Advertisement
MIRROR FOCUS

ಉಗ್ರರ ಅಟ್ಟಹಾಸಕ್ಕೆ ಕೊನೆ ಹಾಡಿದೆ ಬಿಜೆಪಿ ಸರ್ಕಾರ | ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ | ನರೇಂದ್ರ ಮೋದಿ

Share

ಒಂದು ಕಾಲದಲ್ಲಿ ಭಾರತದಲ್ಲಿ(India) ಉಗ್ರರ(Terrorist) ಅಟ್ಟಹಾಸಕ್ಕೆ ಕೊನೆಯೇ ಇರಲಿಲ್ಲ. ಆದರೆ  ಇದೀಗ  ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಋಷಿಕೇಶದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ದುರ್ಬಲ ಮತ್ತು ಅಸ್ಥಿರ ಸರ್ಕಾರಗಳಿದ್ದಾಗ ಶತ್ರುಗಳು ಲಾಭ ಪಡೆದರು ಮತ್ತು ಭಯೋತ್ಪಾದನೆ (Terrorism) ಹರಡಿತು. ಆದರೆ ಬಲಿಷ್ಠ ಮೋದಿ ಸರ್ಕಾರದ ಅಡಿಯಲ್ಲಿ ನಮ್ಮ ಪಡೆಗಳು ಅವರ ನೆಲದಲ್ಲೇ ಅವರನ್ನು ಹತ್ಯೆ ಮಾಡುತ್ತಿದೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿ (Pakistan) ಅಡಗಿರುವ ಭಾರತಕ್ಕೆ ಬೇಕಾಗಿರುವ ಉಗ್ರರು ನಿಗೂಢವಾಗಿ ಹತ್ಯೆಯಾಗುತ್ತಿದ್ದು, ಈ ಹತ್ಯೆಗಳ ಹಿಂದೆ ಭಾರತದ ಪಾತ್ರವಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.  ಭಾರತದಲ್ಲಿ ಸ್ಥಿರ ಸರ್ಕಾರದಿಂದ ಆಗುವ ಪ್ರಯೋಜನಗಳನ್ನು ಜನರು ನೋಡಿರುವುದರಿಂದ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಪ್ರತಿಧ್ವನಿ ದೇಶಾದ್ಯಂತ ಕೇಳಿಬರುತ್ತಿದೆ ಎಂದು ಹೇಳಿದರು.

ಹಿಂದಿನ ದುರ್ಬಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗಡಿಯಲ್ಲಿ ಮೂಲಸೌಕರ್ಯವನ್ನು ಬಲಪಡಿಸಲು ಸಾಧ್ಯವಾಗಲಿಲ್ಲ. ಆದರೆ ಈಗ ಗಡಿಯಲ್ಲಿ ರಸ್ತೆಗಳು ಮತ್ತು ಸುರಂಗಗಳನ್ನು ನಿರ್ಮಿಸಲಾಗುತ್ತಿದೆ ಎಂದು ದೂರಿದರು. ಉತ್ತರಾಖಂಡದ ಪೂಜ್ಯ ದೇವತೆಗಳಾದ ಮಾ ಧಾರಿ ದೇವಿ ಮತ್ತು ಜ್ವಾಲಾ ದೇವಿಯಿಂದ ಸಂಕೇತಿಸಲ್ಪಟ್ಟ ʼಶಕ್ತಿʼ ಅನ್ನು ತೊಡೆದುಹಾಕುವ ಬಗ್ಗೆ ಮಾತನಾಡುವ ಕಾಂಗ್ರೆಸ್‌ಗೆ ಉತ್ತರಾಖಂಡದ ಜನರು ತಕ್ಕ ಉತ್ತರವನ್ನು ನೀಡಬೇಕೆಂದು ಅವರು ಮನವಿ ಮಾಡಿದರು.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 01-10-2026 | ಕರ್ನಾಟಕದಲ್ಲಿ ಮತ್ತೆ ಮಳೆ ಇಳಿಕೆ – ಕಾರಣವೇನು?

ಉತ್ತರ ಭಾರತದ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದ ಪ್ರಬಲ ಚಂಡಮಾರುತಗಳ ಪರಿಣಾಮ…

2 hours ago

ಹೊಸ ಅಡಿಕೆ ಧಾರಣೆ 350 ಫಿಕ್ಸ್ – ಆರಂಭಿಕ ಧಾರಣೆಯೇ ಆಮದು ದರಕ್ಕಿಂತ ಕಡಿಮೆ..!

ಹೊಸ ಅಡಿಕೆಯ ಆರಂಭಿಕ ಧಾರಣೆ ₹330–350ಕ್ಕೆ ನಿಗದಿಯಾಗಿದ್ದು, ಆಮದು ಅಡಿಕೆಗೆ ಇರುವ ₹351ರ…

3 hours ago

ರಿಲಯನ್ಸ್ ಫೌಂಡೇಶನ್ ಪದವಿ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಪದವಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ…

7 hours ago

ರೈತನ ಹೊಲದಿಂದ ನಿಮ್ಮ ತಟ್ಟೆಯವರೆಗೆ… AI ಬರಲಿದೆ..!

ಕರ್ನಾಟಕದಲ್ಲಿ ಬೀಜದಿಂದ ಗ್ರಾಹಕರ ತಟ್ಟೆಯವರೆಗೆ ಕೃಷಿ ಉತ್ಪನ್ನದ ಪಯಣವನ್ನು ಪತ್ತೆಹಚ್ಚಲು AI ಆಧಾರಿತ…

8 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…

16 hours ago

ಅಡಿಕೆ ವಹಿವಾಟಿನ ಮೇಲೆ ಹೆಚ್ಚಿದ ಕಣ್ಗಾವಲು..!, ಗಮನ ಸೆಳೆದ ಪ್ರತ್ಯೇಕ ಮೂರು ಘಟನೆಗಳು

ಅಸ್ಸಾಂನಲ್ಲಿ 5.74 ಟನ್ ಅಡಿಕೆ ವಶ, ಕೇರಳದಲ್ಲಿ 380 ಚೀಲ ಅಡಿಕೆ ಬಿಡುಗಡೆಗೆ…

18 hours ago