ಮಲೆನಾಡು ಜನರಿಗೆ ಭೂಮಿ ಹುಣ್ಣಿಮೆ ಸಂತಸದ ಹಬ್ಬ. ತೆನೆ ತುಂಬಿದ ಭತ್ತಕ್ಕೆ ಸೀಮಂತ ಶಾಸ್ತ್ರ ಮಾಡುವ ಈ ಸಾಂಪ್ರದಾಯಿಕ ಆಚರಣೆಯನ್ನು ಅನ್ನದಾತರು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿಯೊಂದು ರೈತಾಪಿ ಕುಟುಂಬವೂ ಭೂಮಿ ಹುಣ್ಣಿಮೆ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತದೆ.
ಶಿವಮೊಗ್ಗ ಜಿಲ್ಲೆ ರೈತರಿಗೆ ಭೂಮಿ ಹುಣ್ಣಿಮೆ ಹಬ್ಬ ಮದುವೆ ಸಮಾರಂಭದಷ್ಟೇ ಸಂಭ್ರಮದಿಂದ ಕೂಡಿದೆ. ಕುಟುಂಬದ ಎಲ್ಲ ಸದಸ್ಯರು ಜೊತೆಗೂಡಿ ಈ ಹಬ್ಬವನ್ನು ಸಂತಸದಿಂದ ಆಚರಿಸುತ್ತಾರೆ. ಭೂಮಿ ಹುಣ್ಣಿಮೆ ಅನಾದಿಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯ. ಇದು ರೈತರು ಮತ್ತು ಪ್ರಕೃತಿಯ ನಡುವಿನ ಅವಿನಾಭಾ ಬಾಂಧವ್ಯದ ಪ್ರತೀಕವಾಗಿದೆ. ನಿತ್ಯ ನೆಮ್ಮದಿಯ ಜೀವನ ಸಾಗಿಸಲು ಅನ್ನ ನೀಡುವ ಭೂ ತಾಯಿಗೆ ಕೃತಜ್ಞತೆ ಅರ್ಪಿಸುವುದು ಈ ಹಬ್ಬದ ವಿಶೇಷ. ಸಾಕಷ್ಟು ಮಂದಿ ಇಂದಿಗೂ ಕೃಷಿ ಮೇಲೆ ಅವಲಂಬಿತರಾಗಿದ್ದು, ಅಶ್ವಯುಜ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನದಂದು ಭೂದೇವಿಯನ್ನು ಪೂಜಿರಿ, ಉಡಿ ತುಂಬಿ, ಸಮೃದ್ಧಿಯಾಗಿ ಫಸಲು ನೀಡುವಂತೆ ಪ್ರಾರ್ಥಿಸುವುದು ಈ ಹಬ್ಬದ ವಿಶೇಷತೆಗಳಲ್ಲಿ ಒಂದು.
ಹುಣ್ಣಿಮೆಯ ದಿನ ಬೆಳಗ್ಗೆ ರೈತ ಕುಟುಂಬಗಲು ಹಾಲು ತುಂಬಿಕೊಂಡ ಫಸಲಿಗೆ ಬಲೆ, ಬಿಚ್ಚೋಲೆ, ಮಾಂಗಲ್ಯ ಮುಂತಾದ ಆಭರಣಗಳನ್ನು ತೊಡಿಸಿ ಪೂಜಿಸುತ್ತಾರೆ. ಪೂಜೆ ನಂತರ ತಾವು ತೆಗೆದುಕೊಂಡು ಹೋಗಿರುವ ಅನ್ನವನ್ನು ಭೂದೇವಿಗೆ ಅರ್ಪಿಸಿ, ಮೊಸರುಬುತ್ತಿ, ಚಿತ್ರಾನ್ನ, ಕಡುಬು, ಕಜ್ಜಾಯ ಮುಂತಾದ ಭಕ್ಷ್ಯಗಳನ್ನು ನೈವೇದ್ಯ ಅರ್ಪಿಸಿ, ಪ್ರಸಾದ ಸ್ವೀಕರಿಸುತ್ತಾರೆ. ಪ್ರಾಣಿಪಕ್ಷಿಗಳಿಗೂ ಪ್ರಸಾದ ನೀಡುತ್ತಾರೆ. ಅದಕ್ಕೂ ಮುನ್ನ ಭೂಮಿ ಹುಣ್ಣಿಮೆಯ ಬುಟ್ಟಿ ತಯಾರಿಸಿ, ಅದಕ್ಕೆ ಚಿತ್ತಾರ ಬಿಡಿಸಿ, ಗದ್ದೆಗೆ ತೆರಳಿ ವಿಶೇಷ ಸೇವೆ ಸಲ್ಲಿಸುತ್ತಾರೆ. ಹರವೆ ಸೊಪ್ಪು, ಹೀರೇಕಾಯಿ, ಕುಂಬಳಕಾಯಿಯನ್ನು ಕೊಚ್ಚಿ ಗದ್ದೆಯಲ್ಲಿ ಬೀರಿ ಪೂಜೆ ಸಲ್ಲಿಸುತ್ತಾರೆ. ಇಂತಹ ವಿಶೇಷ ಸಡಗರ, ಸಂಭ್ರಮದ ಹಬ್ಬವನ್ನು ಶಿವಮೊಗ್ಗ ಜಿಲ್ಲೆಯಾದ್ಯಂತ ಆಚರಿಸಲಾಯಿತು.
ಮಲೆನಾಡು ಭಾಗದ ಜನರಿಗೆ ಭೂಮಿ ಹುಣ್ಣಿಮೆ ಅತ್ಯಂತ ಪವಿತ್ರ ಹಬ್ಬವಾಗಿದ್ದು, ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ರೈತ ವಿ.ಟಿ. ಸ್ವಾಮಿ. ಪ್ರತಿವರ್ಷ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ದೇವರನ್ನು ಪ್ರಾರ್ಥಿಸಿ, ತೆನೆ ತುಂಬಿದ ಬೆಳೆಗಳನ್ನು ಪೂಜಿಸಿ, ಮುಂಬರುವ ದಿನಗಳಲ್ಲಿ ಸಮೃದ್ಧಿ ಬರಲಿ ಎಂದು ರೈತರು ಕೋರುತ್ತಾರೆ ಎನ್ನುತ್ತಾರೆ ಕೃಷಿಕರಾದ ಭಾರತೀ ಬಾಯಿ ಪುರೋಹಿತ್. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…