Advertisement
ಪ್ರಮುಖ

ಸಣ್ಣ ರೈತರಿಗೆ ಇಲ್ಲಿ ‘ಎಟಿಎಂ’ ಈ ಹಸು ! ಹಾಲಿನಲ್ಲಿ 8.4% ಕೊಬ್ಬು , ತುಪ್ಪದ ರೇಟು ಭರ್ಜರಿ..!

Share

ಉತ್ತರಾಖಂಡದ ಸ್ಥಳೀಯ ಬದ್ರಿ ಹಸು ಇಂದು ರೈತರ ಪಾಲಿಗೆ ಹೊಸ ಆದಾಯದ ಮೂಲವಾಗಿ ಪರಿಣಮಿಸಿದೆ. ಕಡಿಮೆ ಹಾಲು ಕೊಟ್ಟರೂ, ಈ ಹಸುವಿನ ತುಪ್ಪ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ ₹3500 ವರೆಗೆ ಮಾರಾಟವಾಗುತ್ತದೆ. ಇದರಿಂದಾಗಿ ಇದನ್ನು “ಸಣ್ಣ ರೈತರಿಗೆ ಎಟಿಎಂ” ಎಂದೇ ಕರೆದುಕೊಳ್ಳಲಾಗುತ್ತಿದೆ.

Advertisement
Advertisement

ಹಸು ಸಾಕಣೆ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ : ಇಂದು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಹಸು ಸಾಕಣೆ ಪದ್ಧತಿ ಹೆಚ್ಚಾಗುತ್ತಿದೆ. ಸರ್ಕಾರವೂ ಹಸು ಮತ್ತು ಎಮ್ಮೆ ಖರೀದಿಗೆ ಸಬ್ಸಿಡಿ ನೀಡುವ ಮೂಲಕ ಹೈನುಗಾರಿಕೆಯನ್ನು ಉತ್ತೇಜಿಸುತ್ತಿದೆ. ಆದರೆ “ಹಸುವಿನ ಹಾಲಿನಿಂದ ತುಪ್ಪ ಹೆಚ್ಚು ಸಿಗುವುದಿಲ್ಲ” ಎಂಬ ಕಾರಣಕ್ಕೆ ಅನೇಕ ರೈತರು ಹಸು ಸಾಕಣೆಗೆ ಹಿಂಜರಿಯುತ್ತಾರೆ. ಆದರೆ ಬದ್ರಿ ಹಸು ಈ ಕಲ್ಪನೆಯನ್ನು ಬದಲಾಯಿಸಿದೆ.

ಬದ್ರಿ ಹಸು ಉತ್ತರಾಖಂಡದ ಪರ್ವತ ಪ್ರದೇಶದ ಸ್ಥಳೀಯ ತಳಿಯಾಗಿದೆ. ಇದು ಸಾಮಾನ್ಯ ಹಸುಗಳಂತೆ ಹೆಚ್ಚಿನ ಹಾಲು ಕೊಡದೇ ಇದ್ದರೂ, ಅದರ ಹಾಲಿನ ಗುಣಮಟ್ಟ ಅತ್ಯುತ್ತಮವಾಗಿದೆ. ದಿನಕ್ಕೆ ಹಾಲು ಉತ್ಪಾದನೆ: 3–4 ಲೀಟರ್ ಮಾತ್ರ ಹಾಲು ಲಭಿಸುತ್ತದೆ. ಆದರೆ ತುಪ್ಪದ ಬೆಲೆ ಲೀಟರಿಗೆ 3,500 ರೂಪಾಯಿಗೆ ಮಾರಾಟವಾಗುತ್ತದೆ. ಇದರ ತುಪ್ಪ ಸಾಮಾನ್ಯ ಹಸುವಿನ ತುಪ್ಪಕ್ಕಿಂತ ಸುಮಾರು ಐದು ಪಟ್ಟು ಹೆಚ್ಚು ದುಬಾರಿ.

ಬದ್ರಿ ಹಸುವಿನ ಹಾಲಿನ ಪ್ರಮುಖ ವಿಶೇಷತೆ ಅದರ ಹೆಚ್ಚಿನ ಕೊಬ್ಬು ಪ್ರಮಾಣ.  ಸಂಶೋಧನೆ ಪ್ರಕಾರ ಇದರಲ್ಲಿ ಕೊಬ್ಬು: 8.4%, ಒಟ್ಟು ಘನವಸ್ತುಗಳು: 9.02% ,ಕಚ್ಚಾ ಪ್ರೋಟೀನ್: 3.26% ಇದು ಇತರ ಹಸು ಮತ್ತು ಎಮ್ಮೆ ಹಾಲಿಗಿಂತಲೂ ಹೆಚ್ಚು.

ಬದ್ರಿ ಹಸುವಿನ ಹಾಲಿನಲ್ಲಿ  A2 ಪ್ರೋಟೀನ್,  ಹಲವು ಪೋಷಕಾಂಶಗಳು, ಶುದ್ಧತೆ ಮತ್ತು ಆರೋಗ್ಯಕರ ಗುಣ ಹೊಂದಿದೆ. ಇದರಿಂದಾಗಿ ಇದರ ಹಾಲಿನಿಂದ ತಯಾರಾದ ತುಪ್ಪ, ಬೆಣ್ಣೆ, ಮಜ್ಜಿಗೆ ಎಲ್ಲವೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ. ಈ ಹಸು ಹಿಮಾಲಯದ ನೈಸರ್ಗಿಕ ಹುಲ್ಲುಗಾವಲುಗಳಲ್ಲಿ ಮೇಯುತ್ತದೆ. ಅಲ್ಲಿನ ಪೋಷಕಾಂಶ ತುಂಬಿದ ಹುಲ್ಲು ಹಸುವಿನ ಹಾಲನ್ನು ಇನ್ನಷ್ಟು ಶುದ್ಧ ಮತ್ತು ಪೌಷ್ಟಿಕವಾಗಿಸುತ್ತದೆ ಎಂಬ ನಂಬಿಕೆ ಇದೆ. ಸ್ಥಳೀಯ ದೇವತೆಗಳಿಗೆ ಕೂಡ ಈ ಹಾಲನ್ನು ಅರ್ಪಿಸುವ ಸಂಪ್ರದಾಯವಿದೆ.

ಹೈನುಗಾರಿಕೆಯ ವಾಣಿಜ್ಯೀಕರಣದಿಂದ ಹೆಚ್ಚಿನ ಹಾಲು ಕೊಡುವ ತಳಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಬದ್ರಿ ಹಸುವಿನ ಸಂಖ್ಯೆಗಳು ಕೆಲವು ನೂರಕ್ಕೆ ಇಳಿದಿವೆ. ಆದರೆ ಈಗ, ಆನ್‌ಲೈನ್ ಕಂಪನಿಗಳು ತುಪ್ಪ ಮಾರಾಟದ ಮೂಲಕ ಸಂರಕ್ಷಣೆ, ಉತ್ತರಾಖಂಡ ಡೈರಿ ಇಲಾಖೆ, UKCDP ಸಂಸ್ಥೆ ಇವುಗಳು ಬದ್ರಿ ಹಸು ಸಂರಕ್ಷಣೆಯಲ್ಲಿ ತೊಡಗಿಕೊಂಡಿವೆ. ಕಡಿಮೆ ಹಾಲು ಕೊಟ್ಟರೂ, ಪ್ರೀಮಿಯಂ ತುಪ್ಪ ಉತ್ಪಾದನೆ ಮೂಲಕ ಬದ್ರಿ ಹಸು ಸಣ್ಣ ರೈತರಿಗೆ ಹೆಚ್ಚು ಲಾಭ ನೀಡುವ ತಳಿ ಆಗಿದೆ.  ಹೀಗಾಗಿ ಬದ್ರಿ ಹಸು ಸಾಕಣೆ, ಕಡಿಮೆ ವೆಚ್ಚದಲ್ಲಿ ಉತ್ತಮ ಆದಾಯ ನೀಡುವ ಡೈರಿ ಮಾದರಿಯಾಗುತ್ತಿದೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಮನೆಯಲ್ಲೇ ಮಾಡಿ ‘ಪೇಪರ್ ಅವಲಕ್ಕಿ ಚೂಡಾ’

ಪೇಪರ್ ಅವಲಕ್ಕಿ ಚೂಡಾಕ್ಕೆ ಬೇಕಾಗುವ ಸಾಮಗ್ರಿಗಳು : ಪೇಪರ್ ಅವಲಕ್ಕಿ – ಅಗತ್ಯ…

3 hours ago

ಅಸ್ಸಾಂ ಗಡಿಯಲ್ಲೇ ಅಡಿಕೆ ಹಬ್…! 30,000 ಹೆಕ್ಟೇರ್ ಅಡಿಕೆ ಕೃಷಿಗೆ ಬಲ – ಮಿಜೋರಾಂ ಸಿಎಂ ಉದ್ಘಾಟಿಸಿದ ಹೊಸ ಘಟಕ

ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮಾ ಅವರು ಶುಕ್ರವಾರ ಅಸ್ಸಾಂ ಗಡಿಯ ಬಳಿಯ ಮಿಜೋರಾಂನ ಕೊಲಾಸಿಬ್…

3 hours ago

ಗ್ರಾಮೀಣ ಜನರು ಸ್ವಾವಲಂಬಿಗಳಾಗಬೇಕು: ಸಿದ್ದರಾಮಯ್ಯ ಕರೆ

ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಳ್ಳಿಗಳ ಜನರು ಸ್ವಾವಲಂಬಿಗಳಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ…

10 hours ago

ಆಯುಷ್ಮಾನ್ ಚಿಕಿತ್ಸೆ ನಿರಾಕರಿಸುವಂತಿಲ್ಲ‌ | ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಿಗೆ ಡಿಹೆಚ್ಒ ಖಡಕ್ ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿಯಾದ ಯಾವುದೇ ಆಸ್ಪತ್ರೆಗಳು ರೋಗಿಗಳಿಗೆ…

19 hours ago

ಕೇಂದ್ರ ಬಜೆಟ್‌ಗೆ ಕ್ಷಣಗಣನೆ | ರಾಜ್ಯದಲ್ಲಿ ಬಜೆಟ್ ನಿರೀಕ್ಷೆ ಹೆಚ್ಚಳ; MSME ಕ್ಷೇತ್ರಕ್ಕೆ ಬೆಂಬಲ ಬೇಕು

ಇದೇ ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಕೇಂದ್ರ…

19 hours ago

ಯುರೋಪ್ ಮಾರುಕಟ್ಟೆಗೆ ಭಾರತದಿಂದ ತೆರಿಗೆ ಮುಕ್ತ ರಫ್ತು ಅವಕಾಶ

ಮುಕ್ತ ವ್ಯಾಪಾರ ಒಪ್ಪಂದ (Free Trade Agreement) ಜಾರಿಗೆ ಬಂದ ನಂತರ ಭಾರತದಿಂದ…

19 hours ago