ಕಿಸಾನ್‌ ಸಂಘದಿಂದ ಬಲರಾಮ ಜಯಂತಿ | ಕೃಷಿಯಲ್ಲಿ ಆದಾಯ ಹೆಚ್ಚಿಸುವತ್ತ ಚಿಂತನೆ ಅಗತ್ಯ |

September 15, 2024
4:11 PM

ಭಾರತೀಯ ಕಿಸಾನ್‌ ಸಂಘದ ವತಿಯಿಂದ ನಿಂತಿಕಲ್ಲಿನ ಎಣ್ಮೂರಿನ ಕಟ್ಟ ಚಂದ್ರಬಾಗಿ ಕಾಂತಪ್ಪ ಶೆಟ್ಟಿ ಸಭಾಭವನದಲ್ಲಿ ಬಲರಾಮ ಜಯಂತಿ ಆಚರಣೆ ನಡೆಯಿತು.

ಕಾರ್ಯಕ್ರಮದ ಅತಿಥಿಯಾಗಿದ್ದ ಯುವ ಕೃಷಿಕ ಪ್ರಮೋದ್‌ ಡ್ರಾಗನ್‌ ಫ್ರುಟ್‌ ಕೃಷಿಯ ಬಗ್ಗೆ ಮಾತನಾಡಿ, ಕೃಷಿಕರು ಅಡಿಕೆ ಮಾತ್ರವಲ್ಲ ಪರ್ಯಾಯ ಕೃಷಿಯಿಂದಲೂ ಆದಾಯ ಗಳಿಸುವ ಕಡೆಗೆ ಗಮನಹರಿಸಬೇಕಿದೆ. ನಗರದ ಉದ್ಯೋಗ ಬಿಟ್ಟು ಕೃಷಿಯನ್ನೇ ಉದ್ಯೋಗ ಮಾಡುವ ವೇಳೆ ಆರ್ಥಿಕವಾಗಿಯೂ ಯಾವುದು ಹೆಚ್ಚು ಅನುಕೂಲ ಎಂದು ಅಧ್ಯಯನ ನಡೆಸಿದ  ಬಳಿಕ ಡ್ರಾಗನ್‌ ಫ್ರುಟ್‌ ಮಾಡಿದ್ದೇನೆ. ಭವಿಷ್ಯದಲ್ಲಿ ಅಡಿಕೆಯ ಜೊತೆಗೆ ಪರ್ಯಾಯವಾಗಿ ಇನ್ನೊಂದು ಕೃಷಿಯೂ ಅಗತ್ಯ ಇದೆ ಎಂದು ಯುಗ ಕೃಷಿಕ ಪ್ರಮೋದ್‌ ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಭಾರತೀಯ ಕಿಸಾನ್‌ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಎನ್‌ ಜಿ ಪ್ರಭಾಕರ ರೈ ಮಾತನಾಡಿ, ಕೃಷಿಕರು ತಮ್ಮ ಸಮಸ್ಯೆಗಳಿಗೆ ಒಂದಾಗಿ ಕೆಲಸ ಮಾಡಬೇಕಿದೆ. ಈಗಾಗಲೇ ಹಲವಾರು ರೈತಪರವಾದ ಕೆಲಸವನ್ನು ಭಾಕಿಸಂ ಮಾಡಿದೆ ಎಂದು ಹೇಳಿದರು.

ಈ ಸಂದರ್ಭ ದೇಶೀ ಗೋತಳಿ ಸಾಕಾಣೆ ಹಾಗೂ ಗವ್ಯ ಉತ್ಪನ್ನ ತಯಾರಕರಾದ ಮಹಾಲಿಂಗೇಶ್ವರ ಭಟ್‌ ಜೋಗಿಯಡ್ಕ ಹಾಗೂ ಕೃಷಿಕರಾದ ನಾಗವೇಣಿ ರೈ ಎಣ್ಮೂರುಗುತ್ತು ಇವರನ್ನು ಸನ್ಮಾನಿಸಲಾಯಿತು.

ಗೋಪಾಲಕೃಷ್ಣ ಭಟ್‌ ನೆಟ್ಟಾರು ಪ್ರಸ್ತಾವನೆಗೈದರು. ಭಾಕಿಸಂ ಕಾರ್ಯದರ್ಶಿ ಸಾಯಿಶೇಖರ ಕರಿಕಳ ಕಾರ್ಯಕ್ರಮ ನಿರೂಪಿಸಿದರು. ರಮೇಶ್‌ ಕೋಟೆ ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror