ನಮ್ಮದು ಎ.ಸಿ. ಕಾರು(Car), ಸೆಖೆಯ ಪ್ರಶ್ನೆಯೇ ಇಲ್ಲ ಎಂಬ ಖುಷಿ. ಹೀಗಾಗಿ ಬಿರುಬಿಸಿಲಿನಲ್ಲಿ(Hot) ಶಾಪಿಂಗ್(Shopping) ಮುಗಿಸಿ ಕಾರಲ್ಲಿ ಕುಳಿತೊಡನೆ ಎ.ಸಿ(AC) ಆನ್ ಮಾಡಿ ನಿಟ್ಟುಸಿರು ಬಿಡುತ್ತೀರಾ? ನೀವು ಮಾಡುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ.
ಕಾರಲ್ಲಿ ಕುಳಿತೊಡನೆ ಮೊದಲು ಕಿಟಕಿ ತೆಗೆಯಿರಿ. ಕಾರ್ ಡ್ಯಾಶ್‌ಬೋರ್ಡ್. ಸೋಫಾ, ಏರ್ ಫ್ರೆಶ್‌ನರ್ ಎಲ್ಲದರಿಂದ ಬೆನಝೀನ್ ಎಂಬ ವಿಷಅನಿಲ ಬಿಡುಗಡೆ ಆಗಿರುತ್ತದೆ. ಕಾರಿನ ಬಾಗಿಲು ತೆರೆದೊಡನೆ ಮೂಗಿಗೆ ಬಡಿಯುವ ಬಿಸಿಯಾದ ಪ್ಲಾಸ್ಟಿಕ್ ವಾಸನೆಯನ್ನು ಗಮನಿಸಿದ್ದೀರಾ? ಇದು ಕ್ಯಾನ್ಸರ್ ಕಾರಕ ಅಂತ ಸಂಶೋಧನೆಗಳು ತಿಳಿಸಿವೆ. ಅಷ್ಟೇಕೆ ಮೂಳೆಗಳಿಗೂ ಮಾರಕ, ರಕ್ತಹೀನತೆ, ಬಿಳಿಯ ರಕ್ತಕಣಗಳ ಕುಂದುವಿಕೆ, ವಾಸನೆಯ ದೀರ್ಘಕಾಲಿಕ ಸೇವನೆಯಿಂದ ಲ್ಯುಕೇಮಿಯ, ಕ್ಯಾನ್ಸರ್ ಸಾಧ್ಯತೆಯ ಹೆಚ್ಚಳ, ಗರ್ಭಪಾತ ಇವೆಲ್ಲದರ ಸಾಧ್ಯತೆಯೂ ದೃಢಪಟ್ಟಿದೆ.
ಮುಚ್ಚಿನ ಬಾಗಿಲಿನ ಒಳಗಿರುವ ಬೆನ್‌ಝೀನ್ ಮಟ್ಟ ಚ.ಅ. 50 ಎಂ.ಜಿ.ಬಾಗಿಲು-ಕಿಟಕಿ ಮುಚ್ಚಿ ನಿಲ್ಲಿಸಿದ ಕಾರ್‌ನಲ್ಲಿ 400-800 ಎಂ.ಜಿ. ಬೆನ್‌ಝೀನ್ ಇರುತ್ತದೆ. 60 ಡಿಗ್ರಿಗೂ ಮೀರಿದ ಉಷ್ಣಾಂಶದಲ್ಲಿ ನಿಂತ ಕಾರಿನಲ್ಲಿ ಬೆನ್‌ಝೀನ್ ಮಟ್ಟ 2000-4000ದಷ್ಟು! ಅಂದರೆ ಮಾನವ ತಡೆಯಬಹುದಾದ ಮಟ್ಟಕ್ಕಿಂತ 40 ಪಟ್ಟು ಹೆಚ್ಚು ವಿಷವಾಯು!
ಕಾರ್‌ನ ಬಾಗಿಲು ತೆರೆದೊಡನೆ ಒಳಗೆ ಕೂತು ಎ.ಸಿ. ಆನ್ ಮಾಡುವ ಮೊದಲು ಕಿಟಕಿ-ಬಾಗಿಲು ತೆರೆದು ವಿಷವಾಯು ಹೊರಗೆ ಹೋಗಲು ಬಿಡಿ. ಇಲ್ಲವಾದರೆ ಬೆನ್‌ಝೀನ್ ಎಂಬ ವಿಷ ಶರೀರ ಪ್ರವೇಶಿಸಿ ಮಾಡುವ ಅನಾಹುತ ಸಾಕಷ್ಟು, ಲಿವರ್, ಕಿಡ್ನಿಗೂ ಕ್ರಮೇಣವಾಗಿ ಹಾನಿ ಮಾಡುತ್ತದೆ ಈ ವಿಷಗಾಳಿ.
Source : Digital Media
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…