ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ಆರಂಭ

April 13, 2026
10:45 PM
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ಆರಂಭವಾಗಿದೆ. ಇದು ರೈತರಿಗೆ ನಿಖರ ಹವಾಮಾನ ಮಾಹಿತಿ ನೀಡಿ ಕೃಷಿಗೆ ಸಹಾಯಕವಾಗಲಿದೆ.

ಧಾರವಾಡ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕೃಷಿ ಹವಾಮಾನ ವೀಕ್ಷಣಾಲಯದಲ್ಲಿ ನೂತನವಾಗಿ ಸ್ವಯಂಚಾಲಿತ ಹವಾಮಾನ ಕೇಂದ್ರ (AWS) ಆರಂಭಿಸಲಾಗಿದೆ.

ಈ ಕುರಿತು ಉತ್ತರ ಕರ್ನಾಟಕ ಕೃಷಿ ಹವಾಮಾನ ಮುನ್ಸೂಚನೆ ಹಾಗೂ ಸಂಶೋಧನಾ ಕೇಂದ್ರದ ಉಸ್ತುವಾರಿ ಅಧಿಕಾರಿ ಡಾ. ರಾಜು ರೋಖಡೆ ಮಾಹಿತಿ ನೀಡಿದ್ದು, ಈ ಕೇಂದ್ರದಿಂದ ರೈತರಿಗೆ ನಿಖರ ಹಾಗೂ ತ್ವರಿತ ಹವಾಮಾನ ಮಾಹಿತಿ ಲಭ್ಯವಾಗಲಿದೆ ಎಂದರು. ಭಾರತೀಯ ಹವಾಮಾನ ಇಲಾಖೆ ದೇಶಾದ್ಯಂತ ಸ್ಥಾಪಿಸಿರುವ 700 ಕೇಂದ್ರಗಳಲ್ಲಿ ಇದು ಒಂದಾಗಿದ್ದು, ಸುಮಾರು ₹25 ಲಕ್ಷ ವೆಚ್ಚದಲ್ಲಿ ಈ ನೂತನ ತಂತ್ರಜ್ಞಾನದ ಕೇಂದ್ರವನ್ನು ನಿರ್ಮಿಸಲಾಗಿದೆ.

ಪ್ರಸ್ತುತ ವೀಕ್ಷಣಾಲಯದಲ್ಲಿ ವಿವಿಧ ಸಾಧನಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಮಳೆ ಮಾಪಕ (Rain Gauge), ಗಾಳಿಯ ವೇಗ ಮಾಪಕ (Anemometer), ಗಾಳಿಯ ದಿಕ್ಕೂಚಿ (Wind Vane), ಕನಿಷ್ಠ-ಗರಿಷ್ಠ ಉಷ್ಣತೆ ಮಾಪಕ (Stevenson Screen), ಬಿಸಿಲು ಅವಧಿ ಮಾಪಕ, ನೀರಿನ ಆವಿ ಮಾಪಕ ಈ ಎಲ್ಲಾ ಮಾಹಿತಿಯನ್ನು ವೀಕ್ಷಕರು ಪ್ರತ್ಯೇಕವಾಗಿ ಸಂಗ್ರಹಿಸಬೇಕಾಗುತ್ತಿತ್ತು. ಆದರೆ ಈಗ, ಸೆನ್ಸರ್ ಆಧಾರಿತ ಸ್ವಯಂಚಾಲಿತ ಕೇಂದ್ರದಿಂದ ಪ್ರತಿ ಗಂಟೆಗೆ ಎಲ್ಲ ಮಾಹಿತಿಯೂ ಸ್ವಯಂಚಾಲಿತವಾಗಿ ಅಪ್ಲೋಡ್ ಆಗುತ್ತದೆ.

ಈ ಕೇಂದ್ರದಿಂದ ಪ್ರಮುಖ ಮಾಹಿತಿ ಲಭ್ಯವಾಗಲಿದೆ. ಉಷ್ಣತೆ, ಮಳೆ ಪ್ರಮಾಣ, ಗಾಳಿಯ ವೇಗ, ವಾಯುಭಾರ ಮತ್ತು ಮಣ್ಣಿನ ತೇವಾಂಶ ಕುರಿತ ಮಾಹಿತಿಯು ರೈತರಿಗೆ ಬೆಳೆ ಬೆಳೆಯಲು ಪೂರಕವಾಗಲಿದೆ.  ಬೆಳೆ ಯೋಜನೆ ಸುಲಭವಾಗುತ್ತದೆ, ನೀರಿನ ಬಳಕೆ ಸಮರ್ಪಕವಾಗಿ ಮಾಡಬಹುದು, ಗೊಬ್ಬರ ಬಳಕೆ ವೈಜ್ಞಾನಿಕವಾಗಿ ನಿರ್ಧರಿಸಬಹುದು, ಹವಾಮಾನ ಆಧಾರಿತ ಕೃಷಿ ನಿರ್ವಹಣೆ ಸಾಧ್ಯ.

ಈ ಸ್ವಯಂಚಾಲಿತ ಹವಾಮಾನ ಕೇಂದ್ರದಿಂದ ದೊರೆಯುವ ದತ್ತಾಂಶವು. ಮಳೆ, ಗಾಳಿ, ಬಿಸಿಲಿನ ತೀವ್ರತೆ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತದೆ. ಪ್ರಕೃತಿ ವಿಕೋಪಗಳ ಮುಂಚಿತ ಸಿದ್ಧತೆಗೆ ಸಹಾಯವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

An Automatic Weather Station (AWS) has been launched at the Agricultural University in Dharwad, enabling real-time and accurate weather data collection. This will help farmers make informed decisions on crop planning, irrigation, and fertilizer usage while also aiding disaster preparedness.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?
September 3, 2026
1:13 PM
by: ಸಾಯಿಶೇಖರ್ ಕರಿಕಳ
ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ
September 3, 2026
7:08 AM
by: ದ ರೂರಲ್ ಮಿರರ್.ಕಾಂ
ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?
September 2, 2026
10:52 PM
by: ದ ರೂರಲ್ ಮಿರರ್.ಕಾಂ
ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ
September 2, 2026
7:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror