾ ಬಂಧನದ ನಂತರವೂ ಉದ್ದೇಶಪೂರ್ವಕವಾಗಿ ಕೃತಕ ಅಭಾವ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ.
ಜಾರಿ ನಿರ್ದೇಶನಾಲಯ ದಾಳಿ ಬಳಿಕ ಇಂಡೋನೇಷ್ಯಾ ಮೂಲಕ ಇಂಡೋ-ಬಾಂಗ್ಲಾದೇಶ ಮತ್ತು ಇಂಡೋ-ಮ್ಯಾನ್ಮಾರ್ ಗಡಿಗಳಿಂದ ವೀಳ್ಯದೆಲೆ ಪಡೆಯುವ ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳ ವ್ಯಾಪಾರಿಗಳು ತಮ್ಮ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಈಶಾನ್ಯ ರಾಜ್ಯಗಳಿಂದ ಈಗಾಗಲೇ ಸಾಗುತ್ತಿದ್ದ ಅಡಿಕೆ ಸಾಗಾಟದ ಲಾರಿಗಳನ್ನು ಬೇರೆ ರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ತನಿಖೆ ಮುಂದುವರಿದಿದ್ದು, ವಾಸಿಂ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಸಹಚರರು ತಲೆಮರೆಸಿಕೊಂಡಿದ್ದಾರೆ. ಇಡಿ ದಾಳಿಯ ಸಮಯದಲ್ಲಿ ಅಡಿಕೆಯನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಮನಗಂಡು ದಾಸ್ತಾನುಗಳ ವರ್ಗಾವಣೆಯನ್ನು ನಡೆಸಲಾಗುತ್ತಿದೆ.
ಸಣ್ಣ ಹಿಡುವಳಿದಾರರಿಗೆ ಈಗ ಕಾಳುಮೆಣಸು ಕೃಷಿಯ ಬಗ್ಗೆ ಸಾಕಷ್ಟು ಗೊಂದಲ. ಇಂತಹ ಸಮಯದಲ್ಲಿ…
ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ತಿರುಗುವಿಕೆಯು ಅಷ್ಟೇನು ಪರಿಣಾಮ ಬೀರುವ ಸಾಧ್ಯತೆಗಳು…
ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಸೈ ಗ್ರಾಮದಲ್ಲಿ ಭಾರೀ ಮಳೆಯಿಂದ…
ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…
ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್ಡಿಎಂ ಶಾಲೆ, ಮಂಗಳೂರು…
ಮುಂದಿನ 2 ರಿಂದ 3 ದಿನಗಳಲ್ಲಿ ದೇಶದ ಪೂರ್ವ, ಪಶ್ಚಿಮ, ಮಧ್ಯ ಮತ್ತು…