ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿವೆ. ಕಾರಣ ಸದ್ಯದಲ್ಲೇ ಬಹುನಿರೀಕ್ಷಿತ ರಾಮ ಮಂದಿರದ ಉದ್ಘಾಟನೆಗೆ ಅಯೋಧ್ಯೆ ಸಾಕ್ಷಿಯಾಗಲಿದೆ.
2024ರ ಜನವರಿಯಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಲಿದೆ. ಸದ್ಯ ರಾಮಪಥದ ನಿರ್ಮಾಣ ಕೂಡ ಪ್ರಗತಿಯಲ್ಲಿದೆ. ರಾಮಪಥ 30 ಮೀಟರ್ ಅಗಲವಿದ್ದರೆ, ಭಕ್ತಿ ಪಥವನ್ನು 13 ಮೀಟರ್ ಅಗಲವಾಗಿ ನಿರ್ಮಾಣ ಮಾಡಲಾಗುವುದು. ರಾಮಜಾನಕಿ ಪಥ ಹಾಗೂ ಭಕ್ತಿ ಪಥ ನಿರ್ಮಾಣದ ಬಗ್ಗೆ ಕೂಡ ಯೋಜನೆ ರೂಪಿಸುತ್ತಿರುವುದಾಗಿ ಯುಪಿ ಸರ್ಕಾರ ಹೇಳಿದೆ.
ರಾಮ ಮಂದಿರಕ್ಕೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳ ಪ್ರಗತಿಯನ್ನು ಖುದ್ದು ಸಿಎಂ ಯೋಗಿ ಆದಿತ್ಯನಾಥ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆಯ ಭವ್ಯ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಸಿಎಂ ಯೋಗಿ, ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel