ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಅಡಿಕೆ ಬೆಳೆಗಾರರು ಕಳೆದ ಹಲವು ವರ್ಷಗಳಿಂದ ಇಳುವರಿಯಲ್ಲಿ ಭಾರಿ ಕುಸಿತವನ್ನು ಅನುಭವಿಸುತ್ತಿದ್ದಾರೆ. ಹೂ ಗೊಂಚಲು (ಸಿಂಗಾರ)ಗಳು ಸಮೃದ್ಧವಾಗಿ ಅರಳಿದರೂ, ಕಾಯಿ ಕಟ್ಟದೆ ಒಣಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ ಹೋದಾಗ ‘ಇಂಡಿಯನ್ ಜರ್ನಲ್ ಆಫ್ ಅರೆಕಾನಟ್, ಸ್ಪೈಸಸ್ ಮತ್ತು ಮೆಡಿಸಿನಲ್ ಪ್ಲಾಂಟ್ಸ್‘ (2000, ಸಂಚಿಕೆ 2:1) ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿಯು ಬೆಚ್ಚಿಬೀಳಿಸುವ ಸತ್ಯವೊಂದನ್ನು ಹೊರಹಾಕಿರುವುದು ಗಮನಕ್ಕೆ ಬಂದಿದೆ.
ಅದೇನೆಂದರೆ, ರೈತರು ಕೀಟಬಾಧೆ ತಡೆಯಲು ಬಳಸುವ ಬೇವಿನ ಎಣ್ಣೆಯೇ ಅಡಿಕೆಯ ಇಳುವರಿಗೆ ಮಾರಕವಾಗಿದೆ!
ಸಂಶೋಧನೆಯ ಹಿನ್ನೆಲೆ ಮತ್ತು ಪ್ರಯೋಗ : 1997 ರಿಂದ 2000ರ ಅವಧಿಯಲ್ಲಿ ಅಡಿಕೆ ತೋಟಗಳಲ್ಲಿ ಕಾಣಿಸಿಕೊಂಡ ‘ಕಜ್ಜಿ ಕೀಟ’ (Scale insects) ಮತ್ತು ‘ಹಿಟ್ಟು ತಿಗಣೆ’ (Mealy bugs) ಬಾಧೆಯನ್ನು ನಿಯಂತ್ರಿಸಲು ರೈತರು ಬೇವಿನ ಎಣ್ಣೆಯನ್ನು ನೇರವಾಗಿ ಹೂಗೊಂಚಲುಗಳಿಗೆ ಸಿಂಪಡಿಸುತ್ತಿದ್ದರು. ಇದರ ಪರಿಣಾಮವನ್ನು ತಿಳಿಯಲು ಸಿ.ಪಿ.ಸಿ.ಆರ್.ಐ (CPCRI) ವಿಟ್ಲ ಕೇಂದ್ರದಲ್ಲಿ ಮೂರು ವಿಧದ ದ್ರವಗಳನ್ನು ಪರೀಕ್ಷಿಸಲಾಯಿತು:
ಈ ದ್ರವಗಳನ್ನು 0.02% ರಿಂದ 6% ವರೆಗಿನ ವಿವಿಧ ಸಾಂದ್ರತೆಗಳಲ್ಲಿ ಪರಾಗದ ಮೊಳಕೆಯೊಡೆಯುವಿಕೆಯ ಮೇಲೆ ಪ್ರಯೋಗಿಸಲಾಯಿತು.
ಘಾತಕ ಫಲಿತಾಂಶಗಳು : ಪ್ರಯೋಗಾಲಯದ ವರದಿಯ ಪ್ರಕಾರ, ಬೇವಿನ ಎಣ್ಣೆ ಅಥವಾ ಗೇರುಬೀಜದ ಸಿಪ್ಪೆಯ ಎಣ್ಣೆಯ ಅಲ್ಪ ಸಂಪರ್ಕಕ್ಕೆ ಬಂದ ಪರಾಗದ ಕಣಗಳು 24 ಗಂಟೆಗಳ ನಂತರವೂ ಮೊಳಕೆಯೊಡೆಯಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಯಾವುದೇ ಎಣ್ಣೆ ಇರದ ಮಾಧ್ಯಮದಲ್ಲಿ ಶೇ. 51.93 ರಷ್ಟು ಪರಾಗಗಳು ಕೇವಲ 4 ಗಂಟೆಗಳಲ್ಲಿ ಮೊಳಕೆಯೊಡೆದವು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಇಳುವರಿ ಕುಂಠಿತವಾಗಲು ಪ್ರಮುಖ ಕಾರಣಗಳು:
ಬೆಳೆಗಾರರಿಗೆ ಸಲಹೆ : ಬೇವಿನ ಉತ್ಪನ್ನಗಳು ಸುರಕ್ಷಿತ ಎಂಬುದು ಕೀಟಗಳ ವಿಷಯದಲ್ಲಿ ನಿಜವಿರಬಹುದು, ಆದರೆ, ಅಡಿಕೆಯ ಪರಾಗಸ್ಪರ್ಶದ ವಿಷಯದಲ್ಲಿ ಅವು ವಿಷಕಾರಿಯಾಗಿವೆ. ರೈತರು ಅಡಿಕೆ ಹೂಗೊಂಚಲು (ಸಿಂಗಾರ) ಅರಳುವ ಸಮಯದಲ್ಲಿ (Spathe opening stage) ಯಾವುದೇ ಕಾರಣಕ್ಕೂ ಎಣ್ಣೆ ಆಧಾರಿತ ಕೀಟನಾಶಕಗಳನ್ನು ಸಿಂಪಡಿಸಬಾರದು.
ವೈಜ್ಞಾನಿಕವಾಗಿ ಶಿಫಾರಸು ಮಾಡದ ಇಂತಹ ಕ್ರಮಗಳು ಇಡೀ ವರ್ಷದ ಇಳುವರಿಯನ್ನು ಶೂನ್ಯಕ್ಕೆ ತರಬಲ್ಲವು. ತೋಟದಲ್ಲಿ ಕಜ್ಜಿ ಕೀಟ/ಶಿಲೀಂದ್ರದ ಬಾಧೆ ಕಂಡರೆ ಹೂಗೊಂಚಲಿಗೆ ಹಾನಿಯಾಗದ ಪರ್ಯಾಯ ಕ್ರಮಗಳಿಗಾಗಿ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.
ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…
ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…
ಚೀನಾದ Chinese Academy of Tropical Agricultural Sciences (CATAS) ವಿಜ್ಞಾನಿಗಳು Electron…
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…