Advertisement
Opinion

ಬಿಜೆಪಿ ಸ್ಪಷ್ಟ ಬಹುಮತ ಗಳಿಸಿಲ್ಲ……ಕಾರಣವೇನು..?

Share

ಬಿಜೆಪಿ(BJP) ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ(Power) ಏರಬೇಕಾಗಿತ್ತು. ಕಾರಣ ಬಹಳ ಇತ್ತು, ಆದರೆ 240 ಸೀಟುಗಳನ್ನು ಮಾತ್ರ ಗಳಿಸಿದೆ. ಕಾರಣ‌ ಏನು? ಫಸ್ಟ್ ಆಫ್ ಆಲ್ ಬಿಜೆಪಿ ಸ್ಪರ್ಧಿಸಿದ ಕ್ಷೇತ್ರಗಳೇ ಕೇವಲ 441. ಉಳಿದ 100 ಕ್ಕೂ ಹೆಚ್ಚು ಸ್ಥಾನಗಳನ್ನು ಆಂಧ್ರ ಪ್ರದೇಶದ(Andra Pradesh) ಚಂದ್ರಬಾಬು ನಾಯ್ಡುರ(Chandrababu Naidu) ತೆಲುಗುದೇಶಂ(Telugudesham), ಬಿಹಾರದ(Bihar) ನಿತೀಶ್ ಕುಮಾರ್ ರ(Nitish Kumar) ಜೆಡಿಯು(JDU), ಮಹಾರಾಷ್ಟ್ರದ(Maharashtra) ಏಕನಾಥ ಶಿಂಧೆಯವರ(Ekanath Shinde) ಶಿವಸೇನೆ(ShivSena) ಸೇರಿದಂತೆ ಎನ್.ಡಿ.ಎಯ(NDA) ಇತರ 25 ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿತ್ತು. ಅದರಲ್ಲಿ 50 ಕ್ಕೂ ಹೆಚ್ಚು ಸೀಟುಗಳನ್ನು ಅವು ಗೆದ್ದುಕೊಂಡಿವೆ. (ಗೆಲುವಿನ ಶೇಕಡಾವಾರು (50%)

Advertisement
Advertisement

ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿದ 441 ಕ್ಷೇತ್ರಗಳಲ್ಲಿ 240 ರಲ್ಲಿ ಗೆದ್ದಿದೆ. (ಗೆಲುವಿನ ಶೇಕಡಾವಾರು 54%) ಅದರಲ್ಲಿ ರಾಜ್ಯವಾರು ಸಾಧನೆ ಹೀಗಿದೆ.. ಮಧ್ಯ ಪ್ರದೇಶ (29/29) ಗುಜರಾತ್ (25/26) ಓಡಿಸಾ (20/21) ದೆಹಲಿ (7/7) ಅಸ್ಸಾಂ (9/11) ಛತ್ತೀಸ್ ಘಡ (10/11) ಉತ್ತರಾಖಂಡ (5/5) ಹಿಮಾಚಲ ಪ್ರದೇಶ (4/4) ಅರುಣಾಚಲ ಪ್ರದೇಶ (2/2) ಜಮ್ಮು ಕಾಶ್ಮೀರ (2/2) ತ್ರಿಪುರಾ‌(2/2) ಅಂಡಾಮಾನ್ (1/1) ಆಲ್ ಮೋಸ್ಟ್ ಆಲ್ ಕ್ಲೀನ್ ಸ್ವೀಪ್! ಕರ್ನಾಟಕ (17/28) ಬಿಹಾರ (12/17) ತೆಲಂಗಾಣ (8/17) ಜಾರ್ಖಂಡ್ (8/13) ಹರ್ಯಾಣ (5/10) ಆಂಧ್ರಪ್ರದೇಶ (3/6) ಇಲ್ಲೂ ಕೂಡಾ ಕಳಪೆ ಸಾಧನೆ ಏನಿಲ್ಲ. ಇನ್ನು ದಾದ್ರಾ (1/2) ಗೋವಾ (1/2) ಚಂಡೀಗಢ (0/1) ಲಡಾಕ್ (0/1) ಮಣಿಪುರ (0/1) ಮಿಜೋರಾಂ (0/1) ಪುದುಚೇರಿ (0/1) ಸಿಕ್ಕಿಂ (0/1) ಸಂಖ್ಯೆಯ ದೃಷ್ಟಿಯಿಂದ ಅಷ್ಟೇನೂ ಮಹತ್ವದ್ದಲ್ಲ. ತಮಿಳುನಾಡು (0/23) ಕೇರಳ (1/16) ಪಂಜಾಬ್ (0/13) ಗಳು ಮುಂಚಿಂದಲೂ ಲಿಸ್ಟ್ ಲಿ ಇರಲಿಲ್ಲ.

Advertisement

ಆದರೆ ಒಳ ಏಟು ಬಿದ್ದಿರುವುದು ಎಲ್ಲಿ ಅಂದರೆ…. ಉತ್ತರ ಪ್ರದೇಶ (33/75) ಪಶ್ಚಿಮ ಬಂಗಾಳ (12/42) ರಾಜಸ್ತಾನ (14/25) ಮಹಾರಾಷ್ಟ್ರ (9/28) ಈ ನಾಲ್ಕೂ ರಾಜ್ಯಗಳ 40 ಸೀಟುಗಳು ಕೈಕೊಟ್ಟವು. ಉತ್ತರ ಪ್ರದೇಶದಲ್ಲಿ ಇನ್ನೂ 20 ಸೀಟುಗಳು ಪಶ್ಚಿಮ ಬಂಗಾಳದಲ್ಲಿ ಇನ್ನೂ 10 ಸೀಟುಗಳು ರಾಜಸ್ತಾನದಲ್ಲಿ ಇನ್ನೂ 5 ಸೀಟುಗಳು ಮಹಾರಾಷ್ಟ್ರದಲ್ಲಿ ಇನ್ನೂ 5 ಸೀಟುಗಳು ಒಟ್ಟು 40 ಸೀಟುಗಳು ಬರಲೇಬೇಕಿತ್ತು. ಈ ನಾಲ್ಕು ರಾಜ್ಯಗಳ ಈ ಒಳ ಏಟಿಗೆ ಕಾರಣವೇನು? ಮುಸ್ಲಿಂ ಮತ ಧ್ರುವೀಕರಣ ಮತ್ತು ಇಂಡಿ ಒಕ್ಕೂಟದ ಕರಾರುವಕ್ಕಾದ ಸೀಟು ಹಂಚಿಕೆ ಲೆಕ್ಕಾಚಾರ ಮತ್ತು ಮೋದಿ ವಿರೋಧೀ ಶಕ್ತಿಗಳ ಒಗ್ಗಟ್ಟನ್ನು ಹೊರತುಪಡಿಸಿಯೂ ಬೇರೆ ಏನೋ ಕಾರಣಗಳು ಇರುವ ಅನುಮಾನ ಬರುತ್ತದೆ.

ಬರಹ :
ನಿತ್ಯಾನಂದ ವಿವೇಕವಂಶಿ
, ಸ್ವತಂತ್ರ ಚಿಂತಕ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ವರ್ಷಪೂರ್ತಿ ಜನರಿಗೆ ಮಾವು, ಹಲಸು..! | ಆಹಾರ ಭದ್ರತೆಯ ಕಡೆಗೆ ಹೆಜ್ಜೆ | ಹೊಸ ರೀತಿಯ ಹಣ್ಣುಗಳ ಪರಿಚಯಕ್ಕೆ ಇಳಿದ ಬಾಂಗ್ಲಾದೇಶ |

ಹಣ್ಣು ಕೃಷಿಯ ಕಡಗೆ ಪ್ರಪಂಚದ ಹಲವು ಕಡೆ ಆದ್ಯತೆ ನೀಡಲಾಗುತ್ತಿದೆ. ಭಾರತವೂ ಈ…

11 hours ago

ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರಿಗೆ ಪುತ್ತೂರು ‘ಗೋಪಣ್ಣ’ ಸ್ಮೃತಿ ಗೌರವ ಪ್ರದಾನ

ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ-ಗೀತಾ ದಂಪತಿಗೆ ‘ಗೋಪಣ್ಣ ಸ್ಮೃತಿ’ ಗೌರವವನ್ನು ಪ್ರದಾನಿಸಲಾಯಿತು.

17 hours ago

ಹವಾಮಾನ ವರದಿ | 07-07-2024 | ರಾಜ್ಯದ ಕೆಲವು ಕಡೆ ಸಾಮಾನ್ಯ, ಕೆಲವು ಕಡೆ ಉತ್ತಮ ಮಳೆ ನಿರೀಕ್ಷೆ |

ಜುಲೈ 9 ಅಥವಾ 10ರಿಂದ ದಕ್ಷಿಣ ಕರಾವಳಿ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ…

17 hours ago

ಬೆಳೆಗಾರರೇ, ಅಡಿಕೆ ಹಳದಿ ಎಲೆರೋಗದ ಕಾರಣದಿಂದ ಆತ್ಮಹತ್ಯೆ ಮಾಡಬೇಡಿ | ಹಾಗೆಂದು ಹೊಸ ಹೊಸ ಗೊಬ್ಬರದ ಆಮಿಷಗಳಿಗೂ ಬಲಿಯಾಗಬೇಡಿ…!

ಅಡಿಕೆ ಬೆಳೆಗಾರರೊಬ್ಬರು ಅಡಿಕೆ ಹಳದಿ ಎಲೆರೋಗದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡರು. ಈ ಮೂಲಕ…

20 hours ago

ಡ್ರಾಗನ್‌ ಫ್ರುಟ್‌ ಬೆಳೆದು ಮಾರುಕಟ್ಟೆ ಕಂಡುಕೊಂಡ ಕೃಷಿಕ | ಸಣ್ಣ ರೈತರು ಮಾರುಕಟ್ಟೆಗೆ ಚಿಂತಿಸಬೇಕಿಲ್ಲ…!

ಡ್ರಾಗನ್‌ ಫ್ರುಟ್‌ ಕೃಷಿ ಮಾಡಿ ಸ್ವತ: ಮಾರುಕಟ್ಟೆಯನ್ನೂ ಕಂಡುಕೊಂಡು ಮಾರಾಟವನ್ನೂ ಮಾಡುವ ಮೂಲಕ…

1 day ago

ಮಳೆ ಹಿನ್ನೆಲೆಯಲ್ಲಿ ಗಿರಿಶಿಖರಗಳ ಟ್ರೆಕ್ಕಿಂಗ್ ನಿಷೇಧ | ನೀರಿಗೆ ಇಳಿಯದಂತೆ ಜಿಲ್ಲಾಧಿಕಾರಿ ಆದೇಶ |

ಮುಂಗಾರು ಮಳೆ ಚುರುಕಾಗಿರುವುದರಿಂದ ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪದ ಘಟನೆಗಳು ಸಂಭವಿಸುತ್ತಿರುತ್ತವೆ. ಸಾರ್ವಜನಿಕರ ಹಿತಾಸಕ್ತಿಯನ್ನು…

1 day ago