ಅಸ್ಸಾಂನ ಚಂಪೈ ಜಿಲ್ಲೆಯ ಚುಂಗ್ಟೆ ಗ್ರಾಮದ ಬಳಿ ಕಾಡಿನಲ್ಲಿ ಶೇಖರಿಸಿದ್ದ ಅಡಿಕೆಯನ್ನು ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್ ವಶಪಡಿಸಿಕೊಂಡಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್ ನಡೆಸಿದ ದಾಳಿಯಲ್ಲಿ 327 ಚೀಲ ಅಡಿಕೆಯನ್ನು ವಶಪಡಿಸಿಕೊಂಡಿದೆ. ಸುಮಾರು 1.83 ಕೋಟಿ ಮೌಲ್ಯದ ಅಡಿಕೆ ವಶಕ್ಕೆ ಪಡೆಯಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಹೇಳಿದೆ.
ಅಸ್ಸಾಂ ರೈಫಲ್ಸ್, ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್, ಚಂಫೈ ಅವರ ಸಹಯೋಗದೊಂದಿಗೆ ಮಿಜೋರಾಂನ ಚಂಫೈ ಜಿಲ್ಲೆಯ ಟ್ಲಾಂಗ್ಸಾಮ್‌ನಿಂದ 1.02 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಅಡಿಕೆಯನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ಅಸ್ಸಾಂ ರೈಫಲ್ಸ್ ಹೇಳಿದೆ.
ಟ್ಲಾಂಗ್ಸಾಮ್, ಚಂಫೈ, ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್, ಚಂಫೈನ ಸಾಮಾನ್ಯ ಪ್ರದೇಶದಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟದ ಬಗ್ಗೆ ನಿಗಾ ಇರಿಸಲಾಗಿತ್ತು. ಹೀಗಾಗಿ ಮೇ.2 ರ ಕಾರ್ಯಾಚರಣೆಯಲ್ಲಿ ಲಾರಿಯೊಂದರಲ್ಲಿ 187 ಚೀಲ ಅಕ್ರಮ ಅಡಿಕೆ ಪತ್ತೆಯಾಗಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಸಹ ಬಂಧಿಸಲಾಯಿತು. ವಶಪಡಿಸಿಕೊಂಡ ಕಳ್ಳಸಾಗಣೆ, ವ್ಯಕ್ತಿ ಮತ್ತು ವಾಹನವನ್ನು ಚಂಫೈನ ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್‌ಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಬೃಹತ್ ಪ್ರಮಾಣದ ಅಡಿಕೆ ಪತ್ತೆಯಾಗಿದೆ.
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…
ರೈತರಿಗೆ ನ್ಯಾಯ ಕೊಡಲು MSPಗೆ ವೈಜ್ಞಾನಿಕ ಆಧಾರ ಅಗತ್ಯ ಎಂದು ಕೋಡಿಹಳ್ಳಿ ಚಂದ್ರಶೇಖರ್…
ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…