#SwachchBharath | ಪುಟ್ಟ ಹಳ್ಳಿಯಲ್ಲಿ ಮುಂದುವರಿದ ಸ್ವಚ್ಛತೆಯ ಅಭಿಯಾನ | ಶಾಲಾ ಮಕ್ಕಳಿಗೂ ಸ್ವಚ್ಛತೆಯ ಜಾಗೃತಿ |

July 28, 2023
10:30 PM
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಆರಂಭಗೊಂಡ ಸ್ವಚ್ಛತಾ ಅಭಿಯಾನದ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳಲ್ಲೂ ಜಾಗೃತಿಯನ್ನು ಮೂಡಿಸುವ ಕೆಲಸ ನಡೆಸಲಾಗುತ್ತಿದೆ.

ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್‌ ಮುಕ್ತ ಗ್ರಾಮ ಈ ಕನಸುಗಳೊಂದಿಗೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಆರಂಭಗೊಂಡ ಟಾಸ್ಕ್‌ ಫೋರ್ಸ್‌ ಕೆಲಸ ಮುಂದುವರಿದಿದೆ. ಕಳೆದ 5 ವಾರಗಳಿಂದ ಪ್ರತೀ ವಾರ ಜಾಗೃತಿ ಅಭಿಯಾನ ನಡೆಸುತ್ತಿತ್ತು. ಇದೀಗ ಈ ಅಭಿಯಾನದ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳಲ್ಲೂ ಜಾಗೃತಿಯನ್ನು ಮೂಡಿಸುವ ಕೆಲಸ ನಡೆಸಲಾಗಿದೆ.

ಸ್ವಚ್ಛತೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿರುವುದು

ಗುತ್ತಿಗಾರಿನ ಸಂಜೀವಿನ ಮಹಿಳಾ ಒಕ್ಕೂಟ, ವರ್ತಕ ಸಂಘ ಗುತ್ತಿಗಾರು ಮತ್ತು ಗುತ್ತಿಗಾರು ಗ್ರಾಮ ಪಂಚಾಯತ್‌  ಹಾಗೂ ಇತರ ಎಲ್ಲಾ ಸಂಘಸಂಸ್ಥೆಗಳ ಮೂಲಕ ರಚನೆಗೊಂಡ ಟಾಸ್ಕ್‌ ಫೋರ್ಸ್‌ ಕಳೆದ 5 ವಾರಗಳಿಂದ ಗುತ್ತಿಗಾರು ಪೇಟೆಯಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸುತ್ತಿತ್ತು. ಪ್ರತೀ ಗುರುವಾರ ಟಾಸ್ಕ್‌ ಫೋರ್ಸ್‌ ತಂಡ ಸದಸ್ಯರು ಗುತ್ತಿಗಾರು ಪೇಟೆಯಲ್ಲಿ ತೆರಳಿ ಅಂಗಡಿಗಳ ಮಾಲೀಕರಿಗೆ ಸ್ವಚ್ಛತಾ ಜಾಗೃತಿ ಬಗ್ಗೆ ತಿಳಿಸುತ್ತಿದ್ದರು. ಪ್ಲಾಸ್ಟಿಕ್‌ ಮುಕ್ತ ಗ್ರಾಮಕ್ಕಾಗಿ ಕೆಲಸ ಮಾಡುತ್ತಿದ್ದರು. ಇದೀಗ ಶಾಲಾ ಮಕ್ಕಳಲ್ಲೂ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್‌ ಮುಕ್ತ ಗ್ರಾಮದ ಕನಸುಗಳನ್ನು ತೆರೆದಿಡಲಾಗಿದೆ.

ಶಾಲಾ ಮಕ್ಕಳಲ್ಲಿ ಸ್ವಚ್ಛತಾ ಜಾಗೃತಿ

ಸ್ವಚ್ಛ ಗ್ರಾಮ, ಪ್ಲಾಸ್ಟಿಕ್‌ ಮುಕ್ತ ಗ್ರಾಮದ ಕನಸುಗಳ ಸಾಕಾರಕ್ಕೆ ಸಾರ್ವಜನಿಕರ ನೆರವು ಅತೀ ಅಗತ್ಯವಾಗಿ ಬೇಕಿದೆ. ಸ್ವಚ್ಛ ಗುತ್ತಿಗಾರು ಅಭಿಯಾನಕ್ಕೆ ಮಕ್ಕಳು, ಸಾರ್ವಜನಿಕರು ಕೈಜೋಡಿಸಿದರೆ ಮಾತ್ರವೇ ಈ ಅಭಿಯಾನ ಯಶಸ್ಸಾಗಲು ಸಾಧ್ಯವಿದೆ. ಈಗಾಗಲೇ ರಚನೆಯಾಗಿರುವ ಸ್ವಚ್ಛತಾ ಟಾಸ್ಕ್‌ಫೋರ್ಸ್‌ ಈ ನಿಟ್ಟಿನಲ್ಲಿ ಕೆಲಸ ಮುಂದುವರಿಸಿದೆ.

#NoPlastic | ಪ್ಲಾಸ್ಟಿಕ್‌ ಬ್ಯಾಗ್‌ ಬಿಡಿ, ಬಟ್ಟೆ ಚೀಲ ಹಿಡಿಯಿರಿ…. | ಮಹಿಳೆಯರು ಆರಂಭಿಸಿದ ಬಟ್ಟೆ ಚೀಲ ಗೃಹೋದ್ಯಮ |

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಿಐ ಮಾನ್ಯತೆಯ ‘ಗುಲ್ಬರ್ಗಾ ತೊಗರಿ ಬೇಳೆ’ಗೆ ಮಾಲ್ಡೀವ್ಸ್‌ ಮಾರುಕಟ್ಟೆ – ರಫ್ತಿಗೆ ಕೇಂದ್ರದ ಅನುಮತಿ
September 26, 2026
9:40 AM
by: ದ ರೂರಲ್ ಮಿರರ್.ಕಾಂ
ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ
September 26, 2026
9:36 AM
by: ಮಹೇಶ್ ಪುಚ್ಚಪ್ಪಾಡಿ
ಹಾಲಿನ ದರ ಕನಿಷ್ಠ ₹10 ಹೆಚ್ಚಳಕ್ಕೆ ಕೆಎಂಎಫ್‌ ಮನವಿ – ಹೈನುಗಾರರಿಗೆ ಏನು ಪ್ರಯೋಜನ..? ಗ್ರಾಹಕರಿಗೆ ಎಷ್ಟು ಹೊರೆ..?
September 26, 2026
7:18 AM
by: ದ ರೂರಲ್ ಮಿರರ್.ಕಾಂ
ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು
September 25, 2026
7:14 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror