Advertisement
MIRROR FOCUS

ವಿಶ್ವ ಪರಿಸರ ದಿನ | ನೆಲದ ನಡೆ ಅರ್ಥಮಾಡಿಕೊಂಡು ಮರ ಗಿಡ ಬೆಳೆಸುವ ಕಾಯಕ ಎಲ್ಲೆಡೆ ಆಗಲಿ

Share

ಕಾಡಿನ ಬೀಜ(Tree seeds) ಸಂಗ್ರಹಿಸಿ ಅರಣ್ಯ(Forest) ನರ್ಸರಿಗಳಲ್ಲಿ(Nursery) ಸಸಿ(Plant) ಬೆಳೆಸುವುದೇ ಜೀವ ಕಾಯಕದ ಭಾಗವಾಗಿ ಪ್ರತೀ ವರ್ಷ ಲಕ್ಷಾಂತರ ಸಸಿ ಬೆಳೆಸುವ ಎಲ್ಲ ಬಂಧುಗಳಿಗೆ ವಿಶ್ವ ಪರಿಸರ ದಿನದ ಮೊದಲ ಶುಭಾಶಯಗಳು(World Environment Day). ಇಡೀ ದೇಶಕ್ಕೆ ಮಾದರಿ ಆಗುವಂತೆ ಕೇವಲ 300ಮಿಲಿ ಮೀಟರ್ ಮಳೆ(Rain) ಸುರಿಯುವ ಚಿತ್ರದುರ್ಗ(Chitradurga) ರಾಂಪುರ ಬಾಂಡ್ರಾವಿಯಲ್ಲಿ ಸಾವಿರಾರು ಎಕರೆ ಕಲ್ಲು ಗುಡ್ಡವನ್ನು ಕಮರ ಸೇರಿದಂತೆ ವಿವಿಧ ಸಸ್ಯ ಸಂಕುಲಗಳನ್ನು ರಕ್ಷಣೆ ಮಾತ್ರದಿಂದ ಬೆಳೆಸಿದ ಫಾರೆಸ್ಟ್ ಗಾರ್ಡ್ ಶ್ರೀ ನಾಗಪ್ಪ ಜುಮ್ಮಣ್ಣ ಮೇಟಿಯವರಿಗೆ ಹಸಿರು ನಮನಗಳು.  ಈಗ ಇವರಿಲ್ಲ,. ಇವರ ಒಡನಾಟ, ಕಾಡು ಸುತ್ತಾಟದ ನೆನಪುಗಳು ಹಸಿರಾಗಿವೆ.

   

ಇಂದಿಗೆ ಸರಿಯಾಗಿ ಹತ್ತು ವರ್ಷಗಳ ಹಿಂದೆ ಪರಿಸರದ ದೇಸಿ ಜ್ಞಾನ ಹಂಚುವ ಕಾರ್ಯಕ್ಕೆ ನಮ್ಮ ಊರು ಕಳವೆಯಲ್ಲಿ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ ಗ್ರಾಮ ಅರಣ್ಯ ಸಮಿತಿ, ಕರ್ನಾಟಕ ಅರಣ್ಯ ಇಲಾಖೆ ಶಿರಸಿ ವಿಭಾಗ, ವಿವಿಧ ದಾನಿಗಳ ಸಹಾಯದಿಂದ ಆರಂಭವಾಯಿತು. ಈ ಹತ್ತು ವರ್ಷಗಳಲ್ಲಿ ಇಲ್ಲಿಗೆ ಬಂದು ಪರಿಸರದ ಮಾತು, ಪ್ರಾತ್ಯಕ್ಷಿಕೆ ವೀಕ್ಷಿಸಿದ ನಾಡಿನ ಲಕ್ಷಾಂತರ ಆಸಕ್ತರಿಗೆ, ನಿಮ್ಮ ಪರಿಸರ ಪ್ರೀತಿಗೆ ನಮನಗಳು. ಪರಿಸರ ಸಂರಕ್ಷಣೆ ಯಶಸ್ಸು ನಾವು ನೆಟ್ಟ ಗಿಡ ಮರವಾಗುವುದು ಮಾತ್ರವಲ್ಲ ಆ ಮರದ ಕೆಳಗಡೆ ನಾವು ನೆಟ್ಟ ಮರದ ಬೀಜಗಳಿಂದ ಸಸಿ ಜನಿಸುವುದು, ಆಗ ಅರಣ್ಯೀಕರಣದಲ್ಲಿ ಶಿಸ್ತಿನ ಸಾಲು ತಪ್ಪಿ ಕಾಡು ಕೂಡುವ ಕ್ರಿಯೆ ಮಹತ್ವ ಪಡೆಯುತ್ತದೆ.

ನಮ್ಮ ಕಳವೆ ಗ್ರಾಮದಲ್ಲಿ ಇಂದಿಗೆ 20ವರ್ಷಗಳ ಹಿಂದೆ ಹಾಗೂ ಈಗ ಕಾಡು ಹೇಗಿದೆ? ಶಿರಸಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಅಜ್ಜಯ್ಯ ಅವರು ಕಳಿಸಿದ ಅರಣ್ಯ ಅಭಿವೃದ್ಧಿಯ ದಾಖಲೆ ಚಿತ್ರ ಇಲ್ಲಿದೆ, ಹಸಿರು ವಿಸ್ತರಿಸಿದೆ. ಇದಕ್ಕೆ ಕಾರಣಕರ್ತರಾದ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ, ಕಾಡಿಗೆ ಬೆಂಕಿ ಬಿದ್ದರೆ ತಕ್ಷಣ ಜಾಗೃತರಾಗಿ ಸಂರಕ್ಷಣೆಯ ಜಾಗೃತಿಗೆ ಮುಖ್ಯ ಕಾರಣಕರ್ತರಾದ ಗ್ರಾಮಸ್ಥರಿಗೆ ವಂದನೆಗಳು.
ನೆಲದ ನಡೆ ಅರ್ಥಮಾಡಿಕೊಂಡು ಮರ ಗಿಡ ಬೆಳೆಸುವ ಕಾಯಕ ಎಲ್ಲೆಡೆ ಮಾಡೋಣ, ಅನುಭವಗಳಿಂದ ಪಾಠ ಕಲಿತು ಅದನ್ನು ಅಳವಡಿಸಿ ಮುಂದೆ ಸಾಗೋಣ. ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು
ಬರಹ :
ಶಿವಾನಂದ ಕಳವೆ,
ಪರಿಸರ ಲೇಖಕರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

12 hours ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

1 day ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

2 days ago

ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ

ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…

2 days ago