ಕಾರಿನಲ್ಲಿ ಕುಳಿತ ತಕ್ಷಣ ಎ.ಸಿ. ಆನ್ ಮಾಡಬೇಡಿ | ಎ.ಸಿ. ಬೇಕಾ? ಆರೋಗ್ಯ ಬೇಕಾ?

February 6, 2024
12:24 PM

ನಮ್ಮದು ಎ.ಸಿ. ಕಾರು(Car), ಸೆಖೆಯ ಪ್ರಶ್ನೆಯೇ ಇಲ್ಲ ಎಂಬ ಖುಷಿ. ಹೀಗಾಗಿ ಬಿರುಬಿಸಿಲಿನಲ್ಲಿ(Hot) ಶಾಪಿಂಗ್(Shopping) ಮುಗಿಸಿ ಕಾರಲ್ಲಿ ಕುಳಿತೊಡನೆ ಎ.ಸಿ(AC) ಆನ್ ಮಾಡಿ ನಿಟ್ಟುಸಿರು ಬಿಡುತ್ತೀರಾ? ನೀವು ಮಾಡುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. 

ಕಾರಲ್ಲಿ ಕುಳಿತೊಡನೆ ಮೊದಲು ಕಿಟಕಿ ತೆಗೆಯಿರಿ. ಕಾರ್ ಡ್ಯಾಶ್‌ಬೋರ್ಡ್. ಸೋಫಾ, ಏರ್ ಫ್ರೆಶ್‌ನರ್ ಎಲ್ಲದರಿಂದ ಬೆನಝೀನ್ ಎಂಬ ವಿಷಅನಿಲ ಬಿಡುಗಡೆ ಆಗಿರುತ್ತದೆ. ಕಾರಿನ ಬಾಗಿಲು ತೆರೆದೊಡನೆ ಮೂಗಿಗೆ ಬಡಿಯುವ ಬಿಸಿಯಾದ ಪ್ಲಾಸ್ಟಿಕ್ ವಾಸನೆಯನ್ನು ಗಮನಿಸಿದ್ದೀರಾ? ಇದು ಕ್ಯಾನ್ಸರ್ ಕಾರಕ ಅಂತ ಸಂಶೋಧನೆಗಳು ತಿಳಿಸಿವೆ. ಅಷ್ಟೇಕೆ ಮೂಳೆಗಳಿಗೂ ಮಾರಕ, ರಕ್ತಹೀನತೆ, ಬಿಳಿಯ ರಕ್ತಕಣಗಳ ಕುಂದುವಿಕೆ, ವಾಸನೆಯ ದೀರ್ಘಕಾಲಿಕ ಸೇವನೆಯಿಂದ ಲ್ಯುಕೇಮಿಯ, ಕ್ಯಾನ್ಸರ್ ಸಾಧ್ಯತೆಯ ಹೆಚ್ಚಳ, ಗರ್ಭಪಾತ ಇವೆಲ್ಲದರ ಸಾಧ್ಯತೆಯೂ ದೃಢಪಟ್ಟಿದೆ.

ಮುಚ್ಚಿನ ಬಾಗಿಲಿನ ಒಳಗಿರುವ ಬೆನ್‌ಝೀನ್ ಮಟ್ಟ ಚ.ಅ. 50 ಎಂ.ಜಿ.ಬಾಗಿಲು-ಕಿಟಕಿ ಮುಚ್ಚಿ ನಿಲ್ಲಿಸಿದ ಕಾರ್‌ನಲ್ಲಿ 400-800 ಎಂ.ಜಿ. ಬೆನ್‌ಝೀನ್ ಇರುತ್ತದೆ. 60 ಡಿಗ್ರಿಗೂ ಮೀರಿದ ಉಷ್ಣಾಂಶದಲ್ಲಿ ನಿಂತ ಕಾರಿನಲ್ಲಿ ಬೆನ್‌ಝೀನ್ ಮಟ್ಟ 2000-4000ದಷ್ಟು! ಅಂದರೆ ಮಾನವ ತಡೆಯಬಹುದಾದ ಮಟ್ಟಕ್ಕಿಂತ 40 ಪಟ್ಟು ಹೆಚ್ಚು ವಿಷವಾಯು!

ಕಾರ್‌ನ ಬಾಗಿಲು ತೆರೆದೊಡನೆ ಒಳಗೆ ಕೂತು ಎ.ಸಿ. ಆನ್ ಮಾಡುವ ಮೊದಲು ಕಿಟಕಿ-ಬಾಗಿಲು ತೆರೆದು ವಿಷವಾಯು ಹೊರಗೆ ಹೋಗಲು ಬಿಡಿ. ಇಲ್ಲವಾದರೆ ಬೆನ್‌ಝೀನ್ ಎಂಬ ವಿಷ ಶರೀರ ಪ್ರವೇಶಿಸಿ ಮಾಡುವ ಅನಾಹುತ ಸಾಕಷ್ಟು, ಲಿವರ್, ಕಿಡ್ನಿಗೂ ಕ್ರಮೇಣವಾಗಿ ಹಾನಿ ಮಾಡುತ್ತದೆ ಈ ವಿಷಗಾಳಿ.

Source : Digital Media

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19-04-2026 | ಇಂದಿನಿಂದ ಕರಾವಳಿ, ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಆರಂಭ
April 19, 2026
11:59 AM
by: ಸಾಯಿಶೇಖರ್ ಕರಿಕಳ
ಜಾಗತಿಕ ಬಿಕ್ಕಟ್ಟಿನ ಪರಿಣಾಮ : ಬೆಂಗಳೂರಿಗೆ ಆಟೋ LPG ಪೂರೈಕೆ 300% ಹೆಚ್ಚಿಸಿದ ಇಂಡಿಯನ್ ಆಯಿಲ್
April 19, 2026
7:45 AM
by: ಮಿರರ್‌ ಡೆಸ್ಕ್
ಕೃಷಿಗೆ ಹೊಸ ಚೈತನ್ಯ- ದೂರದರ್ಶನ ಚಂದನದಿಂದ “ರೈತ ರತ್ನ” ರಿಯಾಲಿಟಿ ಶೋ ಆರಂಭ
April 19, 2026
7:29 AM
by: ಮಿರರ್‌ ಡೆಸ್ಕ್
ಮಿಜೋರಾಂನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟಕ್ಕೆ ತಡೆ – ₹54.88 ಲಕ್ಷ ಮೌಲ್ಯದ 98 ಚೀಲ ವಶ
April 18, 2026
10:06 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror