ತಾಪಮಾನ ಏರಿಕೆಯಾಗುತ್ತಿದೆ. ಸತತವಾಗಿ 40 ಡಿಗ್ರಿಗಿಂತ ಅಧಿಕವಾಗಿದೆ ತಾಪಮಾನ. ಅದೊಂದು ಸಾಮಾನ್ಯ ಉಷ್ಣತೆ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ(Heat Wave) ಸಿದ್ಧರಾಗಬೇಕಿದೆ. ಹಾಗಿದ್ದರೆ ಏನು ಮಾಡಬೇಕು ಮುಂದೆ ಎಂಬ ಯೋಚನೆ ಅಗತ್ಯವಿದೆ. ಜಗಲಿ ಕಟ್ಟೆಯಲ್ಲಿ ಕುಳಿತು ಹೋ.. ಹೋ.. ತಾಪಮಾನ ಎಂದು ತಣ್ಣೀರು ಕುಡಿದರೆ ಸಾಲದು. ಯೋಜನೆಗಳು ಅಗತ್ಯವಿದೆ.
ತಾಪಮಾನದ ಸಂದರ್ಭ ದೇಹವನ್ನು ಕಾಪಾಡುವುದೂ ಅಷ್ಟೇ ಮುಖ್ಯವಾಗಿದೆ. ಯಾವಾಗಲೂ ನಿಧಾನವಾಗಿ ನೀರು ಕುಡಿಯಿರಿ(Drink water). ತಣ್ಣೀರು ಅಥವಾ ಐಸ್ ನೀರನ್ನು ಕುಡಿಯುವುದನ್ನು ತಪ್ಪಿಸಿ. ಪ್ರತಿ ವರ್ಷ ಒಂದು ಡಿಗ್ರಿ ಉಷ್ಣಾಂಶ(Temperature) ಜಾಸ್ತಿ ಆದರೂ, ಇನ್ನೈದು ವರ್ಷಗಳಲ್ಲಿ ತಾಪಮಾನ 50 ಡಿಗ್ರಿ ಮುಟ್ಟುತ್ತದೆ…! . ಬಿರು ಬೇಸಿಗೆ ಬಂತು ಅಂತಾ ನೂರಾ ಇಪ್ಪತ್ತು ಕೋಟಿ ಜನ ಹಿಮಾಚಲ ಪ್ರದೇಶಕ್ಕೋ(Himachal Pradesh), ಊಟಿಗೋ(Ooty) ಹೋಗಕ್ಕೆ ಸಾಧ್ಯವಿಲ್ಲ. ಬಿಸಿಲು ಹೆಚ್ಚಾಯ್ತು ಅಂತ ಜಗಲಿ ಕಟ್ಟೆ ಮೇಲೆ ಕುಳಿತು ಜ್ಯೂಸ್ ಕುಡಿಯುತ್ತಾ ಕುಳಿತರೆ, ಎಳನೀರು ಕುಡಿಯುತ್ತಾ ಕುಳಿತರೆ ಸಾಧ್ಯವೂ ಇಲ್ಲ. ಪ್ರಸ್ತುತ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ ಮತ್ತು ಇತರ ದೇಶಗಳು “ಶಾಖದ ಅಲೆ” ಅನುಭವಿಸುತ್ತಿವೆ.
ಹಾಗಾದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು: – ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ತುಂಬಾ ತಣ್ಣನೆಯ ನೀರನ್ನು ಕುಡಿಯಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ, ಏಕೆಂದರೆ ನಮ್ಮ ಸಣ್ಣ ರಕ್ತನಾಳಗಳು ಸಿಡಿಯಬಹುದು.
ತುಂಬಾ ಬಿಸಿಯಾಗಿ ಮನೆಗೆ ಬಂದರೊಬ್ಬರು ತುಂಬಾ ಬೆವರುತ್ತಿದ್ದರು ಮತ್ತು ಬೇಗನೆ ತಣ್ಣಗಾಗಲು ಬಯಸಿದ್ದರು. ತಕ್ಷಣ ತಣ್ಣೀರಿನಿಂದ ಪಾದ ತೊಳೆದರು. ಏಕಾಏಕಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಹೊರಗಿನ ಶಾಖವು 38 ° C ತಲುಪಿದಾಗ ಮತ್ತು ನೀವು ಮನೆಗೆ ಬಂದಾಗ, ತಣ್ಣೀರು ಕುಡಿಯಬೇಡಿ. ಉಗುರು ಬೆಚ್ಚಗಿನ ನೀರನ್ನು ಮಾತ್ರ ನಿಧಾನವಾಗಿ ಕುಡಿಯಿರಿ. ಬಿಸಿಲಿನಿಂದ ಮನೆಗೆ ಬಂದರೆ ತಕ್ಷಣವೇ ಕೈಕಾಲು ತೊಳೆಯಬೇಡಿ. ತೀರಾ ತಾಪಮಾನ ಇದ್ದಾಗ ತೊಳೆಯುವ ಅಥವಾ ಸ್ನಾನ ಮಾಡುವ ಮೊದಲು ಸ್ವಲ್ಪ ಸಮಯ ಕಾಯಿರಿ. ದೇಹದ ಉಷ್ಣತೆ ಒಮ್ಮೆಲೇ ತಣ್ಣದಾದರೆ ಸ್ಟ್ರೋಕ್‌ಗೆ ಒಳಗಾಗಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ.
ದಯವಿಟ್ಟು ಗಮನಿಸಿ: ದೇಹ ರಕ್ಷಣೆಗೆ ಈಗ ಮೊದಲ ಆದ್ಯತೆ ಹೀಗಾಗಿ, ಬಿಸಿ ತಿಂಗಳುಗಳಲ್ಲಿ ಅಥವಾ ನೀವು ತುಂಬಾ ದಣಿದಿದ್ದರೆ, ತಕ್ಷಣವೇ ತಣ್ಣನೆಯ ನೀರನ್ನು ಕುಡಿಯುವುದನ್ನು ತಪ್ಪಿಸಿ ಏಕೆಂದರೆ ಇದು ರಕ್ತನಾಳಗಳು ಅಥವಾ ರಕ್ತನಾಳಗಳನ್ನು ಕಿರಿದಾಗುವಂತೆ ಮಾಡುತ್ತದೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.
ನೀವಿರುವ ಸ್ಥಳದಲ್ಲಿ ಮಳೆ ನೀರು ಬಸಿದು ಹೋಗದಿದ್ದರೆ, ನೀವು ಸಾವಿರದ ಐನೂರು ಅಡಿ ಬೋರ್ ವೆಲ್ ಕೊರೆಸಿ ಏನು ಪ್ರಯೋಜನ? ನೀರು ಸಂರಕ್ಷಣೆಗೆ ಮೊದಲ ಆದ್ಯತೆ ನೀಡಲೇಬೇಕಿದೆ. ಇದಕ್ಕಾಗಿ ಕ್ರಮಗಳು ಅಗತ್ಯವಿದೆ. ರಸ್ತೆ ಅಗಲೀಕರಣಕ್ಕೆ ಮುಂದಿನ ಐದು ವರ್ಷಗಳಲ್ಲಿ ಎಲ್ಲೆಲ್ಲಿ ಮರ ಕಡಿಯಬೇಕು ಅನ್ನುವುದು ಮೊದಲ ಸಿದ್ಧತೆಯಾದರೆ, ಉಳಿದ ಕಡೆ ಮರಗಳನ್ನು ಉಳಿಸುವುದು ಹಾಗೂ ಬೆಳೆಸುವ ಕೆಲಸ ತಕ್ಷಣ ಜಾರಿಯಾಗಲಿ. ಬಯಲುಸೀಮೆಗೆ “ರೈನ್ ಟ್ರೀ” ಅಥವಾ ಅಂಟಿನ ಕಾಯಿ ಬಿಡುವ ಮರ ಒಳ್ಳೇಯದು. ಅತಿ ಕಡಿಮೆ ನೀರಿದ್ದರೂ ಬೆಳೆದು, ವಿಶಾಲವಾಗಿ ಹರಡಿಕೊಳ್ಳುತ್ತದೆ. ಬಿಳಲು ಬಿಡದ ಆಲ, ಹುಣಸೆ, ಅರಳಿ ಇನ್ನೂ ಹಲವು ತಳಿಯ ಮರಗಳು ನಗರ ಪ್ರದೇಶಕ್ಕೆ ಬೆಳೆಸಲಿಕ್ಕೆ ಅಂತಲೇ ಇವೆ.
ಮರಗಳನ್ನ ನೋಡಿಕೊಳ್ಳುವ ಜವಾಬ್ದಾರಿ ನಗರ ಪಾಲಿಕೆಯದು, ಪುರಸಭೆಯದು ಇಲ್ಲಾ ಗ್ರಾಮ ಪಂಚಾಯತಿದಲ್ಲ. ಜನ ಅವುಗಳನ್ನ ಪಾಲನೆ ಪೋಷಣೆ ಮಾಡಬೇಕು. ಏಕೆಂದರೆ, ದಾರಿಗಳಲ್ಲಿ ಅಡ್ಡಾಡೋರು, ಸುಸ್ತಾಗೋರು, ಮೂರ್ಛೆ ಹೋಗೋರು, ಸಾಯೋರು ಸಾಮಾನ್ಯ ಜನ. ಕಾರ್ಪೊರೇಟರುಗಳು ಮಿನಿಸ್ಟರುಗಳು ಏಸಿ ಕಾರುಗಳಲ್ಲಿ ಅಡ್ಡಾಡುತ್ತಾರೆ. ಆಫೀಸರುಗಳು ಏಸಿಯಲ್ಲೋ ಫ್ಯಾನಿನಡಿಯಲ್ಲೋ ಕುಳಿತು ಬಿಸಿಲು ತಾಕದಂತೆ ಕೆಲಸ ಮಾಡುತ್ತಾರೆ. ಯಾರಿಗೆ ಬೇಕಾಗಿದೆಯೋ ಅವರೇ ಕೈ ಕೆಸರು ಮಾಡಿಕೊಳ್ಳಬೇಕು. ತೆಂಗಿನಕಾಯಿ ಮಾರುವವರು, ತರಕಾರಿ ಮಾರುವವರು, ಸಂತೆಗಳಲ್ಲಿ ಮಾರುವವರು ಮತ್ತು ಇನ್ನಿತರೆ ಬೀದಿ ಬದಿ ಮಾರಾಟಗಾರರು “ಸಿಂಗಾಪುರ ಚೆರಿ” ಮರಗಳನ್ನ ಹಾಕಿ. ಅತಿ ಕಡಿಮೆ ಸಮಯ ಅಂದ್ರೆ ಎರಡು ವರ್ಷಗಳಲ್ಲೇ ಐದು ಅಡಿ ಎತ್ತರಕ್ಕೆ ಬೆಳೆದು ಛತ್ರಿಯಂತೆ ಅಗಲವಾಗುತ್ತದೆ.
ಕೃಷಿ ಭೂಮಿಯಲ್ಲಿ ಸಾಕಷ್ಟು ಗಿಡ ನೆಡಿ. ಅನಿವಾರ್ಯವಾದರೆ ಒಂದು ಮರ ಕಡಿದರೆ 10 ಗಿಡ ನೆಡುವ ಯೋಜನೆ ಹಾಕಿಕೊಳ್ಳಿ. ನೀರಿನ ಬಳಕೆಯಲ್ಲಿ ಮಿತಿ ಇರಲಿ ಹಾಗೂ ತೀರಾ ಅನಿವಾರ್ಯವಾದರೆ ಕೊಳವೆ ಬಾವಿ ತೆಗೆಯಿರಿ. ಅನುಕೂಲ ಇದ್ದವರು ಕೆರೆ, ಬಾವಿಯನ್ನೇ ತೋಡಿದರೆ ಉತ್ತಮ.
(ಮೂಲ ಬರಹಗಾರರ ಮಾಹಿತಿ ಇಲ್ಲ-ಸಂಪಾದನೆ ದ ರೂರಲ್ ಮಿರರ್.ಕಾಂ ಕಾಳಜಿ )
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…