Advertisement
ಕಾರ್ಯಕ್ರಮಗಳು

ಬದನಾಜೆ ಶಂಕರ್ ಭಟ್ | ಅಡಿಕೆ ಮೌಲ್ಯವರ್ಧನೆಯ ನೆಲ ವಿಜ್ಞಾನಿ | ಆ.18 ಕ್ಕೆ ನರೇಂದ್ರ ರೈ ದೇರ್ಲ ಅವರ ಪುಸ್ತಕ ಬಿಡುಗಡೆ |

Share

ಅಡಿಕೆಯ ಮೌಲ್ಯವರ್ಧನೆಯ ಬಗ್ಗೆ ಅಧ್ಯಯನ ಮಾಡಿ, ಸ್ವತ: ಪ್ರಯೋಗ ಮಾಡಿರುವ ಬದನಾಜೆಯ ಶಂಕರ ಭಟ್‌ ಅವರ ಜೀವನ ಚರಿತ್ರೆ ‘ಬದನಾಜೆ ಶಂಕರ್ ಭಟ್- ಅಡಿಕೆ ಮೌಲ್ಯವರ್ಧನೆಯ ನೆಲ ವಿಜ್ಞಾನಿ’ ಎಂಬ ನರೇಂದ್ರ ರೈ ದೇರ್ಲಅವರ ಪುಸ್ತಕವು ಆ. 18 ರಂದು ವಿಟ್ಲದ ಮಂಗಳಮಂಟಪದಲ್ಲಿ ಬೆಳಿಗ್ಗೆ 10.30 ಕ್ಕೆ ಬಿಡುಗಡೆಯಾಗಲಿದೆ.

ಜೀವನಪೂರ್ತಿ ಅಡಿಕೆಯ ಬಗ್ಗೆಯೇ ಅಧ್ಯಯನ, ಸಂಶೋಧನೆ ನಡೆಸಿರುವ ಬದನಾಜೆ ಶಂಕರ್ ಭಟ್ಅವರು ಮೂಲ ಆಯುರ್ವೇದ ಪರಂಪರೆಯ ಅಡಿಕೆಯ ಅನೇಕ ಉಪ ಉತ್ಪನ್ನಗಳನ್ನು ಸಂಶೋಧಿಸಿದವರು.

ಅಂಟು, ಸಾಬೂನು, ವೈನ್, ಲಘು ಪಾನೀಯ, ಚೊಗರಿನ ಸಾರ, ವಾರ್ನಿಸ್.. ಹೀಗೆ ತಿಂದು ಉಗುಳುವ ಅಡಿಕೆಯ ಬಹುರೂಪಿ ಬೆಳವಣಿಗೆಗೆ ಬುನಾದಿ ಹಾಕಿದವರು. ಈ ದೇಶದ ಕೃಷಿ ವಿಶ್ವವಿದ್ಯಾನಿಲಯ, ಸಂಶೋಧಕರು, ವಿಜ್ಞಾನಿಗಳು, ಕೃಷಿ ತಜ್ಞರು ಬೆರಗಾಗುವಷ್ಟು ಅಡಿಕೆಯ ಒಳಸುಳಿಗಳನ್ನು ತೆರೆದಿಟ್ಟವರು. ಇಷ್ಟೇ ಅಲ್ಲ ,ಅಡಿಕೆಯ ಮಾರಕ ಮಹಾಳಿ, ಹಳದಿಎಲೆ, ಬೇರುಹುಳಗಳಿಗೂ ಔಷಧಿ ಕಂಡು ಹಿಡಿಯಲು ಪ್ರಯತ್ನಿಸಿದವರು. ತಮ್ಮ ಮನೆಯನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಇಷ್ಟೆಲ್ಲಾ ಸಂಶೋಧನೆ ಮಾಡಿದ ಜನವಿಜ್ಞಾನಿ 81ರ ಹರೆಯದ ಶಂಕರ ಭಟ್ಟರ ಬಗ್ಗೆ ನರೇಂದ್ರ ರೈ ದೇರ್ಲ ಅವರು ತಮ್ಮ ‘ಕರ್ನಾಟಕ ಕೃಷಿ ಕಥನ ಮಾಲಿಕೆ’ಯ ಆರನೆಯ ಪುಸ್ತಕವನ್ನಾಗಿ ರಚಿಸಿದ್ದಾರೆ.

ಪುಸ್ತಕ ಬಿಡುಗಡೆಯು ವಿಟ್ಲದ ಮಂಗಳ ಮಂಟಪದಲ್ಲಿ ನಡೆಯಲಿದ್ದು ‘ಅಡಿಕೆ ಪತ್ರಿಕೆ’ಯ ಸಂಪಾದಕರಾದ ಶ್ರೀ ಪಡ್ರೆಯವರು ಬಿಡುಗಡೆ ಮಾಡಲಿದ್ದಾರೆ. ‘ಚೌಟರ ತೋಟ’ದ ಖ್ಯಾತಿಯ ಡಾ. ಚಂದ್ರಶೇಖರ್ ಚೌಟರು ಅಧ್ಯಕ್ಷತೆ ವಹಿಸಲಿದ್ದಾರೆ. ‘ಐಟಿಯಿಂದ ಮೇಟಿ’ ಖ್ಯಾತಿಯ ವಸಂತ ಕಜೆ ಅವರು ಪುಸ್ತಕ ಪರಿಚಯಿಸಲಿದ್ದಾರೆ. ವಿಜ್ಞಾನಿ ಡಾ. ಸರ್ಪಂಗಳ ಕೇಶವ ಭಟ್ ಮತ್ತು ಡಾ ಎಂ ಎಸ್ ಭಟ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜಾನುವಾರುಗಳ ಮೇವಿಗಾಗಿ ₹25 ಕೋಟಿ ಬಿಡುಗಡೆ

ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…

4 hours ago

ಬೆಂಗಳೂರಿನ ಐಐಎಂನಲ್ಲಿ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’ ಅಧ್ಯಯನ ವರದಿ ಬಿಡುಗಡೆ

ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…

4 hours ago

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ

ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…

12 hours ago

ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ

ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…

12 hours ago

ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?

ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…

23 hours ago

ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ

ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…

1 day ago