ತಂಬಾಕು ನಿಯಂತ್ರಣದಲ್ಲಿ ಬೆಂಗಳೂರು ಸಾಧನೆ | ಡಬ್ಲ್ಯುಎಚ್ಒನಿಂದ 1.23 ಕೋಟಿ ರೂ. ಬಹುಮಾನ

Advertisement

ತಂಬಾಕು ನಿಯಂತ್ರಣದಿಂದ ಸಾಂಕ್ರಾಮಿಕ ರೋಗಗಳಲ್ಲದ ಮತ್ತು ಗಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಧನೆ ಮಾಡಿ ಗುರುತಿಸಲ್ಪಟ್ಟ ಐದು ಜಾಗತಿಕ ನಗರಗಳಲ್ಲಿ ಬೆಂಗಳೂರು ಕೂಡ ಸ್ಥಾನ ಪಡೆದುಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ಜಾಗತಿಕ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಬೆಂಗಳೂರಿಗೆ 1,50,000 ಡಾಲರ್​ ಮೊತ್ತದ ಬಹುಮಾನ ಲಭಿಸಿದೆ.

Advertisement

ಉರುಗ್ವೆಯ ಮಾಂಟೆವಿಡಿಯೊ ಅವರೊಂದಿಗೆ 2023 ರ ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿಯನ್ನು ಬೆಂಗಳೂರು ಬುಧವಾರ ಪಡೆದುಕೊಂಡಿದೆ. ಮೆಕ್ಸಿಕೊ ನಗರ, ಕೆನಡಾದ ವ್ಯಾಂಕೋವರ್ ಮತ್ತು ಗ್ರೀಸ್​ನ ಅಥೆನ್ಸ್​ನ ಲಂಡನ್​ನಲ್ಲಿ ನಡೆದ ಆರೋಗ್ಯಕರ ನಗರ ಶೃಂಗಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

Advertisement
Advertisement

ಜನರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿದ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಯಲು ಸಮರ್ಥನೀಯ ಮತ್ತು ಶಾಶತ್ವವಾದ ಉಪಕ್ರಮಗಳನ್ನು ಕೈಗೊಂಡ ನಗರಗಳನ್ನು ಗುರುತಿಸಲಾಗಿದೆ.

Advertisement

ಕರ್ನಾಟಕ ರಾಜಧಾನಿ ಬೆಂಗಳೂರು ತಂಬಾಕು ನಿಯಂತ್ರಣ, ಅದರಲ್ಲಿಯೂ ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ ಮತ್ತು ಸಾರ್ವಜನಿಕ ಧೂಮಪಾನ ನಿಷೇಧಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಆ ದೇಶಗಳ ಅನುಸಾರ ಸುಧಾರಿಸಲು ಪ್ರಯತ್ನಗಳಿಗಾಗಿ ಬೆಂಗಳೂರಿಗೆ ಪ್ರಶಸ್ತಿ ಲಭಿಸಿದೆ.

Advertisement

ಪಾಲುದಾರಿಕೆಯಲ್ಲಿ ವಿಶ್ವದಾದ್ಯಂತ ಮೇಯರ್‌ಗಳ ಬೆಂಬಲ : ಮೇಯರ್‌ಗಳು ತಮ್ಮ ನಾಗರಿಕರ ಆರೋಗ್ಯವನ್ನು ಹೇಗೆ ರಕ್ಷಿಸಲು ಪ್ರಬಲ ಪ್ರಗತಿಯನ್ನು ಸಾಧಿಸಬಹುದು ಎಂಬುದಕ್ಕೆ ಈ ಐದು ನಗರಗಳು ಸಾಕ್ಷಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ  ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಉತ್ತಮ ಆರೋಗ್ಯಕ್ಕೆ ಉತ್ತೇಜಿಸುವ ಮತ್ತು ಆರೋಗ್ಯ ರಕ್ಷಿಸುವ ನಗರಳನ್ನು ನಿರ್ಮಿಸಲು ವಿಶ್ವದಾದ್ಯಂತ ಮೇಯರ್‌ಗಳನ್ನು ಬೆಂಬಲಿಸುವ ಮೂಲಕ  ಪಾಲುದಾರಿಕೆಯಲ್ಲಿ ಕೆಲಸ ಮಾಡಲು WHO ಬದ್ಧವಾಗಿದೆ ಎಂದು ತಿಳಿಸಿದೆ.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ತಂಬಾಕು ನಿಯಂತ್ರಣದಲ್ಲಿ ಬೆಂಗಳೂರು ಸಾಧನೆ | ಡಬ್ಲ್ಯುಎಚ್ಒನಿಂದ 1.23 ಕೋಟಿ ರೂ. ಬಹುಮಾನ"

Leave a comment

Your email address will not be published.


*