ಇತಿಹಾಸ ಪ್ರಸಿದ್ಧ , ಸಂಪೂರ್ಣ ಶಿಲಾಮಯವಾದ ಬಳ್ಪ ಶ್ರೀ ತ್ರಿಶೂಲಿನೀ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವಗಳು ಸೆ. 26ರಿಂದ ಅ. 5ರ ತನಕ ಜರಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪದಲ್ಲಿರುವ ಇತಿಹಾಸ ಪ್ರಸಿದ್ಧ ಬಳ್ಪ ತ್ರಿಶೂಲಿನೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಸಂಪೂರ್ಣ ಶಿಲಾಮಯವಾದ ಈ ದೇವಸ್ಥಾನ ಜೀರ್ಣೋದ್ಧಾರದ ಬಳಿಕ ಪ್ರತೀ ವರ್ಷ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಸೆ. 26ರಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಹೂವಿನ ಪೂಜೆ, ಹರಿವಾಣ ಪೂಜೆ, ರಾತ್ರಿ ಹೂವಿನ ಪೂಜೆ, ಹರಿವಾಣ ಪೂಜೆ, ರಂಗಪೂಜೆ ನಡೆಯಲಿದೆ. ಸೆ. 29ರಂದು ಕದಿರು ತುಂಬಿಸುವುದು, ನವಾನ್ನ ನಡೆಯಲಿದೆ. ಸೆ. 30ರಂದು ಚಂಡಿಕಾ ಹೋಮ, ಅ. 2ರಂದು ಸಂಜೆ ಶಾರದಾ ಪೂಜೆ ಆರಂಭಗೊಳ್ಳಲಿದೆ. ಅ. 4 ರಂದು ಮಹಾನವಮಿ, ಬೆಳಿಗ್ಗೆ 11 ರಿಂದ ಆಯುಧ ಪೂಜೆ ನಡೆಯಲಿದೆ. ಅ. 5 ವಿಜಯದಶಮಿಯಂದು ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರಿಗೆ ಅಪ್ಪಸೇವೆ, ಶ್ರೀ ನಾಗದೇವರು, ದೈವಗಳಿಗೆ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಹೂವಿನ ಪೂಜೆ, ಸಪ್ತಶತೀ ಪಾರಾಯಣ, ಮಧ್ಯಾಹ್ನ 11 ರಿಂದ ಅಕ್ಷರಾಭ್ಯಾಸ, ಮಹಾಪೂಜೆ, ರಾತ್ರಿ ಸಾಮೂಹಿಕ ರಂಗಪೂಜೆ, ರಕ್ತೇಶ್ವರಿ, ಗುಳಿಗ ದೈವಗಳಿಗೆ ತಂಬಿಲ ನಡೆಯಲಿದೆ.ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…
ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…