ಮಂಗಳೂರಿನಿಂದ ಪುತ್ತೂರಿಗೆ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಳ್ಯದ ತಾಲೂಕಿನ ಬೆಳ್ಳಾರೆಯ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಣ ರಸ್ತೆ ಅವ್ಯವಸ್ಥೆ. ಆ ರಸ್ತೆಯಲ್ಲೂ ಬಸ್ಸು ಚಾಲಕನ ಅಜಾಗರೂಕತೆಯ ಬಸ್ಸು ಚಾಲನೆ. ಈಗ ಆಸ್ಪತ್ರೆಗೆ ದಾಖಲಾದ ಯುವಕನ ಬದುಕಿನ ಪ್ರಶ್ನೆಗೆ ಯಾರು ಹೊಣೆ ? ಇಲಾಖೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣವೇ ಸ್ಪಂದಿಸಬೇಕಿದೆ.
ಸುಳ್ಯ ತಾಲೂಕಿನ ಬೆಳ್ಳಾರೆಯ ವಿಜಯ ಕುಮಾರ್ ಎಂಬವರು ಸುಳ್ಯದಲ್ಲಿ ಮೊಬೈಲ್ ಅಂಗಡಿ ಇರಿಸಿಕೊಂಡಿದ್ದರು. ಕಾರ್ಯನಿಮಿತ್ತ ಮಂಗಳೂರಿಗೆ ಹೋಗಿ ವಾಪಾಸ್ ಬೆಳ್ಳಾರೆಗೆ ಆಗಮಿಸುತ್ತಿದ್ದರು. ವಾಪಾಸ್ ಬರುವಾಗ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕುಳಿತಿದ್ದರು. ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾಗ ಕಲ್ಲಡ್ಕ ಬಳಿ ರಸ್ತೆ ಅವ್ಯವಸ್ಥೆಯ ನಡುವೆಯೂ ಬಸ್ಸು ಚಾಲಕ ವೇಗವಾಗಿ ಚಲಾಯಿಸುತ್ತಿದ್ದ ಕಾರಣ ಹಾಗೂ ರಸ್ತೆ ಗುಂಡಿಯಿಂದ ಕೂಡಿದ್ದರಿಂದ ಬಸ್ಸು ರಸ್ತೆಯ ಗುಂಡಿಗೆ ಬಿದ್ದಿದೆ. ಈ ಸಮಯದಲ್ಲಿ ಪ್ರಯಾಣಿಕ ವಿಜಯ ಕುಮಾರ್ ಅವರು ಬಸ್ಸಿನಲ್ಲಿ ಎತ್ತಿ ಹಾಕಿದ ಅನುಭವಾಗಿ ದೇಹದಲ್ಲಿ ಸೊಂಟದಿಂದ ಕೆಳಭಾಗದ ಸ್ಪರ್ಶ ಕಳೆದುಕೊಂಡಿದೆ. ತಕ್ಷಣವೇ ವಿಜಯ್ ಅವರು ಬೊಬ್ಬೆ ಹೊಡೆದ ಬಳಿಕ ಬಸ್ಸು ನಿಲ್ಲಿಸಿದ ಚಾಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಇದೀಗ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರಿಗೆ ಸರ್ಜರಿ ನಡೆಸಬೇಕಾಗಿದೆ. ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸರ್ಜರಿ ಬಳಿಕವೂ ಸುಧಾರಣೆ ಬಗ್ಗೆ ಮುಂದೆ ಯೋಚಿಸಬೇಕಾಗಿದೆ.
ಬಿ ಸಿ ರೋಡು-ಕಲ್ಲಡ್ಕ ರಸ್ತೆ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಪ್ರಯಾಣಿಕರು, ಸಾರ್ವಜನಿಕರು ಹೇಳಿದ್ದರೂ ಇದುವರೆಗೂ ಯಾವುದೇ ಇಲಾಖೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಬಸ್ಸು ಚಾಲಕರೂ ಕೂಡಾ ಆ ಹೊಂಡದ ರಸ್ತೆಯಲ್ಲಿ ವೇಗವಾಗಿ ಬಸ್ಸು ಚಾಲನೆ ಮಾಡುತ್ತಾ ಸಾಗುವುದರ ಬಗ್ಗೆಯೂ ಸಾರ್ವಜನಿಕರು ದೂರಿದ್ದಾರೆ. ಆದರೆ ಯಾವ ಅವ್ಯವಸ್ಥೆ ಬಗ್ಗೆಯೂ ಎಲ್ಲಾ ಜನಪ್ರತಿನಿಧಿಗಳು ಮೌನವಹಿಸಿದ್ದರು. ಇದೀಗ ಬೆಳ್ಳಾರೆಯ ವಿಜಯ ಕುಮಾರ್ ಅವರಿಗೆ ಆಗಿರುವ ದೈಹಿಕ ಸಮಸ್ಯೆಗೆ ಯಾರು ಹೊಣೆ ? ಮೊಬೈಲ್ ಅಂಗಡಿ ಹೊಂದಿರುವ ಅವರು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ತಾನು ಮಾಡದ ತಪ್ಪಿಗೆ, ಇಲಾಖೆಯ ಅವ್ಯವಸ್ಥೆಯಿಂದ ಆಗಿರುವ ಈ ದುರಂತದಿಂದ ಅವರ ಮುಂದಿನ ಬದುಕಿನ ಪ್ರಶ್ನೆ ಏನು ? ಇಲಾಖೆಗಳು ಈ ಬಗ್ಗೆ ತಕ್ಷಣವೇ ಸೂಕ್ತ ಕ್ರಮಗೊಳ್ಳಬೇಕು, ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲಾಖೆಗಳ, ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಜನಸಾಮಾನ್ಯರಿಗೆ ಆಗುವ ಇಂತಹ ತೊಂದರೆಗಳಿಗೆ ಇಲಾಖೆಗಳು ಹಾಗೂ ಗುತ್ತಿಗೆದಾರರೇ ಹೊಣೆಯಾಗಬೇಕು ಎಂದು ವಿಜಯ ಮಿತ್ರರು ಹೇಳಿದ್ದಾರೆ.
2025-26 ನೇ ಸಾಲಿನ ಅಗ್ನಿವೀರರ ನೇಮಕಾತಿಗಾಗಿ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು…
ಎ.12 ರಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ರೈಲು ಸಂಚರಿಸಲಿದೆ. ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ…
2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯ ತಾಲೂಕಿನ ಬಾಳಿಲದ ಶ್ರೇಯನ್…
ಬಾಟಲ್‌ಗಳ ಮೂಲಕ ಪೂರೈಕೆಯಾಗುವ ಕುಡಿಯುವ ನೀರು ಕಳಪೆ ಎಂದು ಆಹಾರ ಇಲಾಖೆ ವರದಿ…
ಸಂಜೆ ಅಲ್ಲಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ.ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಂದ್ರಾ…
ಸಂಜೆಯ ಹೊತ್ತು ತೋಟದ ಅಂಚು ಅಥವಾ ಪಕ್ಕದ ಕಾಡಿನಲ್ಲಿ ಸಂಚರಿಸುತ್ತಿದ್ದರೆ ಅಲ್ಲೆಲ್ಲ ಜೇನು…