Advertisement
ಸುದ್ದಿಗಳು

#Arecanut | ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿರುವ ಬರ್ಮಾ ಅಡಿಕೆ | ಕಳ್ಳ ಸಾಗಾಣಿಕೆ ತಡೆಯಲು ಬಿಗುವಿನ ಕ್ರಮ |

Share

ಅಡಿಕೆ ಕಳ್ಳಸಾಗಾಣಿಕೆ ಮೂಲಕ ಭಾರತಕ್ಕೆ ಬರುವುದು ಇನ್ನೂ ಕಡಿಮೆಯಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಅಕ್ರಮವಾಗಿ ಭಾರತದೊಳಕ್ಕೆ ಬಂದಿರುವ ಬರ್ಮಾ ಅಡಿಕೆಯು ಇಲ್ಲಿನ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಈ ನಡುವೆ ಮತ್ತೆ ಬರ್ಮಾ ಅಡಿಕೆ ಕಳ್ಳದಾರಿಯ ಮೂಲಕ ಸಾಗಾಟ ಮಾಡಲಾಗುತ್ತಿದೆ. ಸೆ.3 ರಂದು ಮಿಜೋರಾಂನ ಭದ್ರತಾ ಪಡೆಗಳು ಚಂಫೈ ಜಿಲ್ಲೆಯಲ್ಲಿ  ಅಡಿಕೆ ಸಾಗಾಟವನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡಿದೆ. ಸುಮಾರು  89.6 ಲಕ್ಷ ಮೌಲ್ಯದ ಅಡಿಕೆ ವಶ ಪಡೆದಿದ್ದಾರೆ.

ಮಿಜೋರಾಂನಲ್ಲಿ ಅಸ್ಸಾಂ ರೈಫಲ್ಸ್ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಅಡಿಕೆ ಸಾಗಾಟ ಪತ್ತೆ ಮಾಡಲಾಗಿದೆ. 89.6 ಲಕ್ಷ ಮೌಲ್ಯದ 160 ಚೀಲ ಅಡಿಕೆಗಳನ್ನು ವಶಪಡಿಸಿಕೊಂಡಿದೆ ಎಂದು ಅಸ್ಸಾಂ ರೈಫಲ್ಸ್ ಹೇಳಿಕೆ ತಿಳಿಸಿದೆ.

ಕಳೆದ ಕೆಲವು ಸಮಯಗಳಿಂದ ಅಡಿಕೆ ಕಳ್ಳಸಾಗಾಣಿಕೆ ಮೂಲಕ ಭಾರತದೊಳಕ್ಕೆ ಬರುತ್ತಿದೆ. ಬರ್ಮಾ ಅಡಿಕೆಯು ವಿವಿಧ ದಾರಿಯ ಮೂಲಕ ಭಾರತದೊಳಕ್ಕೆ ಬಂದು, ಕರ್ನಾಟಕದ ವಿವಿಧ ಕಡೆಗಳಿಗೂ ಬಂದಿಳಿದಿದೆ ಎಂದು ಮಾರುಕಟ್ಟೆ ವಲಯದಲ್ಲಿ ಚರ್ಚೆಯಾಗುತ್ತಿದೆ. ಹೀಗಾಗಿ ಈಗ ಏರಿಕೆ ಕಾಣಬೇಕಾದ ಅಡಿಕೆ ಮಾರುಕಟ್ಟೆಯು ಕಳೆಗುಂದಿದೆ.

ಗಣೇಶ ಚೌತಿಯ ಸಮಯದಲ್ಲಿ ಅಡಿಕೆಗೆ ಹೆಚ್ಚಿನ ಬೇಡಿಕೆ ಬರುವುದು ಸಾಮಾನ್ಯವಾಗಿದೆ. ಗಣೇಶ ಚೌತಿಯ ಬೇಡಿಕೆ ಪೂರೈಕೆಗೆ ಈಗಲೇ ಅಡಿಕೆ ದಾಸ್ತಾನು ಪ್ರಕ್ರಿಯೆ ನಡೆಯುತ್ತದೆ. ಆದರೆ ಈ ಬಾರಿ ಅಂತಹ ಬೇಡಿಕೆ ಆರಂಭಗೊಂಡಿಲ್ಲ.  ಕಳೆದ ಕೆಲವು ದಿನಗಳಿಂದ ಹಾಗೂ ಈಗಲೂ ವಿವಿಧ ಮಾರ್ಗಗಳಿಂದ ಬರ್ಮಾ ಅಡಿಕೆಯನ್ನು ಸಂಗ್ರಹಿಸಿ ಗಣೇಶ ಚೌತಿಯ ಬೇಡಿಕೆಯನ್ನು ಪೂರೈಸಲು ಬಳಕೆ ಮಾಡಲಾಗುತ್ತಿದೆ ಎನ್ನುವುದು ಮಾರುಕಟ್ಟೆ ವಲಯದ ಅಭಿಪ್ರಾಯ. ಆದರೆ ಅಡಿಕೆ ಧಾರಣೆ ಸ್ಥಿರತೆಯಲ್ಲಿ ಇರಬಹುದು, ನಿರೀಕ್ಷೆಯಂತೆ ಏರಿಕೆಯಾಗದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಕಡಿಮೆ ಗುಣಮಟ್ಟದ ಬರ್ಮಾ ಅಡಿಕೆಯನ್ನು ಇಲ್ಲಿನ ಅಡಿಕೆಯೊಂದಿಗೆ ಬೆರೆಸಿ ಮಾರಾಟ ಮಾಡುವ ಪ್ರಯತ್ನವೂ ಕೆಲವು ಕಡೆ ನಡೆಯುತ್ತಿದೆ. ಹೀಗಾಗಿ ಈಗ ಅಡಿಕೆ ಬೆಳೆಗಾರರಿಗೆ ಬರ್ಮಾ ಅಡಿಕೆ ಬಹುದೊಡ್ಡ ತಲೆನೋವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

20 hours ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

2 days ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

2 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

3 days ago