ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ಕೃಷಿಗೆ ಬ್ರೇಕ್‌? ಹೆಬ್ಬೇವು, ಅಗ್ರೋಫಾರೆಸ್ಟ್ರಿಯತ್ತ ಗಮನ

September 24, 2026
7:23 AM
ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ತೋಟಗಳ ವಿಸ್ತರಣೆಯಿಂದ ಜೀವವೈವಿಧ್ಯ, ಮಣ್ಣು ಮತ್ತು ನೀರಿನ ಮೇಲೆ ಉಂಟಾಗಬಹುದಾದ ಪರಿಣಾಮಗಳ ಹಿನ್ನೆಲೆಯಲ್ಲಿ ಪರ್ಯಾಯ ಕೃಷಿ ಮಾದರಿಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ರಬ್ಬರ್‌ ಜೊತೆಗೆ ಅಗರ್‌, ಹಣ್ಣುಗಳ ಸಂಯೋಜಿತ ಅಗ್ರೋಫಾರೆಸ್ಟ್ರಿ ಮತ್ತು ಹೆಬ್ಬೇವಿನಂತಹ ಪರ್ಯಾಯ ತೋಟಗಾರಿಕಾ ಮಾದರಿಗಳಿಗೆ ಒತ್ತು ನೀಡಲಾಗುತ್ತಿದೆ

ರಬ್ಬರ್‌ ಕೃಷಿ ರೈತರಿಗೆ ಉತ್ತಮ ಆದಾಯ ನೀಡುತ್ತಿದ್ದರೂ, ದೊಡ್ಡ ಪ್ರಮಾಣದ ಏಕಬೆಳೆ ರಬ್ಬರ್‌ ತೋಟಗಳು ಜೀವವೈವಿಧ್ಯ, ಮಣ್ಣಿನ ಫಲವತ್ತತೆ ಹಾಗೂ ನೀರಿನ ಲಭ್ಯತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ತಜ್ಞರ ಎಚ್ಚರಿಕೆಯ ಹಿನ್ನೆಲೆಯಲ್ಲಿ ತ್ರಿಪುರಾ ಸರ್ಕಾರ ಪರ್ಯಾಯ ಕೃಷಿ ಮಾದರಿಗಳತ್ತ ಗಮನ ಹರಿಸಿದೆ. ಈಚೆಗೆ ನಡೆದ ರಾಜ್ಯದ ಸಭೆಯಲ್ಲಿ ರಬ್ಬರ್‌ ಕೃಷಿಯ ಜೊತೆಗೆ ಮಾವು, ಬಿದಿರು ಹಾಗೂ ಇತರ ತೋಟಗಾರಿಕಾ ಬೆಳೆಗಳ ಕುರಿತು ಚರ್ಚಿಸಲಾಯಿತು.

ರಬ್ಬರ್‌ ರೈತರಿಗೆ ಪರ್ಯಾಯವೇನು? : ರಬ್ಬರ್‌ ಅಧ್ಯಯನ ತಂಡವು ತ್ರಿಪುರಾದ ವಿವಿಧ ಜಿಲ್ಲೆಗಳಲ್ಲಿ ರೈತರು ಹಾಗೂ ಇತರರೊಂದಿಗೆ ನಡೆಸಿದ ಸಮಾಲೋಚನೆಯ ಆಧಾರದ ಮೇಲೆ ಶಿಫಾರಸುಗಳನ್ನು ನೀಡಿದೆ. ರಬ್ಬರ್‌, ಅಗರ್‌ ಹಾಗೂ ಹಣ್ಣಿನ ಬೆಳೆಗಳು ಸೇರಿದಂತೆ ವೈವಿಧ್ಯಮಯ ಅಗ್ರೋಫಾರೆಸ್ಟ್ರಿ ಮಾದರಿಗಳನ್ನು ಉತ್ತೇಜಿಸಬೇಕು ಎಂದು ತಂಡ ಸಲಹೆ ನೀಡಿದೆ. ಉಳಿದಿರುವ ನೈಸರ್ಗಿಕ ಅರಣ್ಯಗಳನ್ನು ರಕ್ಷಿಸುವುದರ ಜೊತೆಗೆ ವಾಣಿಜ್ಯ ಏಕಬೆಳೆ ತೋಟಗಳ ಮತ್ತಷ್ಟು ವಿಸ್ತರಣೆಯನ್ನು ನಿಯಂತ್ರಿಸುವ ಅಗತ್ಯವನ್ನೂ ಒತ್ತಿಹೇಳಲಾಗಿದೆ.

ಹೆಬ್ಬೇವು ಪರ್ಯಾಯ ಬೆಳೆ? : ಸಭೆಯಲ್ಲಿ ಹೆಬ್ಬೇವು (Melia dubia) ಅನ್ನು ರಬ್ಬರ್‌ಗೆ ಪರ್ಯಾಯ ತೋಟಗಾರಿಕಾ ಮಾದರಿಯಾಗಿ ಪರಿಚಯಿಸಲಾಗಿದೆ. ಪರಿಸರ, ಆರ್ಥಿಕತೆ ಮತ್ತು ಗ್ರಾಮೀಣ ಜೀವನೋಪಾಯದ ದೃಷ್ಟಿಯಿಂದ ಹೆಬ್ಬೇವಿಗೆ ಇರುವ ಸಾಧ್ಯತೆಗಳನ್ನು ತಜ್ಞರು ವಿವರಿಸಿದ್ದು, ಆಯ್ದಕೆಲವು ಜಮೀನುಗಳಲ್ಲಿ ಪ್ರಾತ್ಯಕ್ಷಿಕೆ ಆಧಾರದಲ್ಲಿ ಈ ಬೆಳೆ ಪರಿಚಯಿಸಲು ತ್ರಿಪುರಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ  ಆಸಕ್ತಿ ವಹಿಸಿದರು.

ರೈತನ ಆದಾಯ ಮಾತ್ರ ನೋಡಿದರೆ ಸಾಲದು : ದೆಹಲಿ ವಿಶ್ವವಿದ್ಯಾಲಯದ ಪ್ರೊ. ಸೌದಾಮಿನಿ ದಾಸ್‌ ಅವರು ರಬ್ಬರ್‌, ಮಾವು, ಅಡಿಕೆ ಮತ್ತು ಬಿದಿರು ಬೆಳೆಗಳ ಆರ್ಥಿಕ ವಿಶ್ಲೇಷಣೆ ತಿಳಿಸಿದರು. ಒಂದು ಬೆಳೆ ರೈತನಿಗೆ ಲಾಭದಾಯಕವಾಗಿ ಕಾಣಿಸಿದರೂ, ಮಣ್ಣು, ನೀರು, ಜೀವವೈವಿಧ್ಯ ಮತ್ತು ಪರಿಸರ  ಮೇಲಿನ ಸಾಮಾಜಿಕ ವೆಚ್ಚಗಳನ್ನು ಸೇರಿಸಿದಾಗ ಅದರ ಒಟ್ಟಾರೆ ಆರ್ಥಿಕ ಫಲಿತಾಂಶ ಬದಲಾಗಬಹುದು ಎಂಬುದನ್ನು ಅವರು ವಿವರಿಸಿದರು.

ರಬ್ಬರ್‌ ವಿಸ್ತರಣೆಗೆ ಮಿತಿ? : ರಬ್ಬರ್‌ ಅಧ್ಯಯನ ತಂಡವದ ನಿಲುವು ಸ್ಪಷ್ಟವಾಗಿದ್ದು,  ಉಳಿದ ನೈಸರ್ಗಿಕ ಅರಣ್ಯಗಳನ್ನು ರಕ್ಷಿಸುವುದು ಮತ್ತು ಹೊಸ ವಾಣಿಜ್ಯ ರಬ್ಬರ್‌ ಏಕಬೆಳೆ ವಿಸ್ತರಣೆಯನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದು ತಿಳಿಸಿದೆ. ಕೃಷಿ ಭೂಮಿಯಲ್ಲಿ ವೈವಿಧ್ಯಮಯ ಬಹುಬೆಳೆ ಪದ್ಧತಿಗೆ ಉತ್ತೇಜನ, ರೈತರಿಗೆ ವಿಸ್ತರಣಾ ಸೇವೆ ಮತ್ತು ತಂತ್ರಜ್ಞಾನ ವರ್ಗಾವಣೆ ಹಾಗೂ ಜೀವವೈವಿಧ್ಯ ಸಂರಕ್ಷಣೆ ಮತ್ತು ಭೂಬಳಕೆ ಯೋಜನೆಗಳ ನಡುವೆ ಸಮನ್ವಯಕ್ಕೆ ತಂಡ ಒತ್ತು ನೀಡಿದೆ.

The Rural Mirror ವಿಶ್ಲೇಷಣೆ:

ತ್ರಿಪುರಾ ಅಂತಲ್ಲ ಎಲ್ಲೇ ಆದರೂ ಏಕ ಬೆಳೆ ಯಾವಾಗಲೂ ಅಪಾಯಕಾರಿಯಾಗಿದೆ. ಕೃಷಿ ಬೆಳೆವಣಿಗೆಗೂ, ಮಣ್ಣು ಹಾಗೂ ಪರಿಸರದ ಮೇಲೂ ಪರಿಣಾಮ ಬೀರುತ್ತದೆ. ಕೆಲವು ವರ್ಷಗಳ ಬಳಿಕ ಮಣ್ಣಿನ ಫಲವತ್ತತೆ ಕುಸಿತ, ವಿವಿಧ ರೋಗಗಳು, ನಿಯಂತ್ರಣಕ್ಕೆ ಬಾರದ ರೋಗಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಹೀಗಾಗಿ ಮಿಶ್ರ ಕೃಷಿಯೇ ಹೆಚ್ಚು ಸೂಕ್ತವಾದ ಆಯ್ಕೆಯಾಗಿದೆ. ರಾಜ್ಯದಲ್ಲೂ ಇಂದು ಅಡಿಕೆ ಬೆಳೆ ವಿಸ್ತರಣೆ ಕೂಡಾ ಮುಂದಿನ ದಿನಗಳಲ್ಲಿ  ಪರಿಣಾಮ ಬೀರಬಹುದು. ಹೀಗಾಗಿ ಅಡಿಕೆಯ ಜೊತೆಗೆ ಮಿಶ್ರ ಬೆಳೆಯೂ ಅಗತ್ಯವಿದೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror