ಬರಗಾಲ(Drought) ಬಂದರೆ ಮಳೆ(Rain) ಇಲ್ಲದೆ ತರಕಾರಿ ರೇಟ್(Vegetable rate) ಗಗನಕ್ಕೆ ಹಾರುತ್ತದೆ. ಅದೇ ರೀತಿ ಮಳೆ ಜಾಸ್ತಿಯಾದರು ಮಳೆಗೆ ತರಕಾರಿ ಕೊಳೆತು ದರ ಏರುತ್ತದೆ(Price hike). ಇನ್ನೇನು ಮುಂಗಾರು(Mansoon rain) ಆರಂಭವಾಗಿದೆ. ತರಕಾರಿ ಕೊಳೆಯುವಂತೆ ಇನ್ನು ಮಳೆ ಆರಂಭವಾಗಿಲ್ಲ. ಆದರೂ ತರಕಾರಿ ರೇಟು ಜಾಸ್ತಿಯಾಗಿದೆ. ಯಾವ ತರಕಾರಿ ಬೆಲೆ ಕೇಳಿದರು ತರಕಾರಿ ಕೊಂಡುಕೊಳ್ಳುವುದೇ ಬೇಡ ಅನ್ನಿಸುತ್ತದೆ. ಪ್ರತಿ ವರ್ಷದಂತೆ ಮಳೆಗಾಲ ಆರಂಭವಾಗುತ್ತಿದ್ದಂತೆ ತರಕಾರಿ ದರಗಳು ಗಗನಮುಖಿಯಾಗಿವೆ. ಈ ಪೈಕಿ ಬೀನ್ಸ್ ದರ ಡಬಲ್ ಸೆಂಚುರಿ ದಾಟಿದೆ. ದೂರದ ಹಿಮಾಚಲ ಪ್ರದೇಶದಿಂದ(Himachala Pradesh) ಬೀನ್ಸ್ (Beans Price Hike) ತರಲಾಗ್ತಿದ್ದು, ಸದ್ಯಕ್ಕೆ ಬೀನ್ಸ್ ಶ್ರೀಮಂತರ ತರಕಾರಿಯಾಗಿ ಮಾರ್ಪಟ್ಟಿದೆ.
ತರಕಾರಿ ದರ ಏರುತ್ತಲೇ ಇದ್ದು, ಗ್ರಾಹಕರಿಗೆ ಬಹುದೊಡ್ಡ ಹೊರೆಯಾಗಿ ಪರಿಣಮಿಸಿದೆ. ಮಳೆ ಹೆಚ್ಚಾಗುತ್ತಿದ್ದಂತೆಯೇ ತರಕಾರಿ ದರವೂ ಗಗನಕ್ಕೇರಿದೆ. ಅದ್ರಲ್ಲೂ ಬೀನ್ಸ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹೋಲ್ ಸೇಲ್ ದರವೇ ಡಬಲ್ ಸೆಂಚುರಿ ದಾಟಿ, ಗ್ರಾಹಕರನ್ನು ಹುಬ್ಬೇರುವಂತೆ ಮಾಡಿದೆ. ರೀಟೇಲ್‌ನಲ್ಲಿ ಪ್ರತಿ ಕೆಜಿ ಗೆ 200 ಕ್ಕೂ ಹೆಚ್ಚು ದರ ನಿಗದಿಯಾಗುತ್ತಿದೆ.
ಬೀನ್ಸ್ ದರ ಏರಿಕೆಗೆ ಇದೇ ಕಾರಣ : ಕಳೆದ ವರ್ಷದ ಬರಗಾಲದಿಂದ ರಾಜ್ಯದಲ್ಲಿ ಎಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಬೀನ್ಸ್ ಬೆಳೆದಿಲ್ಲ. ಹೀಗಾಗಿ ದೂರದ ಹಿಮಾಚಲ ಪ್ರದೇಶದಿಂದ ಬೀನ್ಸ್ ಖರೀದಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹುಬ್ಬಳ್ಳಿ ವರ್ತಕರು ದೆಹಲಿ ಮೂಲಕ ಬೀನ್ಸ್ ತರಿಸಿಕೊಳ್ಳುತ್ತಿದ್ದಾರೆ. ಹುಬ್ಬಳ್ಳಿಗೆ ನಿತ್ಯ ಒಂದು ಟ್ರಕ್ ಬೀನ್ಸ್ ತರಿಸಲಾಗುತ್ತಿದೆ. ಪ್ರತಿ ಟ್ರಕ್ ನಲ್ಲಿ 15 ಟನ್ ಬೀನ್ಸ್ ಸಾಗಾಟ ಮಾಡಲಾಗುತ್ತಿದೆ. ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಇಲ್ಲಿಂದಲೇ ಪೂರೈಕೆ ಮಾಡಲಾಗುತ್ತದೆ. ದೂರದ ಊರಿನಿಂದ ತರಿಸುತ್ತಿರುವುದರಿಂದ ದರ ಏರಿಕೆಯಾಗಿದೆ.
ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶಾದ್ಯಂತ 1 ಸಾವಿರದ 600 ಚಾಲಕ ತರಬೇತಿ ಕೇಂದ್ರಗಳನ್ನು…
ಇಂದು ಕೆಲವು ಕಡೆ ಗುಡುಗು ಸಹಿತ ಮಳೆಯ ಲಕ್ಷಣವಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ…
ಕೃಷಿಕ ಯಶಸ್ವಿಯಾಗಬೇಕಾದರೆ , ಕೃಷಿ ಬೆಳೆಯಬೇಕಾದರೆ,ಉಳಿಯಬೇಕಾದರೆ ತಿಂಗಳಿಗೆ ಒಂದಷ್ಟು ಆದಾಯ ಸಿಗಲೇಬೇಕು. ಮುಖ್ಯ…
ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದೆಂದು ಸಂಸತ್ ಸದಸ್ಯ ತೇಜಸ್ವಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ…