ಭಾರತೀಯ ಕಿಸಾನ್ ಸಂಘದ ವತಿಯಿಂದ ನಿಂತಿಕಲ್ಲಿನ ಎಣ್ಮೂರಿನ ಕಟ್ಟ ಚಂದ್ರಬಾಗಿ ಕಾಂತಪ್ಪ ಶೆಟ್ಟಿ ಸಭಾಭವನದಲ್ಲಿ ಬಲರಾಮ ಜಯಂತಿ ಆಚರಣೆ ನಡೆಯಿತು.
ಕಾರ್ಯಕ್ರಮದ ಅತಿಥಿಯಾಗಿದ್ದ ಯುವ ಕೃಷಿಕ ಪ್ರಮೋದ್ ಡ್ರಾಗನ್ ಫ್ರುಟ್ ಕೃಷಿಯ ಬಗ್ಗೆ ಮಾತನಾಡಿ, ಕೃಷಿಕರು ಅಡಿಕೆ ಮಾತ್ರವಲ್ಲ ಪರ್ಯಾಯ ಕೃಷಿಯಿಂದಲೂ ಆದಾಯ ಗಳಿಸುವ ಕಡೆಗೆ ಗಮನಹರಿಸಬೇಕಿದೆ. ನಗರದ ಉದ್ಯೋಗ ಬಿಟ್ಟು ಕೃಷಿಯನ್ನೇ ಉದ್ಯೋಗ ಮಾಡುವ ವೇಳೆ ಆರ್ಥಿಕವಾಗಿಯೂ ಯಾವುದು ಹೆಚ್ಚು ಅನುಕೂಲ ಎಂದು ಅಧ್ಯಯನ ನಡೆಸಿದ ಬಳಿಕ ಡ್ರಾಗನ್ ಫ್ರುಟ್ ಮಾಡಿದ್ದೇನೆ. ಭವಿಷ್ಯದಲ್ಲಿ ಅಡಿಕೆಯ ಜೊತೆಗೆ ಪರ್ಯಾಯವಾಗಿ ಇನ್ನೊಂದು ಕೃಷಿಯೂ ಅಗತ್ಯ ಇದೆ ಎಂದು ಯುಗ ಕೃಷಿಕ ಪ್ರಮೋದ್ ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಎನ್ ಜಿ ಪ್ರಭಾಕರ ರೈ ಮಾತನಾಡಿ, ಕೃಷಿಕರು ತಮ್ಮ ಸಮಸ್ಯೆಗಳಿಗೆ ಒಂದಾಗಿ ಕೆಲಸ ಮಾಡಬೇಕಿದೆ. ಈಗಾಗಲೇ ಹಲವಾರು ರೈತಪರವಾದ ಕೆಲಸವನ್ನು ಭಾಕಿಸಂ ಮಾಡಿದೆ ಎಂದು ಹೇಳಿದರು.
ಈ ಸಂದರ್ಭ ದೇಶೀ ಗೋತಳಿ ಸಾಕಾಣೆ ಹಾಗೂ ಗವ್ಯ ಉತ್ಪನ್ನ ತಯಾರಕರಾದ ಮಹಾಲಿಂಗೇಶ್ವರ ಭಟ್ ಜೋಗಿಯಡ್ಕ ಹಾಗೂ ಕೃಷಿಕರಾದ ನಾಗವೇಣಿ ರೈ ಎಣ್ಮೂರುಗುತ್ತು ಇವರನ್ನು ಸನ್ಮಾನಿಸಲಾಯಿತು.
ಗೋಪಾಲಕೃಷ್ಣ ಭಟ್ ನೆಟ್ಟಾರು ಪ್ರಸ್ತಾವನೆಗೈದರು. ಭಾಕಿಸಂ ಕಾರ್ಯದರ್ಶಿ ಸಾಯಿಶೇಖರ ಕರಿಕಳ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಕೋಟೆ ವಂದಿಸಿದರು.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಯಗಳನ್ನು ಸಂಪರ್ಕಿಸಿ 9535156490
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳು…
ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆಯಿರುವುದರಿಂದ…
ಉತ್ತರ ಪ್ರದೇಶದ ಆಗ್ರಾ ಬಳಿಯ ಸಿಂಗ್ನಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ದಕ್ಷಿಣ ಏಷ್ಯಾ ಪ್ರಾದೇಶಿಕ…
ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…